ಗೋಣಿಕೊಪ್ಪ, ಫೆ. ೧೮: ಗೋಣಿಕೊಪ್ಪದಲ್ಲಿ ತಾ. ೨೨ರಂದು ಹಿಂದೂ ಸಂಗಮ ಕಾರ್ಯಕ್ರಮ ನಡೆಯಲಿದೆ ಎಂದು ಸಂಯೋಜಕ ಎಂ.ಎಸ್. ಸುಬ್ರಮಣಿ ಮಾಹಿತಿ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಉತ್ಪನ್ನ ಮಾರುಕಟ್ಟ ಸಮಿತಿಯ ಆವರಣದಿಂದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸಮಾವೇಶಗೊಳ್ಳಲಿದೆ. ಮೆರವಣಿಗೆಯಲ್ಲಿ ಡೊಳ್ಳುಕುಣಿತ, ಭಜನೆ ಕುಣಿತ, ಕೇರಳದ ಮಹಿಳೆಯರಿಂದ ಸಿಂಗಾರಿ ಮೇಳ, ಕೊಡವ ವಾಲಗ, ನಾಗರಹೊಳೆ ಬುಡಕಟ್ಟು ಸಮುದಾಯದವರ ನೃತ್ಯ, ಛದ್ಮವೇಷಗಳು, ಕೊಡಗಿನ ಉಮ್ಮತ್ತಾಟ್ ಸೇರಿದಂತೆ ಹಲವಾರು ಸಾಂಸ್ಕöÈತಿಕ ಮೇಳದೊಂದಿಗೆ ಮೆರವಣಿಗೆ ಸಾಗಲಿದೆ ಎಂದು ತಿಳಿಸಿದರು.

ಶೋಭಾಯಾತ್ರೆ ಬೆಳಿಗ್ಗೆ ೧೦ ಗಂಟೆಗೆ ಪ್ರಾರಂಭವಾಗಲಿದ್ದು, ನಂತರ ಸರ್ಕಾರಿ ಶಾಲಾ ಮೈದಾನದಲ್ಲಿ ಮಧ್ಯಾಹ್ನ ೧೨ ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಅಧ್ಯಕ್ಷತೆಯನ್ನು ಉದ್ಯಮಿ ಎಂ.ಪಿ. ಪ್ರಮೋದ್ ಕಾಮತ್ ವಹಿಸಲಿದ್ದು, ಅತಿಥಿಗಳಾಗಿ ಮಹೇಶ್ ಭಟ್, ಶಿಕ್ಷಕಿ ಬೆಂಜಾAಡ ರಶ್ಮಿ ದೇವಯ್ಯ ಭಾಗವಹಿಸಲಿದ್ದಾರೆ, ಸಭಾ ಕಾರ್ಯಕ್ರಮದಲ್ಲಿ ಸಾಂಸ್ಕöÈತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.

ಸ್ವದೇಶ ವಸ್ತುಗಳ ಬಳಕೆ, ಕುಟುಂಬದಲ್ಲಿ ಸುಸಂಸ್ಕöÈತ ವಾತಾವರಣ, ಸಮಾಜದಲ್ಲಿ ಸಾಮರಸ್ಯ ವಾತಾವರಣವನ್ನು ಹುಟ್ಟು ಹಾಕುವ ಪರಿಕಲ್ಪನೆಯೊಂದಿಗೆ ಹಿಂದುತ್ವವನ್ನು ಪ್ರಪಂಚದಲ್ಲಿಯೇ ಬಿತ್ತುವ ಚಿಂತನೆಯೊAದಿಗೆ ಶೋಭಾಯಾತ್ರೆ ನಡೆಯುತ್ತಿದೆ ಎಂದರು.

ಹಿಂದೂ ಸಂಗಮದ ಆರ್ಥಿಕ ಸಮಿತಿ ಸಂಯೋಜಕ ಗುಮ್ಮಟೀರ ಕಿಲನ್ ಗಣಪತಿ ಮಾತನಾಡಿ, ಹಿಂದೂಗಳ ಶಕ್ತಿ ಪ್ರದರ್ಶನಕ್ಕಾಗಿ ಮತ್ತು ಈ ದೇಶದ ಹಿಂದುತ್ವದ ಏಕತೆಗಾಗಿ ಸಾರುವ ಉದ್ದೇಶದೊಂದಿಗೆ ಶೋಭಾಯಾತ್ರೆ ಪ್ರತಿ ಗ್ರಾಮಗಳಲ್ಲಿಯೂ ಆಯೋಜನೆಗೊಳ್ಳುತ್ತಿದೆ. ರಾಜ್ಯದ ೩೬೦೦ ಗ್ರಾಮಗಳಲ್ಲಿ ಹಿಂದೂ ಸಂಘಟನೆಗಳಡಿಯಲ್ಲಿ ಹಿಂದುತ್ವವನ್ನು ಪ್ರತಿಪಾದಿಸುವ ಶೋಭಾಯಾತ್ರೆಗಳು ನಡೆದಿವೆ. ಆ ಪ್ರೇರಣೆಯೊಂದಿಗೆ ಗೋಣಿಕೊಪ್ಪದಲ್ಲಿಯೂ ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.

ಗೋಷ್ಠಿಯಲ್ಲಿ ಹಿಂದೂ ಸಂಗಮ ಸಾಂಸ್ಕöÈತಿಕ ಸಮಿತಿ ಸಂಯೋಜಕ ರಾಜೇಶ್ ಕೆ, ಆಯೋಜಕ ಸುರೇಶ್ ರೈ, ವೀರಾಜಪೇಟೆ ತಾಲೂಕು ಹಿಂದೂ ಸಂಗಮ ಸಮಿತಿ ಉಪಾಧ್ಯಕ್ಷ ಸೋಮಯ್ಯ ಉಪಸ್ಥಿತರಿದ್ದರು.