ಸುಂಟಿಕೊಪ್ಪ, ಫೆ. ೧೮: ಸುಂಟಿಕೊಪ್ಪ ಗ್ರಾಮ ದೇವರ ೭ನೇ ವರ್ಷದ ವಾರ್ಷಿಕ ಪೂಜೆ ತಾ. ೨೦ ರಂದು ನಡೆಯಲಿದೆ.

ಪಟ್ಟಣದ ೨ನೇ ವಿಭಾಗದಲ್ಲಿರುವ ಗ್ರಾಮದೇವರ ಬನದಲ್ಲಿ ೭ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವ ಸುಂಟಿಕೊಪ್ಪದ ವಿವಿಧ ದೇವಾಲಯಗಳಾದ ಶ್ರೀ ಚಾಮುಂಡೇಶ್ವರಿ ಮತ್ತು ಮುತ್ತಪ್ಪ ದೇವಸ್ಥಾನ ಸಮಿತಿ, ಶ್ರೀ ರಾಮ ಸೇವಾ ಸಮಿತಿ, ಶ್ರೀ ಪುರಂ ಅಯ್ಯಪ್ಪಸ್ವಾಮಿ ಕ್ಷೇತ್ರ ಸಮಿತಿ, ಶ್ರೀ ಗೌರಿಗಣೇಶೋತ್ಸವ ಸಮಿತಿ, ಶ್ರೀ ಮಸಣಿಕಮ್ಮ ದೇವಸ್ಥಾನ ಸಮಿತಿ, ವೃಕ್ಷೆÆÃದ್ಭವ ಶ್ರೀ ಮಹಾಗಣಪತಿ ದೇವಾಲಯ ಸಮಿತಿ, ಮಧುರಮ್ಮ ಬಡಾವಣೆ, ಸುಂಟಿಕೊಪ್ಪ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಸಮಿತಿ ಟಿಸಿಎಲ್, ಶ್ರೀ ಅಣ್ಣಪ್ಪ ದೇವಸ್ಥಾನ ಸಮಿತಿ ಶ್ರೀದೇವಿ, ಶ್ರೀ ಚಾಮುಂಡೇಶ್ವರಿ, ಶ್ರೀ ಮುತ್ತಪ್ಪ ಸೇವಾ ಸಮಿತಿ ಬಾಳೆಕಾಡು, ಶ್ರೀ ಕೊಡಂಗಲ್ಲೂರು ಕುರುಂಬ ಭಗವತಿ ದೇವಾಲಯ ಗದ್ದೆಹಳ್ಳ, ಶ್ರೀ ನಾಗದೇವತೆ ದೇವಸ್ಥಾನ ಮಧುರಮ್ಮ ಬಡಾವಣೆ, ಶ್ರೀ ಮಳೂರು ಬೆಳ್ಳಾರಿಕಮ್ಮ ದೇವಾಲಯ ಸಮಿತಿ, ಶ್ರೀ ಬಸವೇಶ್ವರ ದೇವಾಲಯ ಸಮಿತಿ ಗದ್ದೆಹಳ್ಳ ಸಹಭಾಗಿತ್ವದಲ್ಲಿ ನಡೆಯಲಿದೆ. ಸ್ಥಳ ಶುದ್ಧಿ ಕಲಶ ಬೆಳಿಗ್ಗೆ ೭ ರಿಂದ ೮ ರವರೆಗೆ, ೮.೩೦ ಕ್ಕೆ ಮಹಾಮಂಗಳಾರತಿ ನಡೆಯಲಿದೆ. ೯ ರಿಂದ ೧೦ ಗಂಟೆಯವರೆಗೆ ಹರಕೆ ಸಮರ್ಪಣೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಎ. ಶ್ರೀಧರ್ ಕುಮಾರ್ ಮತ್ತು ಆಡಳಿತ ಮಂಡಳಿಯವರು ತಿಳಿಸಿದ್ದಾರೆ.