ಕೋವರ್‌ಕೊಲ್ಲಿ ಇಂದ್ರೇಶ್

ಬೆಂಗಳೂರು, ಫೆ. ೧೬: ಭಾರತ ಮತ್ತು ಅಮೇರಿಕ ನಡುವಿನ ವ್ಯಾಪಾರ ಒಪ್ಪಂದ ಹಿನ್ನೆಲೆಯಲ್ಲಿ ಭಾರತದ ವಿಶೇಷ ಕಾಫಿ ರಫ್ತು ಚೇತರಿಸಿಕೊಳ್ಳುವ ಸಾಧ್ಯತೆ ಇದ್ದು, ಇನ್ಸ್ಟಂಟ್(ಕರಗುವ) ಕಾಫಿಯ ಅಮೆರಿಕ ರಫ್ತು ಮತ್ತಷ್ಟು ಹೆಚ್ಚಳಗೊಳ್ಳಲಿದೆ ಎಂದು ವ್ಯಾಪಾರೀ ಮೂಲಗಳು ತಿಳಿಸಿವೆ. ಮೊದಲು ಭಾರತದ ಕಾಫಿಗೆ ಶೂನ್ಯ ಸುಂಕ ಇತ್ತು , ೨೦೨೫ ರಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದನ್ನು ಶೇಕಡಾ ೨೫ ಕ್ಕೆ ಹೆಚ್ಚಳ ಮಾಡಿದರು. ಹೆಚ್ಚಳದ ಕಾರಣದಿಂದಾಗಿ ರಫ್ತು ಕುಸಿತಗೊಂಡಿತು.

“ಖAಡಿತವಾಗಿಯೂ, ನಿಯಮ ಜಾರಿಯಾದರೆ ಇದು ವಿಶೇಷವಾಗಿ ಕಾಫಿ ವಲಯದ ರಫ್ತಿಗೆ ದೊಡ್ಡ ಉತ್ತೇಜನ ನೀಡುತ್ತದೆ. ಇದು ಕಾಫಿ ಮಾರುಕಟ್ಟೆಯ ಮೇಲೆ ತುಂಬಾ ಸಕಾರಾತ್ಮಕ ಪರಿಣಾಮ ಬೀರುತ್ತದೆ” ಎಂದು ಭಾರತೀಯ ಕಾಫಿ ಮಂಡಳಿಯ ಸಿಇಒ ಮತ್ತು ಕಾರ್ಯದರ್ಶಿ ಎಂ ಕೂರ್ಮಾ ರಾವ್ ಹೇಳಿದರು. ಈ ಬಗ್ಗೆ ನೈಜ ಚಿತ್ರಣದ ಬಗ್ಗೆ ಅಧ್ಯಯನ ನಡೆಸುತ್ತಿದ್ದು, ನಿಯಮ ಜಾರಿಗೆ ಬಂದರೆ ಉಪಯುಕ್ತ ಎಂದರು.

೨೦೨೫ ರ ಕ್ಯಾಲೆಂಡರ್ ವರ್ಷದಲ್ಲಿ ಭಾರತದಿಂದ ಒಟ್ಟು ೩.೮೪ ಲಕ್ಷ ಟನ್ ಕಾಫಿ ವಿದೇಶಗಳಿಗೆ ರಫ್ತಾಗಿದೆ. ಆದರೆ ಅಮೇರಿಕಕ್ಕೆ ಭಾರತೀಯ ಕಾಫಿಯ ರಫ್ತು ಪ್ರಮಾಣದಲ್ಲಿ ಕಡಿಮೆಯಾಗಿದೆ. ೨೦೨೫ ರಲ್ಲಿ ಅಮೇರಿಕ ಭಾರತೀಯ ಕಾಫಿಗೆ ಹತ್ತನೇ ಅತಿದೊಡ್ಡ ಮಾರುಕಟ್ಟೆಯಾಗಿತ್ತು ಮತ್ತು ಅಮೇರಿಕಕ್ಕೆ ಒಟ್ಟು ೧೦,೭೩೬ ಟನ್‌ಗಳಷ್ಟು ಕಾಫಿ ರಫ್ತಾಗಿತ್ತು. ಅಮೆರಿಕಕ್ಕೆ ರವಾನೆಯಾದ ಕಾಫಿಯಲ್ಲಿ ಕರಗುವ ಕಾಫಿಯ ಪ್ರಮಾಣ ೮,೩೯೨ ಟನ್‌ಗಳಷ್ಟು ಇತ್ತು. ಅಲ್ಲದೆ ೨,೦೮೪ ಟನ್‌ಗಳಷ್ಟು ಹಸಿರು ಬೀಜ ಕಾಫಿ ಮತ್ತು ೨೪೧ ಟನ್‌ಗಳಷ್ಟು ಹುರಿದ ಕಾಫಿ ಬೀಜ ಸೇರಿವೆ. ಅಮೆರಿಕವು ತನ್ನ ಕಾಫಿಯ ಅವಶ್ಯಕತೆಯ ಬಹುಭಾಗವನ್ನು ಬ್ರೆಜಿಲ್, ಕೊಲಂಬಿಯಾ ಮತ್ತು ಗ್ವಾಟೆಮಾಲ್‌ನಂತಹ ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಈ ದೇಶಗಳಿಗೆ ಪ್ರಸ್ತುತ ಶೇಕಡಾ ೧೦ ರಷ್ಟು ತೆರಿಗೆ ವಿಧಿಸಲಾಗುತ್ತಿದೆ.

ಭಾರತ - ಅಮೆರಿಕ ವ್ಯಾಪಾರ ಒಪ್ಪಂದದ ಭಾಗವಾಗಿ ಸುಂಕವನ್ನು ಶೂನ್ಯಕ್ಕೆ ಇಳಿಸುವುದರೊಂದಿಗೆ ಭಾರತೀಯ ವಿಶೇಷ ಕಾಫಿ ರಫ್ತುದಾರರು ಅಮೇರಿಕದ ಖರೀದಿದಾರರಿಂದ ಬೇಡಿಕೆಯಲ್ಲಿ ಸ್ವಲ್ಪ ಹೆಚ್ಚಳವನ್ನು ಕಾಣಲಿದ್ದಾರೆ “ಕಳೆದ ವರ್ಷ, ನಮ್ಮ ರಫ್ತುದಾರರು ಶೇಕಡಾ ೨೫ ರಷ್ಟು ಸುಂಕದ ಕಾರಣದಿಂದಾಗಿ ಖರೀದಿಗಳನ್ನು ಕಡಿಮೆ ಮಾಡಿದ್ದರು ಮತ್ತು ಈ ವರ್ಷ ಅವರು ಮತ್ತೆ ಖರೀದಿಯನ್ನು ಹೆಚ್ಚಿಸಿ ರಫ್ತು ಮಾಡಲಿದ್ದಾರೆ” ಎಂದು ಬೆಂಗಳೂರಿನ ವಿಶೇಷ ಕಾಫಿ ರಫ್ತುದಾರ ಡಿ ಎಂ ಪೂರ್ಣೇಶ್ ಹೇಳಿದರು. ಅಮೇರಿಕಕ್ಕೆ ಸುಂಕ ರಹಿತ ಪ್ರವೇಶದಿಂದ ಇನ್‌ಸ್ಟಂಟ್ ಕಾಫಿ ರಫ್ತುದಾರರು ಲಾಭ ಪಡೆಯಬಹುದು ಎಂದು ಅವರು ಹೇಳುತ್ತಾರೆ. ಸಿಸಿಎಲ್ ಪ್ರಾಡÀಕ್ಟ್÷್ಸ ಮತ್ತು ವೇಹನ್ ಕಾಫಿಯಂತಹ ಭಾರತೀಯ ಇನ್‌ಸ್ಟಂಟ್ ಕಾಫಿ ರಫ್ತುದಾರರು ಅಮೆರಿಕ ಜೊತೆಗಿನ ವ್ಯಾಪಾರ ಒಪ್ಪಂದದಿAದ ಲಾಭ ಪಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಸುಂಕ ಕಡಿತಗೊಳಿಸುವ ಅಧಿಕೃತ ಆದೇಶ ಇನ್ನಷ್ಟೆ ಹೊರಡಿಸಬೇಕಿದೆ.

೨೦೨೫ ರ ಕ್ಯಾಲೆಂಡರ್ ವರ್ಷದಲ್ಲಿ ಭಾರತದ ಕಾಫಿ ರಫ್ತು ದಾಖಲೆಯ $೨ ಬಿಲಿಯನ್ ಅಮೆರಿಕನ್ ಡಾಲರ್ ಗಡಿಯನ್ನು ದಾಟಿದೆ, ರಫ್ತು ಕಳೆದ ವರ್ಷದ ಮಟ್ಟವನ್ನು ಮೀರುವ ಭರವಸೆ ನಮಗಿದೆ” ಎಂದು ಮತ್ತೋರ್ವ ರಫ್ತು ಉದ್ಯಮಿ ಕೆ ರಾವ್ ಹೇಳಿದರು. ಭಾರತವು ಕಾಫಿಯ ವಿಶ್ವದ ಏಳನೇ ಅತಿದೊಡ್ಡ ಉತ್ಪಾದಕ ಮತ್ತು ಐದನೇ ಅತಿದೊಡ್ಡ ರಫ್ತುದಾರ ಆಗಿದೆ.

ಈ ಬೆಳವಣಿಗೆಯ ಕುರಿತು ಮಾತನಾಡಿದ ಕಾಂಟಿನೆAಟಲ್ ಕಾಫಿ ಇಂಡಿಯಾ ಲಿಮಿಟೆಡ್ (ಅಅಐ) ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪ್ರವೀಣ್ ಜೈಪುರಿಯಾ ಅವರು ಇಂಟ್ಸೆ÷್ಟAಟ್ ಕಾಫಿ ಮೇಲಿನ ಅಮೆರಿಕದ ಸುಂಕವನ್ನು ಇಳಿಸಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ, ಆದರೆ ಅದರ ಅನುಷ್ಠಾನದ ಬಗ್ಗೆ ನಾವು ಔಪಚಾರಿಕ ಸ್ಪಷ್ಟತೆಗಾಗಿ ಕಾಯುತ್ತಿದ್ದೇವೆ. ವಿಯೆಟ್ನಾಂನಲ್ಲಿರುವ ನಮ್ಮ ಉತ್ಪಾದನಾ ನೆಲೆಯಿಂದ ಅಮೆರಿಕಕ್ಕೆ ಸರಬರಾಜುಗಳನ್ನು ಈಗಾಗಲೇ ಸ್ಥಳಾಂತರಿಸಿರುವುದರಿAದ, ತಕ್ಷಣದ ಪರಿಣಾಮವು ನಮಗೆ ಸೀಮಿತವಾಗಿರಬಹುದು, ಆದರೆ ಈ ಕ್ರಮವು ಒಟ್ಟಾರೆ ದೇಶದ ರಫ್ತಿಗೆ ಪೂರಕ ಎಂದು ಅವರು ಅಭಿಪ್ರಾಯಿಸಿದರು. “ಒಮ್ಮೆ ಔಪಚಾರಿಕಗೊಳಿಸಿದ ನಂತರ, ಸುಂಕ ಕಡಿತವು ಹೆಚ್ಚು ಚುರುಕಾದ ಪೂರೈಕೆ ಯೋಜನೆಯನ್ನು ಬೆಂಬಲಿಸುತ್ತದೆ ಮತ್ತು ಜಾಗತಿಕ ಕಾಫಿ ಪೂರೈಕೆ ಸರಪಳಿಗಳಲ್ಲಿ ವಿಶೇಷವಾಗಿ ಮೌಲ್ಯವರ್ಧಿತ ಮತ್ತು ಸಂಸ್ಕರಿಸಿದ ಕಾಫಿ ಉತ್ಪನ್ನಗಳಿಗೆ,” ಭಾರತದ ಸ್ಥಾನವನ್ನು ಬಲಪಡಿಸುತ್ತದೆ, ಎಂದು ಅವರು ಹೇಳಿದರು.