ಕಡಂಗ, ಫೆ. ೧೬: ಪ್ರತಿನಿತ್ಯ ಸಾಮಾಜಿಕ ಮಾಧ್ಯಮ, ವಾರ್ತಾ ಪತ್ರಿಕೆ ಹಾಗೂ ಇನ್ನಿತರ ಮಾಧ್ಯಮಗಳಲ್ಲಿ ಎ.ಐ ಕುರಿತು ಹೆಚ್ಚು ಚರ್ಚೆಗಳಾಗುತ್ತಿವೆ. ಇಂತಹ ಎಐ ಕಲಿಕೆ ಉತ್ತಮ ಚೌಕಟ್ಟಿನಲ್ಲಿ ನಡೆದಾಗ ಅಭಿವೃದ್ಧಿ ಸಾಧ್ಯ ಎಂದು ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ಅರಮೇರಿ ಎಸ್.ಎಂ.ಎಸ್ ಅಕಾಡೆಮಿ ಹಾಗೂ ಯತಿ ಕ್ರಾಪ್ ಸಂಸ್ಥೆ ಸಹಯೋಗದೊಂದಿಗೆ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಮೂರು ದಿನಗಳ ಎಐ ಸಾಕ್ಷರತಾ ಅಭಿಯಾನದ ಸಮಾರೋಪ ಸಮಾರಂಭÀದಲ್ಲಿ ಮಾತನಾಡಿದ ಅವರು, ಧರ್ಮ ಹಾಗೂ ವಿಜ್ಞಾನ ಒಂದುಕ್ಕೊAದು ಪೂರಕವಾಗಿ ಬೆಳವಣಿಗೆಯನ್ನು ಕಾಣಬೇಕು. ಆಗ ಭೌತಿಕ ಪ್ರಜ್ಞೆಯ ಜೊತೆ ನೈತಿಕ ಪ್ರಜ್ಞೆಯು ಜಾಗೃತವಾಗುವುದರೊಂದಿಗೆ ಹೊಸದನ್ನು ಕಲಿಯಬೇಕೆಂಬ ಹಂಬಲವು ಉಂಟಾಗುತ್ತದೆ. ಇಂತವುಗಳಿಗೆ ಪೂರಕವಾಗಿ ಇದೀಗ ಕೃತಕ ಬುದ್ಧಿಮತ್ತೆ ಬಹಳ ಪ್ರಾಮುಖ್ಯತೆಯನ್ನು ಪಡೆದಿದ್ದು ಅದ್ಭುತವಾದಂತಹ ವ್ಯವಸ್ಥೆ ಹಾಗೂ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಯುವ ಸಮಾಜ ಉತ್ತಮ ರೀತಿಯಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಸಿ ಸಮಾಜಕ್ಕೆ ಒಳ್ಳೆಯ ಕೊಡುಗೆಯನ್ನು ನೀಡಿ ಬಡತನ, ಅನಾಭಿವೃಧ್ಧಿ ಮುಂತಾದವುಗಳಲ್ಲಿ ಬಳಲುತ್ತಿರುವವರ ಏಳಿಗೆಗೆ ಇದು ಕಾರಣವಾಗಬೇಕು ಎಂದರು.

ಕೃಷಿ ಚಟುವಟಿಕೆಗಳಲ್ಲಿ ಎಐ ಹೇಗೆ ಬಳಸಬಹುದು ಹಾಗೂ ಎಐನ ಸುಧಾರಿತ ತಂತ್ರಜ್ಞಾನ ರೈತರಿಗೆ ಹೇಗೆ ನೆರವು ನೀಡುತ್ತದೆ ಎಂಬುದನ್ನು ತಿಳಿಯಪಡಿಸುವ ಪ್ರಯತ್ನ ಮಾಡಬೇಕೆಂದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಯತಿ ಕ್ರಾಪ್ ಸಂಸ್ಥೆಯ ಸಂಸ್ಥಾಪಕರಾದ ಕೆ.ಎಸ್ ಯತೀಶ್, ಪ್ರಸ್ತುತ ಕಾಲದಲ್ಲಿ ಎಐ ಶಿಕ್ಷಣವು ಬಹಳ ವಿಸ್ತಾರವಾದ ವ್ಯಾಪ್ತಿಯನ್ನು ಹೊಂದುತ್ತ ಸಾಗುತ್ತಿದೆ. ಬಡವರು ಹಾಗೂ ಮಧ್ಯಮ ವರ್ಗದವರಿಗೆ ಎಐ ಶಿಕ್ಷಣ ಪಡೆಯುವುದು ಬಹಳ ದೊಡ್ಡ ಹೊರೆಯಂತಾಗುತ್ತಿದೆ . ಇದನ್ನು ನಿವಾರಿಸಲು ಸಂಸ್ಥೆಯು ಎಐ ಕಾರ್ಡನ್ನು ಪರಿಚಯಿಸಿದ್ದು ಕಾರ್ಡ್ ಮೂಲಕ ಎಐ ಸಂಬAಧಿತ ಯಾವುದೇ ಶಿಕ್ಷಣವನ್ನು ಅವರು ಪಡೆಯಬಹುದಾಗಿದೆ ಎಂದರು. ಒಂದು ಕಾರ್ಡ್ ಶಿಕ್ಷಣ, ವ್ಯಾಪಾರ, ಕೃಷಿ, ತಂತ್ರಜ್ಞಾನ, ವಿದ್ಯಾರ್ಥಿವೇತನ, ವಿದೇಶಿ ಶಿಕ್ಷಣ, ಮುಂತಾದವುಗಳ ಕುರಿತ ಮಾಹಿತಿಯನ್ನು ನೀಡುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಕುಸುಮ್ ಟಿಟೋ, ವಿದ್ಯಾರ್ಥಿಗಳಿಗೆ ಮೂರು ದಿನಗಳಲ್ಲಿ ಸಿಕ್ಕ ಕಲಿಕಾ ವೇದಿಕೆಯನ್ನು ಉತ್ತಮ ರೀತಿಯಲ್ಲಿ ಬಳಸಿ ಕೊಂಡಿದ್ದಾರೆ. ಎಐ ತಂತ್ರಜ್ಞಾನವನ್ನು ಬಳಸಿ ಅವರು ನಿರ್ಮಿಸಿದಂತಹ ಹಾಡುಗಳು, ವೆಬ್‌ಸೈಟ್, ಅಪ್ಲಿಕೇಶನ್ ಮುಂತಾದವುಗಳನ್ನು ಪ್ರಸ್ತುತಪಡಿಸಿದ್ದಾರೆ. ಪ್ರಸ್ತುತ ಕಾಲಘಟ್ಟದಲ್ಲಿ ಎಐ ಸಮರ್ಪಕ ಬಳಕೆ ಸಮಯದ ಉಳಿತಾಯದೊಂದಿಗೆ ಉತ್ತಮ ವಿಚಾರವನ್ನು ವೇಗ ಗತಿಯಲ್ಲಿ ಪಡೆಯಲು ಸಹಕಾರಿ ಎಂದರು.

ವೇದಿಕೆ ಕಾರ್ಯಕ್ರಮಕ್ಕೆ ಮೊದಲು ಮೂರು ದಿನಗಳ ಎಐ ಕಾರ್ಯಾಗಾರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ವಿವಿಧ ಗುಂಪುಗಳಾಗಿ ತಾವು ಎಐ ಮೂಲಕ ಸಿದ್ಧಪಡಿಸಿದ ವೆಬ್‌ಸೈಟ್, ಅಪ್ಲಿಕೇಶನ್, ಚಲನಚಿತ್ರ, ದೃಶ್ಯ ರೂಪಗಳನ್ನು ಒಳಗೊಂಡ ಕಥೆಯನ್ನು ಪ್ರಸ್ತುತಪಡಿಸಿ ಎಐ ಬಳಕೆಯ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊAಡರು.

ಕಾರ್ಯಕ್ರಮದಲ್ಲಿ ಎಸ್‌ಎಂಎಸ್ ಅಕಾಡೆಮಿಯ ವಿದ್ಯಾರ್ಥಿಗಳು, ಶಿಕ್ಷಕ ವರ್ಗ, ಪೋಷಕರು ಹಾಗೂ ಯತಿ ಕ್ರಾಪ್ ಸಂಸ್ಥೆಯ ಸಿಬ್ಬಂದಿಗಳು ಹಾಜರಿದ್ದರು.