ಮಡಿಕೇರಿ, ಫೆ. ೧೬: ಕೊಡಗು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದಿAದ ನಿರ್ಮಿಸಲಾದ ಫಾರ್ಮಾ ಭವನವು ತಾ. ೧೯ ರಂದು ಬೆಳಿಗ್ಗೆ ೯.೩೦ ಗಂಟೆಗೆ ಚೈನ್ ಗೇಟ್ ಬಳಿ ಉದ್ಘಾಟನೆಯಾಗಲಿದೆ.

ಕರ್ನಾಟಕ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಆರ್. ರಘುನಾಥ ರೆಡ್ಡಿ ಅವರು ಫಾರ್ಮಾ ಭವನವನ್ನು ಉದ್ಘಾಟಿಸಲಿದ್ದು, ಕೊಡಗು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಂಬೆಕಲ್ ಜೀವನ್ ಕುಶಾಲಪ್ಪ ಅಧ್ಯಕ್ಷತೆಯಲ್ಲಿ ಆಯೋಜಿತ ಸಮಾರಂಭದಲ್ಲಿ ಮೈಸೂರು ಪ್ರಾದೇಶಿಕ ಔಷಧ ನಿಯಂತ್ರಕರ ಕಚೇರಿಯ ಉಪ ಆಯುಕ್ತ ಬಿ.ಪಿ. ಅರುಣ್, ಕೊಡಗು ಜಿಲ್ಲಾ ಸಹಾಯಕ ಔಷಧ ನಿಯಂತ್ರಕರಾದ ಅಜಯ್ ರಾಜ್ ಷಾ, ಕರ್ನಾಟಕ ಔಷಧಿ ವ್ಯಾಪಾರಿಗಳ ಸಂಘದ ಖಜಾಂಜಿ ಬಿ. ಉಮೇಶ್, ಸಂಘದ ರಾಜ್ಯ ಕಾನೂನು ಸಲಹೆಗಾರ ಕೆ.ಹರೀಶ್, ಕೊಡಗು ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಗೌರವ ಕಾರ್ಯದರ್ಶಿ ಡಿ.ಐ. ಪುರುಷೋತ್ತಮ್, ಉಪಾಧ್ಯಕ್ಷರುಗಳಾದ ಅಂಬೆಕಲ್ ವಿನೋದ್, ಮೆರ್ವಿನ್ ಫರ್ನಾಂಡೀಸ್, ಜಂಟಿ ಕಾರ್ಯದರ್ಶಿ ಕೆ.ವಸಂತ್ ಕುಮಾರ್, ಖಜಾಂಚಿ ಪ್ರಸಾದ್ ಗೌಡ ಪಾಲ್ಗೊಳ್ಳಲಿದ್ದಾರೆ.

ಫಾರ್ಮಾ ಭವನದ ಲೋಕಾರ್ಪಣೆ ಸಂದರ್ಭ ಕೊಡಗಿನ ಹಿರಿಯ ಔಷಧಿ ವ್ಯಾಪಾರಸ್ಥರುಗಳಾದ ವೀರಾಜಪೇಟೆ ಗಣೇಶ್ ಮೆಡಿಕಲ್ಸ್ನ ಸುದರ್ಶನ್ ರೈ, ಕುಶಾಲನಗರದ ರಾಧಾಕೃಷ್ಣ ಮೆಡಿಕಲ್ಸ್ನ ಶ್ರೀಪತಿ ಎಸ್.ಎಲ್., ಸುಂಟಿಕೊಪ್ಪದ ಅಶ್ವಿನಿ ಮೆಡಿಕಲ್ಸ್ನ ಕೆ. ಗೋಪಾಲ ಭಟ್,ನಾಪೋಕ್ಲುವಿನ ರಾಘವೇಂದ್ರ ಮೆಡಿಕಲ್ಸ್ನ ಎಂ.ಎA.ನರೇAದ್ರ, ಸೋಮವಾರಪೇಟೆಯ ಮೆಡಿಕಲ್ ಎಂಪೋರಿಯAನ ಮೆರ್ವಿನ್ ಫೆರ್ನಾಂಡೀಸ್, ಮಡಿಕೇರಿಯ ವಿನೋದ್ ಮೆಡಿಕಲ್ಸ್ನ ಅಂಬೆಕಲ್ ಕುಶಾಲಪ್ಪ, ಶನಿವಾರಸಂತೆಯ ಅನ್ನಪೂರ್ಣ ಮೆಡಿಕಲ್ಸ್ನ ಹೆಚ್.ಎಸ್. ಸುರೇಶ್, ಕೊಡ್ಲಿಪೇಟೆಯ ಶ್ರೀನಿವಾಸ ಮೆಡಿಕಲ್ಸ್ನ ಎಸ್.ಎಸ್. ಶ್ರೀನಿವಾಸ್, ಗೋಣಿಕೊಪ್ಪಲುವಿನ ಕಾವೇರಿ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ನ ಎನ್.ಯು. ಭೀಮಯ್ಯ ಸಂಘದ ಪೂರ್ವಾಧ್ಯಕ್ಷರಾದ ಮಡಿಕೇರಿಯ ರಾಜ್ ಮೆಡಿಕಲ್ಸ್ನ ಜಿ.ಎಸ್. ಬಸವರಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ ಎಂದು ಕೊಡಗು ಔಷಧಿ ವ್ಯಾಪಾರಸ್ಥರ ಸಂಘದ ಪ್ರಕಟಣೆ ತಿಳಿಸಿದೆ.