ಮಡಿಕೇರಿ, ಫೆ. ೧೬: : ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಬಾಳೆಹೊಳೆ ಸಮೀಪದ ಭದ್ರಾ ನದಿಯಲ್ಲಿ ತಾ.೧೪ ರಂದು ಈಜಲು ತೆರಳಿ ನೀರು ಪಾಲಾಗಿದ್ದ ಇಬ್ಬರು ಯುವಕರು ಕೊಡಗು ಮೂಲದವರೆಂದು ದೃಢಪಟ್ಟಿದೆ.
ಮಡಿಕೇರಿಯ ಪುಟಾಣಿ ನಗರ ನಿವಾಸಿ ಅಭಿಷೇಕ್ (೨೭), ಹಾಗೂ ಪುಟಾಣಿ ನಗರದವರಾಗಿದ್ದು ಮೈಸೂರಿನಲ್ಲಿ ನೆಲೆಸಿದ್ದ ಯೋಗೇಶ್ (೧೭) ಎಂಬವರುಗಳೇ ಮೃತಪಟ್ಟವರಾಗಿದ್ದಾರೆ. ಇವರಿಬ್ಬರೂ ಸಂಬAಧಿಕರಾಗಿದ್ದು, ಅಭಿಷೇಕ್ ತನ್ನ ಪತ್ನಿ ದೀಪಿಕಾ ಹಾಗೂ ಸಂಬAಧಿ ಯೋಗೇಶ್ ಜೊತೆಗೆ ಸಂಬAಧಿಕರ ಮನೆಗೆ ತೆರಳಿದ್ದರು. ತಾ.೧೪ ರಂದು ದೀಪಿಕಾ ಭದ್ರಾ ನದಿಗೆ ಬಟ್ಟೆ ಒಗೆಯಲೆಂದು ತೆರಳಿದ್ದಾಗ ಆಕೆಯೊಂದಿಗೆ ತೆರಳಿದ್ದ ಅಭಿಷೇಕ್ ಹಾಗೂ ಯೋಗೇಶ್ ಈಜಲು ನೀರಿಗಿಳಿದಾಗ ದುರ್ಘಟನೆ ಸಂಭವಿಸಿತ್ತು.ಬಳಿಕ ನೀರಿನಲ್ಲಿ ನಾಪತ್ತೆಯಾಗಿದ್ದ ಮೃತದೇಹಗಳಿಗಾಗಿ ಕಾರ್ಯಾಚರಣೆ ನಡೆಸಿ ತಾ.೧೫ ರ ಮಧ್ಯಾಹ್ನದ ವೇಳೆಗೆ ಮೃತದೇಹಗಳನ್ನು ಮೇಲೆತ್ತಿ ಸಂಬAಧಿಕರಿಗೆ ಹಸ್ತಾಂತರಿಸಲಾಯಿತು.