ಸೋಮವಾರಪೇಟೆ,ಫೆ.೧೪: ತಾಲೂಕಿನ ವಿವಿಧೆಡೆ ರೂ. ೮.೫ ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಾಸಕ ಡಾ. ಮಂತರ್ ಗೌಡ ಚಾಲನೆ ನೀಡಿದರು.

ಕಾಗಡಿಕಟ್ಟೆ ಗ್ರಾಮದ ಅಯ್ಯಪ್ಪ ಕಾಲೋನಿಯಲ್ಲಿ ರೂ. ೩೦ಲಕ್ಷ ವೆಚ್ಚದ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಶಾಸಕರು, ಕಳೆದ ಹಲವಾರು ವರ್ಷಗಳಿಂದ ಇಲ್ಲಿ ನೆಲೆಯಿರುವ ೧೦೩ ಕುಟುಂಬಗಳು ನಿವೇಶನಕ್ಕೆ ದಾಖಲಾತಿ ಪಡೆಯಲು ಸಾಧ್ಯವಾಗಿಲ್ಲ. ಮುಂದಿನ ೧೦ ದಿನಗಳಲ್ಲಿ ಕಂದಾಯ, ಎ.ಸಿ. ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಒಟ್ಟಿಗೆ ಜಂಟಿ ಸರ್ವೆ ನಡೆಸಿ, ದಾಖಲಾತಿ ಕೊಡಲು ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಗ್ರಾಮದ ನಿವಾಸಿ ಸುಂದರ್ ಮಾತನಾಡಿ, ಇಲ್ಲಿ ಎಲ್ಲರೂ ಕೂಲಿ ಕಾರ್ಮಿಕರಾಗಿದ್ದಾರೆ. ಆದರೆ ಯಾರಿಗೂ ಹಕ್ಕುಪತ್ರಗಳಿಲ್ಲದೆ, ಸರ್ಕಾರದ ಯಾವುದೇ ಯೋಜನೆಗಳನ್ನು ಪಡೆಯಲು ಸಾಧ್ಯವಾಗಿಲ್ಲ. ಹಲವು ಬಾರಿ ಜಂಟಿ ಸರ್ವೆ ನಡೆಸಿ, ದಾಖಲಾತಿ ಮಾಡಿಕೊಡುವಂತೆ ಸಂಬAಧಿಸಿದ ಅಧಿಕಾರಿಗಳಲ್ಲಿ ಮನವಿ ಮಾಡಲಾಗಿತ್ತು. ಆದರೆ, ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಇಲ್ಲಿನವರಿಗೆ ಹಕ್ಕುಪತ್ರ ನೀಡಬೇಕೆಂದು ಮನವಿ ಮಾಡಿದರು.

ನಂತರ ತಾಲೂಕಿನ ಊರುಗುತ್ತಿ-ಕಿರುಬಿಳಹ ರಸ್ತೆ ಅಭಿವೃದ್ಧಿ ಹಾಗೂ ಸೇತುವೆ ನಿರ್ಮಾಣಕ್ಕೆ ೪ ಕೋಟಿ, ನಿಡ್ತ, ಕೂಡ್ಲೂರು, ಕೆಲಕೊಡ್ಲಿ, ಗೌಡಳ್ಳಿ ಗ್ರಾ.ಪಂ.ನ ಚಿಕ್ಕಾರದಲ್ಲಿ ರಸ್ತೆ ನಿರ್ಮಾಣಕ್ಕೆ ೪ ಕೋಟಿ, ಶಾಂತಳ್ಳಿಯಲ್ಲಿ ರೂ. ೧೫ ಲಕ್ಷದ ಬಸ್ ನಿಲ್ದಾಣ ಹಾಗೂ ೫ ಲಕ್ಷ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಒಳಾಂಗಣ ಬಾಸ್ಕೆಟ್ ಬಾಲ್ ಸ್ಟೇಡಿಯಂಗೆ ಭೂಮಿ ಪೂಜೆ ಹಾಗೂ ಶಾಂತಳ್ಳಿಯಲ್ಲಿ ಡಿಜಿಟಲ್ ಗ್ರಂಥಾಲಯ ಉದ್ಘಾಟನೆ, ಸೋಮವಾರಪೇಟೆ ಕೃಷಿ ಮಾರುಕಟ್ಟೆಯಲ್ಲಿ ರೂ. ೮.೫ ಲಕ್ಷ ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕ ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಖಜಾಂಚಿ ಚೇತನ್, ಅಯ್ಯಪ್ಪ ದೇವಾಲಯ ಸಮಿತಿ ಅಧ್ಯಕ್ಷ ಜಗದೀಶ್, ಗಂಗಾಧರ್, ಧರ್ಮ, ಶಿವಣ್ಣ, ಆರ್.ಎಫ್.ಓ. ಶೈಲೇಂದ್ರಕುಮಾರ್, ಚೌಡ್ಲು ಗ್ರಾಮ ಪಂಚಾಯಿತಿ ಪಿಡಿಒ ಪೂರ್ಣಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಎಂ. ಕಾಂತರಾಜು, ಪ್ರಮುಖರಾದ ವಿನಿ, ಡಿ.ಯು. ಕಿರಣ್ ಸೇರಿದಂತೆ ಇತರರು ಇದ್ದರು.