ಮಡಿಕೇರಿ, ಫೆ. ೧೪: ಪಾಡಿ ಶ್ರೀ ಇಗ್ಗುತಪ್ಪ ದೇವರ ಕುಂಬ್ಯಾರ್ ಕಲಾಡ್ಚ ವಾರ್ಷಿಕೋತ್ಸವವು ಮಾರ್ಚ್ ೨ ರಂದು ನಡೆಯಲಿದೆ ಎಂದು ತಕ್ಕಮುಖ್ಯಸ್ಥರು ಹಾಗೂ ಭಕ್ತಜನ ಸಂಘದ ಮತ್ತು ವ್ಯವಸ್ಥಾಪನಾ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರಯುಕ್ತ ಫೆ. ೧೭ ರಂದು ಮಂಗಳವಾರ ಅಮಾವಾಸ್ಯೆಯ ದಿನದಂದು ಅಪರಾಹ್ನ ಆದಿಸ್ಥಾನ “ಮಲ್ಮ” ದಲ್ಲಿ ಸಂಪ್ರದಾಯದAತೆ ದೇವರ ಕಟ್ಟುಬೀಳಲಿದೆ. (ನಾಲ್ಕು ನಾಡಿಗೆ ಸೀಮಿತ). ಹಾಗಾಗಿ ಹಬ್ಬ ಸಂಪನ್ನವಾಗುವ ತನಕ ಯಾವುದೇ ತುಲಾಭಾರ ಸೇವೆ, ನಾಮಕರಣ, ವಿಶೇಷ ಪೂಜೆಗಳು ನಡೆಯುವದಿಲ್ಲ.
ಮಾರ್ಚ್ ೨ರ ಸೋಮವಾರ ಬೆಳಿಗ್ಗೆ ದೇವತಕ್ಕರಾದ ಪರದಂಡ ಕುಟುಂಬಸ್ಥರು ಹಾಗೂ ಬಟ್ಯತ್ ವಕ್ಕ ಪೇರಿಯಂಡ ಕುಟುಂಬಸ್ಥರ ಹಾಗೂ ಸಂಬAಧಪಟ್ಟ ಇತರ ಕುಟುಂಬಸ್ಥರ ಐನ್‌ಮನೆಗಳಿಂದ ಜೋಡೆತ್ತು ಪೋರಾಟ, ಪಾಲ್ ಬೈಯ್ಯಾಡ್‌ನೊಂದಿಗೆ ಶಾಸ್ತೊçÃಕ್ತವಾಗಿ ಬಂದು ದೇವಳ ತಲುಪುವುದರೊಂದಿಗೆ ಕಲಾಡ್ಚ ಹಬ್ಬ ಪ್ರಾರಂಭವಾಗುವುದು.
ಮಧ್ಯಾಹ್ನ ನಿತ್ಯ ಪೂಜೆಯೊಂದಿಗೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಲಿದೆ.
ನಂತರ ಚಂಡೆ ಮದ್ದಳೆಯೊಂದಿಗೆ ದೇವರ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಆದಿಸ್ಥಾನ ಮಲ್ಮಗೆ ಕೊಂಡೊಯ್ಯಲಾಗುವುದು. ಅಲ್ಲಿ ಸಾಂಪ್ರದಾಯಿಕ ದುಡಿಕೊಟ್ಟ್ ಪಾಟ್‌ನೊಂದಿಗೆ ಪಾಡಿ, ನೆಲಜಿ, ಪೇರೂರಿನ ತಕ್ಕ ಮುಖ್ಯಸ್ಥರು ಕೂಡಿ ಎತ್ತ್ ಪೋರಾಟ ಸೇವೆ, ಪಾಲ್ ಬೈಯ್ಯಾಡ್‌ನ ಪಾಯಸಮಾಡಿ ಪ್ರಸಾದವಾಗಿ ಅರ್ಪಿಸಲಿದ್ದಾರೆ.
ಮುಸ್ಸಂಜೆ ವೇಳೆಗೆ ವಿವಿಧ ಪೂಜಾ ಕೈಂಕರ್ಯದೊAದಿಗೆ “ದೇವಕಟ್ಟು” ಕೊನೆಗೊಳಿಸಿ, ಉತ್ಸವ ಮೂರ್ತಿಯನ್ನು ಪಾಡಿ ದೇವಾಲಯಕ್ಕೆ ತಂದು ದೇವಾಲಯದಲ್ಲಿ ಉತ್ಸವ ಮೂರ್ತಿಯನ್ನು ಹೊತ್ತು ಆಕರ್ಷಕ ಆರಾಟ್ ಬೊಳಕ್ ನೃತ್ಯದೊಂದಿಗೆ ಉತ್ಸವಕ್ಕೆ ತೆರೆ ಬೀಳಲಿದೆ ಎಂದು ದೇವಾಲಯದ ಭಕ್ತಜನ ಸಂಘದ ಪದಾಧಿಕಾರಿಗಳು, ದೇವತಕ್ಕರು ಹಾಗೂ ತಕ್ಕ ಮುಖ್ಯಸ್ಥರು ತಿಳಿಸಿದ್ದಾರೆ.