ಮಡಿಕೇರಿ, ಫೆ. ೧೪: ಇಲ್ಲಿನ ಶ್ರೀ ಕೋದಂಡ ರಾಮೋತ್ಸವ ಸಮಿತಿ ವತಿಯಿಂದ ಮಾರ್ಚ್ ೨೫, ೨೬ ಮತ್ತು ೨೭ ರಂದು ಮಡಿಕೇರಿ ನಗರದಲ್ಲಿ ಶ್ರೀ ರಾಮನವಮಿ ಪ್ರಯುಕ್ತ ೩೬ನೇ ವರ್ಷದ ರಾಮೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶ್ರೀ ಕೋದಂಡ ರಾಮೋತ್ಸವ ಸಮಿತಿಯ ಅಧ್ಯಕ್ಷ ಕೆ.ಎಂ. ಗಣೇಶ್ ಅವರು, "ಸರ್ವೇಜನಾ: ಸುಖಿನೋಭವಂತು" ಆದರ್ಶದಡಿ ಸರ್ವ ಸಮುದಾಯಗಳು ಒಗ್ಗೂಡಿ ಮೂರು ದಿನಗಳ ರಾಮೋತ್ಸವ ಕಾರ್ಯಕ್ರಮಗಳನ್ನು ಶ್ರದ್ಧಾಭಕ್ತಿ ಮತ್ತು ವಿಜೃಂಭಣೆಯಿAದ ಆಚರಿಸುವುದಾಗಿ ತಿಳಿಸಿದರು.
ಕಳೆದ ವರ್ಷ ಶ್ರೀರಾಮನ ಆದರ್ಶಗಳನ್ನು ಪಾಲನೆ ಮಾಡುತ್ತಾ ಸಾವಿರಾರು ಭಕ್ತರು ರಾಮೋತ್ಸವವನ್ನು ಸಂಭ್ರಮಿಸಿದ್ದಾರೆ, ನಗರದಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿದ್ದಾರೆ. ಈ ಬಾರಿ ಕೂಡ ದಾನಿಗಳು ಸೇರಿದಂತೆ ಸರ್ವರ ಸಹಕಾರದಿಂದ ರಾಮೋತ್ಸವ ಸಡಗರದಿಂದ ನಡೆಯಲಿದ್ದು, ಸುಮಾರು ರೂ. ೩೦ ಲಕ್ಷ ಖರ್ಚಾಗಲಿದೆ ಎಂದರು.
ಮಾ. ೨೫ ರಂದು ಸಂಜೆ ೬ ಗಂಟೆಗೆ ನಗರದಲ್ಲಿ ಶ್ರೀರಾಮನ ಪಲ್ಲಕ್ಕಿ ಮತ್ತು ಕಲಶದೊಂದಿಗೆ ಭಕ್ತರ ಬೃಹತ್ ಮೆರವಣಿಗೆ ನಡೆಯಲಿದೆ. ಶ್ರೀ ಕೋದಂಡರಾಮ ದೇವಾಲಯದಲ್ಲಿ ರಾತ್ರಿ ಭಕ್ತರಿಗೆ ಅನ್ನಸಂತರ್ಪಣೆಯಾಗಲಿದೆ.
ಮಾ. ೨೬ ರಂದು ಶ್ರೀ ಕೋದಂಡರಾಮ ದೇವಾಲಯದಲ್ಲಿ ಬೆಳಿಗ್ಗೆಯಿಂದ ದೈವ ನೃತ್ಯ, ಮಹಾಪೂಜೆ, ಪ್ರತಿಷ್ಠಾಪನಾ ವಾರ್ಷಿಕೋತ್ಸವ, ರಾಮನವಮಿ ಕಾರ್ಯಕ್ರಮಗಳು ಹಾಗೂ ಭಜನೆ ಶ್ರದ್ಧಾಭಕ್ತಿಯಿಂದ ಜರುಗಲಿದೆ. ಬಳಿಕ ಅನ್ನಸಂತರ್ಪಣೆ ನೆರವೇರಲಿದೆ. ಮಾ. ೨೭ ರಂದು ಸಂಜೆ ೬.೩೦ ಗಂಟೆಗೆ ನಗರದ ಬನ್ನಿ ಮಂಟಪದ ಬಳಿಯಿಂದ ದೇವಾನುದೇವತೆಗಳ ಸ್ತಬ್ಧಚಿತ್ರಗಳು ಮತ್ತು ಜಾನಪದ ಕಲಾತಂಡಗಳ ಬೃಹತ್ ಶೋಭಾಯಾತ್ರೆ ಸಾಗಲಿದೆ. ಈ ಶೋಭಾಯಾತ್ರೆಗೆ ಮಕ್ಕಳ ಮಂಟಪಗಳ ಮೆರುಗು ಜೊತೆಯಾಗಲಿದೆ. ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಒಂದು ಟ್ರಾö್ಯಕ್ಟರ್ ಮಾತ್ರ ಬಳಸಬಹುದಾಗಿದ್ದು, ೨೦ ಸ್ತಬ್ಧಚಿತ್ರಗಳಿಗೆ ಅವಕಾಶ ಕಲ್ಪಿಸಲಾಗುವುದು. ಶೋಭಾಯಾತ್ರೆಯಲ್ಲಿ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಲು ಆಸಕ್ತಿ ಇರುವವರು ೯೮೮೦೭೭೮೦೪೭ನ್ನು ಸಂಪರ್ಕಿಸಬಹುದಾಗಿದೆ. ಬಳಿಕ ನಗರದ ಗಾಂಧಿ ಮೈದಾನದಲ್ಲಿ ಸಂಜೆ ೬ ಗಂಟೆಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆಯಲಿವೆ. ರಾಜ್ಯಮಟ್ಟದ ಹಾಗೂ ಕೊಡಗು ಜಿಲ್ಲೆಯ ಕಲಾತಂಡಗಳಿAದ, ಕಲಾವಿದರಿಂದ ವಿವಿಧ ಸಾಂಸ್ಕೃತಿಕ ವೈಭವ ವಿಜೃಂಭಿಸಲಿದೆ. ಎಲ್ಲಾ ಕಾರ್ಯಕ್ರಮಗಳು ಮಿನಿ ದಸರಾದಂತೆ ನಡೆಯಲಿದ್ದು, ಶಾಸಕರಾದಿಯಾಗಿ ಹಲವು ದಾನಿಗಳು ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಶೋಭಾಯಾತ್ರೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸುಮಾರು ೫ ಸಾವಿರ ಮಂದಿ ಸೇರುವ ನಿರೀಕ್ಷೆ ಇದೆ. ಕಳೆದ ವರ್ಷ ಸರ್ವ ಭಕ್ತರ, ಎಲ್ಲಾ ಸಮುದಾಯದ ಜನರ, ಸಂಘ ಸಂಸ್ಥೆಗಳ ಪ್ರಮುಖರ, ಜನಪ್ರತಿನಿಧಿಗಳ, ಅಧಿಕಾರಿಗಳ, ಪೊಲೀಸ್ ಇಲಾಖೆಯ ಹಾಗೂ ದಾನಿಗಳ ಸಹಕಾರದಿಂದ ಶ್ರದ್ಧಾಭಕ್ತಿಯ ರಾಮೋತ್ಸವ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಮತ್ತು ಅತ್ಯಂತ ಯಶಸ್ವಿಯಾಗಿ ನಡೆಸಲು ಸಾಧ್ಯವಾಯಿತು. ಈ ಬಾರಿಯೂ ಸರ್ವರ ಸಹಕಾರವನ್ನು ಕೋರುತ್ತಿದ್ದೇವೆ ಎಂದರು.
ಶ್ರೀ ಕೋದಂಡ ರಾಮೋತ್ಸವ ಸಮಿತಿಯ ಅಧ್ಯಕ್ಷರಾಗಿ ಕೆ.ಎಂ. ಗಣೇಶ್, ಪ್ರಧಾನ ಕಾರ್ಯದರ್ಶಿಯಾಗಿ ಬೊಳ್ಳಜಿರ ಬಿ. ಅಯ್ಯಪ್ಪ, ಉಪಾಧ್ಯಕ್ಷರುಗಳಾಗಿ ಅಂಬೆಕಲ್ ನವೀನ್, ಸವಿತಾ ರಾಕೇಶ್, ಡಾ. ಎಸ್.ಎಂ. ಧನಂಜಯ್, ಗೌರವ ಅಧ್ಯಕ್ಷರಾಗಿ ಕೋಲೆಯಂಡ ನಿಶಾ ಮೋಹನ್, ಖಜಾಂಚಿಯಾಗಿ ಕೋಲೆಯಂಡ ಡಾ. ಮೋಹನ್ ಅಪ್ಪಾಜಿ, ಮುಖ್ಯ ಸಲಹೆಗಾರರಾಗಿ ಜಿ. ರಾಜೇಂದ್ರ, ಶ್ರೀ ಕೋದಂಡರಾಮ ಟ್ರಸ್ಟ್ನ ಅಧ್ಯಕ್ಷರಾಗಿ ಹೆಚ್.ಎನ್. ನಂಜುAಡ ಹಾಗೂ ಜ್ಯೋತಿ ಯುವಕ ಸಂಘದ ಅಧ್ಯಕ್ಷರಾಗಿ ಹೆಚ್.ಎನ್. ವಿಶ್ವ ಕಾರ್ಯನಿರ್ವಹಿಸುತ್ತಿದ್ದಾರೆ.
ರಾಮೋತ್ಸವ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಮತ್ತು ಅತ್ಯಂತ ಯಶಸ್ವಿಯಾಗಿ ನಡೆಸಲು ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಅಲಂಕಾರ ಸಮಿತಿಯ ಅಧ್ಯಕ್ಷರಾಗಿ ಹೆಚ್.ವಿ. ರವೀಂದ್ರ, ಮಹಿಳಾ ಸಮಿತಿಯ ಅಧ್ಯಕ್ಷರಾಗಿ ಭಾರತಿ ರಮೇಶ್ ಹಾಗೂ ಕಾರ್ಯಾಧ್ಯಕ್ಷರಾಗಿ ಡಾ. ಜಯಂತಿ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾಗಿ ಹೆಚ್.ಎನ್. ಮಹೇಶ್ ಹಾಗೂ ಕಾರ್ಯಾಧ್ಯಕ್ಷರಾಗಿ ಅನಿಲ್ ಎಚ್.ಟಿ., ಆಹಾರ ಸಮಿತಿಯ ಅಧ್ಯಕ್ಷರಾಗಿ ಹೆಚ್.ವಿ. ಸುಧಾಕರ್, ಮೆರವಣಿಗೆ ಸಮಿತಿಯ ಅಧ್ಯಕ್ಷರಾಗಿ ಎನ್. ಪರಮೇಶ್, ಉಪಾಧ್ಯಕ್ಷರಾಗಿ ದಶಮಂಟಪದ ಅಧ್ಯಕ್ಷ ಬಿ.ಎಂ. ಹರೀಶ್, ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಜಿ.ಆರ್. ಪ್ರಜ್ವಲ್, ವೇದಿಕೆ ಸಮಿತಿಯ ಅಧ್ಯಕ್ಷರಾಗಿ ಜಿ.ಆರ್. ಪ್ರಜ್ಞಾ, ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ವಿ.ಎಸ್. ವಿನೋದ್ ಕುಮಾರ್, ಉಪಾಧ್ಯಕ್ಷರಾಗಿ ಪೂರ್ಣಿಮ, ಭಜನಾ ಸಮಿತಿಯ ಅಧ್ಯಕ್ಷರಾಗಿ ವಿಶಾಲಾಕ್ಷಿ ಸುಕುಮಾರ್, ಕಲಶ ಸಮಿತಿಯ ಅಧ್ಯಕ್ಷರಾಗಿ ಎಸ್. ಲಿಖಿತ, ಪ್ರಸಾದ ಸಮಿತಿಯ ಅಧ್ಯಕ್ಷರಾಗಿ ವಿದ್ಯಾ ವೆಂಕಟರಮಣ, ಹಣಕಾಸು ಸಮಿತಿಯ ಸಂಚಾಲಕರುಗಳಾಗಿ ಹೆಚ್.ಹೆಚ್.ಮಂಜುನಾಥ್ ಹಾಗೂ ಪುದಿಯನೆರವನ ರೇವತಿ ರಮೇಶ್, ವೈದಿಕ ಸಮಿತಿಯ ಅಧ್ಯಕ್ಷರಾಗಿ ರಾಮಸೇವಾ ಸಮಿತಿಯ ಅಧ್ಯಕ್ಷರಾದ ಹೆಚ್.ಎಸ್. ಗೋಪಿನಾಥ್, ಮಹಿಳಾ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಪೂರ್ಣಿಮಾ ಕಾರ್ಯನಿರ್ವಹಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಉಪಸಮಿತಿಗಳನ್ನು ರಚಿಸಲಾಗುವುದು ಎಂದು ಕೆ.ಎಂ. ಗಣೇಶ್ ಮಾಹಿತಿ ನೀಡಿದರು.
ಖಜಾಂಚಿ ಕೋಲೆಯಂಡ ಡಾ. ಮೋಹನ್ ಅಪ್ಪಾಜಿ ಮಾತನಾಡಿ, ಕಳೆದ ವರ್ಷ ರೂ. ೨೦ ಲಕ್ಷ ವೆಚ್ಚದಲ್ಲಿ ಅತ್ಯಂತ ವಿಜೃಂಭಣೆಯಿAದ ರಾಮೋತ್ಸವ ಆಚರಿಸಲಾಗಿದೆ. ಈ ಬಾರಿಯ ರಾಮೋತ್ಸವಕ್ಕೆ ರೂ. ೩೦ ಲಕ್ಷ ಖರ್ಚಾಗಲಿದೆ. ಎಲ್ಲಾ ವ್ಯವಹಾರಗಳು ಪಾರದರ್ಶಕವಾಗಿದ್ದು, ದಾನಿಗಳು ವಂತಿಗೆಯನ್ನು ಚೆಕ್ ರೂಪದಲ್ಲಿ ನೀಡುವಂತೆ ಮನವಿ ಮಾಡುವುದಾಗಿ ತಿಳಿಸಿದರು.
ಮಹಿಳಾ ಸಮಿತಿಯ ಕಾರ್ಯಾಧ್ಯಕ್ಷೆ ಡಾ. ಜಯಂತಿ ಶೆಟ್ಟಿ ಮಾತನಾಡಿ, ರಾಜಕೀಯ ರಹಿತವಾಗಿ ಎಲ್ಲರೂ ಒಗ್ಗಟ್ಟಿನಿಂದ ರಾಮೋತ್ಸವವÀನ್ನು ಆಚರಿಸುತ್ತಿದ್ದು, ಸರ್ವರೂ ಕೈಜೋಡಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ಕೋದಂಡ ರಾಮೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಬೊಳ್ಳಜಿರ ಬಿ. ಅಯ್ಯಪ್ಪ, ಉಪಾಧ್ಯಕ್ಷ ಅಂಬೆಕಲ್ ನವೀನ್ ಹಾಗೂ ಶ್ರೀ ಕೋದಂಡರಾಮ ಟ್ರಸ್ಟ್ನ ಅಧ್ಯಕ್ಷ ಹೆಚ್.ಎನ್. ನಂಜುAಡ ಉಪಸ್ಥಿತರಿದ್ದರು.