ಮುಳ್ಳೂರು, ಫೆ. ೧೪: ಸಮೀಪದ ಆಲೂರು-ಸಿದ್ದಾಪುರ ಅರೆಭಾಷೆ ಗೌಡ ಸಮಾಜದ ವತಿಯಿಂದ ಸಂಗಯನಪುರ ಗ್ರಾಮದ ಅರೆಭಾಷೆ ಗೌಡ ಸಮಾಜದ ಸಮೂದಾಯ ಭವನದಲ್ಲಿ ಅರೆಭಾಷೆ ಗೌಡ ಜನಾಂಗದ ಸಾಂಪ್ರದಾಯಿಕ ಕೆಡ್ಡಸ ಹಬ್ಬವನ್ನು ಆಚರಿಸಲಾಯಿತು.

ಭೂಮಿ ಹೆಣ್ಣು ಆಗಿರುವುದರಿಂದ ಭೂಮಿಯನ್ನು ತಾಯಿಗೆ ಹೋಲಿಸುತ್ತಾರೆ ಮತ್ತು ಪೂಜಿಸುತ್ತಾರೆ. ಹೆಣ್ಣು ಋತುಮತಿಯಾಗುವುದು ಸಹಜ ಕ್ರಿಯೆ. ಅದರಂತೆ ಭೂಮಿ ತಾಯಿಯು ಸಹ ಋತುಮತಿ ಆಗುತ್ತಾಳೆ ಎಂಬ ಸಂಕೇತವಾಗಿ ಅರೆಭಾಷೆ ಗೌಡ ಜನಾಂಗದ ಹಿರಿಯರು ವರ್ಷಕೊಮ್ಮೆ ಪೊನ್ನಿ ಮಾಸದ ಕೊನೆಯ ಎರಡು ದಿನವನ್ನು ನಡು ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಕೆಡ್ಡಸ ಎಂದು ಹಾಗೂ ಮಾಯಿ ಮಾಸ ಮೊದಲನೇ ದಿನ ಅಂದರೆ ಕುಂಬ ಸಂಕ್ರಮಣ ದಿನವನ್ನು ಕೊನೆಯ ಕೆಡ್ಡಸ ಹಬ್ಬವನ್ನಾಗಿ ಆಚರಿಸುತ್ತಾರೆ. ಅದರಂತೆ ಅರೆಭಾಷೆ ಗೌಡ ಜನಾಂಗದ ಮಹಿಳೆಯರು ಮೊದಲ ಕೆಡ್ಡಸ ಹಬ್ಬವನ್ನು ತಮ್ಮ ಮನೆಯಲ್ಲಿ ಭತ್ತದ ಕಣಜಕ್ಕೆ ಕಲ್ಲು ಮತ್ತು ಮುಳ್ಳನ್ನು ಹಾಕುವ ಮೂಲಕ ಚಾಲನೆ ನೀಡುತ್ತಾರೆ. ನಡು ಕೆಡ್ಡಸದ ದಿನ ಪುರುಷರು ಕೆರೆ ಮತ್ತು ಹೊಳೆಯಲ್ಲಿ ಮೀನು ಬೇಟೆಯಾಡುತ್ತಾರೆ. ಕೊನೆಯ ಕೆಡ್ಡಸ ದಿನದಂದು ಮಹಿಳೆಯರು ಮನೆಯ ಮುಂದಿರುವ ಅಂUಳವನ್ನು ಸೆಗಣಿಯಿಂದ ಸಾರಿಸಿ ಹಲಸಿನ ಎಲೆಗಳನ್ನು ಇಡುತ್ತಾರೆ. ಎಲೆಯ ಮೇಲೆ ಹಣತೆ ಹಚ್ಚುತ್ತಾg.ೆ ಅದರ ಪಕ್ಕದಲ್ಲಿ ಸಾಬೂನು, ಶೀಗೆ ಕಾಯಿ, ಕೆಂಡ ಸೌದೆ, ಎಣ್ಣೆ, ಅರಿಶಿಣ ಕುಂಕುಮ, ಹೂವು ಇಟ್ಟು ಪೂಜೆ ಮಾಡಿದ ಬಳಿಕ ಭೂಮಿ ತಾಯಿಗೆ ಎಣ್ಣೆಯನ್ನು ಬಿಡುತ್ತಾg.É ಈ ಮೂಲಕ ಅರೆಭಾಷೆ ಗೌಡ ಜನಾಂಗದವರು ಕೆಡ್ಡಸ ಹಬ್ಬವನ್ನು ಭೂಮಿಯನ್ನು ತಾಯಿಯ ಸಂಕೇತವಾಗಿ ಸಾಂಪ್ರದಾಯಕವಾಗಿ ಆಚರಿಸುತ್ತಾರೆ.

ಸಂಗಯನಪುರದ ಅರೆಭಾಷೆ ಗೌಡ ಸಮಾಜದ ಸಭಾಂಗಣದಲ್ಲಿ ನಡೆದ ಕೆಡ್ಡಸ ಕಾರ್ಯಕ್ರಮದಲ್ಲಿ ಸಮಾಜದ ಮಹಿಳೆಯರಾದ ಎಡಿಕೇರಿ ಲೀಲಾವತಿ ಜಯರಾಮ್, ಪರ್ಲಕೋಟಿ ಶೈಲಾ ಸತೀಶ್, ತೊತ್ತಿಯನ ತಾರ ಚಂದ್ರಶೇಖರ್ ಸಮಾಜದ ಅಧ್ಯಕ್ಷ ದೇವಾಯಿರ ಗಿರೀಶ್, ಕಾರ್ಯದರ್ಶಿ ಕುಯ್ಯಮುಡಿ ಜಯಕುಮಾರ್, ನಿರ್ದೇಶಕರಾದ ಚೀಯಂಡಿ ದೇವಯ್ಯ, ಪರ್ಲಕೋಟಿ ಸತೀಶ್ ಕುಮಾರ್ ಮುಂತಾದವರು ಪಾಲ್ಗೊಂಡಿದ್ದರು.

- ಭಾಸ್ಕರ್ ಮುಳ್ಳೂರು