ಗೋಣಿಕೊಪ್ಪ ವರದಿ, ಫೆ. ೧೪ : ಯುಕೊ ಸಂಘಟನೆಯ ನೇತೃತ್ವದಲ್ಲಿ ಜಾಗತಿಕ ಕೊಡವ ಹೆಣ್ಣುಮಕ್ಕಳ ದಿನವನ್ನು ಬೇದ ಚಂಗ್ರಾAದಿ ಹಿನ್ನೆಲೆಯೊಂದಿಗೆ ಕಿರುಗೂರು ಗ್ರಾಮದ ಯುನೈಟೆಡ್ ಕೊಡವ ಆರ್ಗನೈಸೇಷನ್ ಸಂಘಟನೆಗಾಗಿ ನಿಯೋಜಿತ ಜಾಗದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಯುಕೊ ಸಂಘಟನೆಯ ನೇತೃತ್ವದಲ್ಲಿ, ಕೊಡವತಿಯರಿಗೆ ಯುಕೊ ಸಂಘಟನೆಯ ಕೇಂದ್ರ ಸ್ಥಳದಲ್ಲಿ ಸೇರಿ, ಸಾಂಪ್ರದಾಯಿಕವಾಗಿ ನೆಲ್ಲಕ್ಕಿಯಲ್ಲಿ ನಿಂತು ಪ್ರಾರ್ಥಿಸಲಾಯಿತು. ಕಿರುಗೂರು ಗ್ರಾಮದ ಚೆಪ್ಪುಡಿರ ಸುಜು ಕರುಂಬಯ್ಯ ಅವರ ಭತ್ತದ ಗದ್ದೆಗೆ ತೆರಳಿ, ನಡು ಬೇದ ಸಂಪ್ರದಾಯದAತೆ ಮಹಿಳೆಯರು ಭೂಮಿಗೆ ತೋರ ತೊಪ್ಪು ಎಲೆಯಲ್ಲಿ ಅಕ್ಕಿಯನ್ನು ಇಟ್ಟು, ಭೂಮಿಗೆ ಕೈ ಎಣ್ಣೆ ಸುರಿದು, ಪಕ್ಕದಲ್ಲಿ ಮಿಳ್ಳಿಯಲ್ಲಿ ನೀರು, ಮರದ ಬಾಚಣಿಕೆಯನ್ನಿಟ್ಟು ಭೂಮಿತಾಯಿ, ನೀಡ ಉಟ್ಟಿ ಮಂಡೆ ಕಾಂಜದ್ ತಂಪಾಡ್, ಕುಂಬ್ಯಾತ್ ಮಳೆಯಾಯಿತ್, ಕುಂದ್‌ಲೂ ಕೂಳಾಡ್” ಎಂದು ಸೂರ್ಯದೇವನಿಗೆ ಅಕ್ಕಿಯನ್ನು ಪ್ರೋಕ್ಷಣೆ ಮಾಡಿ, ಭೂಮಿತಾಯಿಯ ಪಾದ ಮುಟ್ಟಿ ನಮಸ್ಕರಿಸಲಾಯಿತು.
ಯುಕೊ ಸಂಘಟನೆಯ ನಿಯೋಜಿತ ಸ್ಥಳದಲ್ಲಿ ಸಭೆ ನಡೆಸಲಾಯಿತು. ಯುಕೊ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮಾತನಾಡಿ, ಬೇದ ಚಂಗ್ರಾAದಿ ಆಚರಣೆಯಲ್ಲಿ ಹೆಣ್ಣುಮಕ್ಕಳೇ ಪ್ರಧಾನ ಪಾತ್ರವನ್ನು ನಿರ್ವಹಿಸುತ್ತಾರೆ. ಈ ಆಚರಣೆಯು ಮಣ್ಣ್ ಮನಸ್ಥಾನಕ್ಕೆ ವಿಶೇಷÀ ಆದ್ಯತೆ ನೀಡುವ ಕೊಡವ ಜನಾಂಗ ಮತ್ತು ಪ್ರಕೃತಿ ನಡುವಿನ ಭಾವನಾತ್ಮಕ ಸಂಬAಧವನ್ನು ದೃಢಪಡಿಸುವ ವಿಶೇಷತೆ ಇದೆ ಎಂದರು.
ಭೂಮಿತಾಯಿಗೆ ಸಾಕ್ಷಾತ್ ಹೆಣ್ಣಿನ ಸ್ಥಾನವನ್ನು ನೀಡಿ, ಬೇದ ಚಂಗ್ರಾAದಿಯ ಮೂರು ದಿನ ಆಕೆಗೆ ಮುಟ್ಟಿನ ದಿನವೆಂಬ ನಂಬಿಕೆಯೊAದಿಗೆ, ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಹೆಣ್ಣಿಗೆ ಮಾಡುವ ಆರೈಕೆಯನ್ನು ಭೂಮಿತಾಯಿಗೆ ಮಾಡುವುದೇ ನಡುಬೇದ ಆಚರಣೆಯ ಪ್ರಾಮುಖ್ಯತೆಯಾಗಿದೆ. ಮಹಿಳೆಯರೇ ಸಾಂಪ್ರದಾಯಿಕವಾಗಿ ಆಚರಣೆಯಲ್ಲಿ ನೇರವಾಗಿ ಪಾಲ್ಗೊಳ್ಳುವುದು. ಆಚರಣೆಯ ವಿಶೇಷ ಹಾಗೆಯೇ ಈ ಆಚರಣೆಯು ಕೊಡವ ಮಹಿಳೆಯರ ಆರೋಗ್ಯ ಹಾಗೂ ಆರೈಕೆಯ ದೃಷ್ಟಿಯಿಂದಲೂ, ಹೆಣ್ಣು ಹಾಗೂ ಭೂಮಿಯ ಫಲವತ್ತತೆಯ ದೃಷ್ಠಿಯಿಂದಲೂ ಮಹತ್ವ ಪಡೆದುಕೊಂಡಿದೆ. ‘ನಡುಬೇದ ಚಂಗ್ರಾAದಿ’ ಆಚರಿಸುವ ಫೆಬ್ರವರಿ ೧೨ ನೇ ದಿನಾಂಕವನ್ನು ಕಳೆದ ವರ್ಷ ಘೋಷಿಸಿದಂತೆ “ಜಾಗತಿಕ ಕೊಡವ ಹೆಣ್ಣುಮಕ್ಕಳ ದಿನ”ವಾಗಿ ಆಚರಿಸಲಾಗುತ್ತಿದೆ.
ಕೊಡವ ಜನಾಂಗದ ಸಾಮಾಜಿಕ, ಸಾಂಸ್ಕೃತಿಕ, ಅಧ್ಯಾತ್ಮಿಕ ಹಾಗೂ ರಾಜಕೀಯ ಅಸ್ತಿತ್ವವನ್ನು ಒಳಗೊಂಡ ಕೊಡವಾಮೆಯನ್ನು ಉಳಿಸಿ ಬೆಳೆಸುವ ನಿರಂತರ ಪ್ರಕ್ರಿಯೆಯ ಭಾಗವಾಗಿ, ೭ ವರ್ಷಗಳಿಂದ ಬೇದ ಚಂಗ್ರಾAದಿಯನ್ನು ಆಚರಣೆ ಮಾಡಿಕೊಂಡು ಬಂದಿದೆ. ಇದರಿಂದಾಗಿ ಜನಾಂಗದ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಶಕ್ತಿ ವೃದ್ಧಿಸಿ, ಅಧ್ಯಾತ್ಮಿಕ ಶಕ್ತಿಯೂ ಜಾಗೃತವಾಗುವಾಗುವುದರೊಂದಿಗೆ ಪ್ರಕೃತಿಯೊಂದಿಗೆ ಸಮತೋಲನವನ್ನು ಕಾಪಾಡಿಕೊಂಡು ಕೊಡವ ಜನಾಂಗದ ಪರಂಪರೆಯ ಅಸ್ತಿತ್ವವನ್ನು ಉಳಿಸಿಕೊಳ್ಳಬಹುದಾಗಿದೆ ಎಂದರು.
ಹಿರಿಯರಾದ ಡಾ. ಕಾಳಿಮಾಡ ಶಿವಪ್ಪ ಮಾತನಾಡಿ, ಕೊಡವರಲ್ಲಿನ ಬುದ್ಧಿವಂತಿಕೆ, ಚತುರತೆ, ಸತ್ಯ, ನಿಷ್ಠೆ, ಸೌಂದರ್ಯ, ಎಲ್ಲದರಲ್ಲೂ ನಮ್ಮ ಮಣ್ಣಿನ ಪ್ರಭಾವವಿದೆ. ಸಂಪ್ರದಾಯಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ನಮ್ಮ ಜೀವಿತವನ್ನು ಅರ್ಥಪೂರ್ಣವಾಗಿಸಿಕೊಳ್ಳಬಹುದು ಎಂದು ಹೇಳಿದರು.
ಉಪನ್ಯಾಸಕಿ ಡಾ. ಮುಲ್ಲೇಂಗಡ ರೇವತಿ ಪೂವಯ್ಯ ಮಾತನಾಡಿ, ಬೇದವೆಂಬ ಪದವನ್ನು ನಾವು ಕೇಳುತ್ತಾ ಬೆಳೆದಿದ್ದೇವೆ, ಆದರೆ ಮಹತ್ವ ತಿಳಿದಿರಲಿಲ್ಲ. ಒಂದು ಜನಾಂಗದ ಅಸ್ತಿತ್ವ ಜನಾಂಗದ ಪರಂಪರೆಗಳ ಪರಿಪಾಲನೆಯ ಮೇಲೆ ಅವಲಂಬಿತವಾಗಿರುತ್ತದೆ. ಬೇದ ಚಂಗ್ರಾAದಿಯAತಹ ಆಚರಣೆಗಳು ಕೊಡವಾಮೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅನಿವಾರ್ಯವೆನಿಸುತ್ತದೆ ಎಂದರು. ಮಣ್ಣಿಗೂ ಕೊಡವರಿಗೂ ಅವಿನಾಭಾವ ಸಂಬAದವಿದೆ. ಮಣ್ಣು ಕೊಡವರನ್ನು ಸುಲಭದಲ್ಲಿ ಬಿಟ್ಟುಕೊಡುವುದಿಲ್ಲ, ಆದರೆ, ಕೊಡವರೇ ಬಲವಂತವಾಗಿ ಈ ಮಣ್ಣಿನಿಂದ ದೂರವಾದರೆ ಬದುಕು ದುಸ್ತರವಾಗಬಹುದು ಎಂದು ಹೇಳಿದರು. ಬೇದ ಚಂಗ್ರಾAದಿ ಭೂಮಿಯ ಫಲವತ್ತತೆಯ ಮಹತ್ವವನ್ನು ಹೊಂದಿದೆ. ಕೊಡವ ಮಹಿಳೆಯರು ಹಾಗೂ ಪುರುಷÀರು ದೈಹಿಕವಾಗಿ ಫಲವತ್ತತೆಯನ್ನು ಕಾಪಾಡಿಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು.
ವೀರಾಜಪೇಟೆ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ತಾತಂಡ ಜ್ಯೋತಿ ಪ್ರಕಾಶ್, ಮೂರ್ನಾಡು ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಪಳಂಗAಡ ರೇಖ, ತೂಕ್ ಬೊಳಕ್ ಕಲೆ ಕ್ರೀಡೆ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮುಲ್ಲೇಂಗಡ ಮದೋಶ್ ಪೂವಯ್ಯ, ಪೊಂಬೊಳ್ಚ ಕೂಟದ ಅಧ್ಯಕ್ಷ ಮೇಜರ್ ಬಿದ್ದಂಡ ನಾಣಿ ದೇವಯ್ಯ ಮಾತನಾಡಿದರು.
ವೀರಾಜಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಸದಸ್ಯರು, ಮೂರ್ನಾಡ್ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಸದಸ್ಯರು, ಪೊನ್ನಂಪೇಟೆ ಕೊqವ ಸಮಾಜದ ನಿರ್ದೇಶಕಿ ಮೂಕಳೆರ ಕಾವ್ಯ ಮಧು, ಟಿ. ಶೆಟ್ಟಿಗೇರಿ ಕೊಡವ ಸಮಾಜದ ನಿರ್ದೇಶಕ ಕೋಟ್ರಮಾಡ ಸುಮಂತ್, ಶೀತಲ್, ಮೂಕಳೇರ ಪಟ್ಟು ಲೀಲಾವತಿ, ಕೂಕಂಡ ಲತ, ಸಾಹಿತಿ ಕಬ್ಬಚ್ಚಿರ ರಶ್ಮಿ, ಕೋಟೆರ ಉದಯ್ ಪೂಣಚ್ಚ, ಉದ್ಯಮಿ ಕಾಳೇಂಗಡ ಜಗತ್, ನೀನ ಜಗತ್, ಸೋಮೆಯಂಡ ರೇಶ ತಿಮ್ಮಯ್ಯ, ಮುಕ್ಕಾಟಿರ ಬೀನ ಪ್ರಸನ್ನ, ಕಾಳಿಮಾಡ ಕಾವ್ಯ ನಿರನ್, ಚಟ್ಟಂಗಡ ಗೀತ, ರಮಾ, ಪೊಂಬೊಳ್ಚ ಕೂಟದ ಸದಸ್ಯರು ಭಾಗವಹಿಸಿದ್ದರು.
ಯುಕೊ ಹಾಗೂ ವಾಯ್ಸ್ ಆಫ್ ಕೊಡವ ಸದಸ್ಯರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ಚೆಪ್ಪುಡಿರ ಸುಜು ಕರುಂಬಯ್ಯ ಸ್ವಾಗತಿಸಿ ವಂದಿಸಿದರು. ವಿಶೇಷÀ ಕೊಡವ ಸಾಂಪ್ರದಾಯಿಕ ಭೋಜನ ಗಮನ ಸೆಳೆಯಿತು.