ಮಡಿಕೇರಿ, ಫೆ. ೧೩: ನಗರದ ರಸ್ತೆಗಳಲ್ಲಿ ಓಡಾಡುತ್ತಿದ್ದ ಬೀಡಾಡಿ ದನಗಳನ್ನು ನಗರಸಭೆ ಸಿಬ್ಬಂದಿ ವರ್ಗ ಗೋಶಾಲೆಗೆ ಸಾಗಿಸಿದೆ.
ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿನ ಪ್ರಮುಖ ರಸ್ತೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬೀಡಾಡಿ ದನಗಳು ನಿರ್ಬಂಧವಿಲ್ಲದೆ ಓಡಾಡುತ್ತಿದ್ದು, ಇದರಿಂದ ವಾಹನ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿರುವ ಕುರಿತು ಈ ಹಿಂದೆ ನಗರಸಭೆ ಎಚ್ಚರಿಕೆ ನೀಡಿ, ಮಾಲೀಕರು ಜಾನುವಾರುಗಳನ್ನು ನಿಯಂತ್ರಣದಲ್ಲಿಟುಕೊಳ್ಳುವAತೆ ಸೂಚಿಸಿತ್ತು.
ಬೀಡಾಡಿ ದನಗಳಿಂದ ರಸ್ತೆ ಅಪಘಾತಗಳು, ಜೀವಹಾನಿ ಹಾಗೂ ಆಸ್ತಿನಷ್ಟ ಸಂಭವಿಸುವ ಸಾಧ್ಯತೆ ಇದ್ದು, ಸಂಬAಧಿಸಿದ ವಾರೀಸುದಾರರು ದನ, ಹಸುಗಳನ್ನು ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಿಡುವುದನ್ನು ತಕ್ಷಣವೆ ನಿಲ್ಲಿಸುವಂತೆ ನಗರಸಭೆ ಪೌರಾಯುಕ್ತ ಎಚ್.ಆರ್. ರಮೇಶ್ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಸೂಚಿಸಿ ಫೆ. ೬ ರವರೆಗೆ ಗಡುವು ನೀಡಿದ್ದರು. ನಂತರ ಯಾವುದೇ ಬೀಡಾಡಿ ದನಗಳು ರಸ್ತೆಯಲ್ಲಿ ಓಡಾಡುವುದು ಕಂಡುಬAದಲ್ಲಿ ಮುನ್ಸೂಚನೆ ನೀಡದೇ ಗೋ ಶಾಲೆಗೆ ಸ್ಥಳಾಂತರಿಸಲಾಗುವುದಾಗಿಯೂ ಎಚ್ಚರಿಸಿದ್ದರು.
ಇದೀಗ ೩ ಹಸುಗಳನ್ನು ಕುಶಾಲನಗರದ ಪುಣ್ಯಕೋಟಿ ಗೋಶಾಲೆಗೆ ಸಾಗಿಸಲಾಗಿದೆ. ಮುಂದೆಯೂ ಕಾರ್ಯಾಚರಣೆ ಕೈಗೊಂಡು ರಸ್ತೆ ಹಾಗೂ ಸಾರ್ವಜನಿಕ ಪ್ರದೇಶದಲ್ಲಿ ಓಡಾಡುವ ಬೀಡಾಡಿ ಜಾನುವಾರುಗಳನ್ನು ಹಿಡಿದು ಗೋಶಾಲೆಗೆ ಕಳುಹಿಸಲಾಗುವುದು ಎಂದು ರಮೇಶ್ ತಿಳಿಸಿದ್ದಾರೆ.