ಮಡಿಕೇರಿ, ಫೆ. ೧೩: ಮದೆನಾಡು ಗ್ರಾ.ಪಂ.ವ್ಯಾಪ್ತಿಯಲ್ಲಿ ಸುಮಾರು ೩ ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ಶಾಸಕರಾದ ಎ.ಎಸ್. ಪೊನ್ನಣ್ಣ ಚಾಲನೆ ನೀಡಿದರು.

ಕಾಟಕೇರಿ ಬಳಿಯ ಕಾಸ್ಪಾಡಿ ರಸ್ತೆ, ಭಗವತಿ ದೇವಸ್ಥಾನ ರಸ್ತೆ ಕಾಮಗಾರಿಗೆ ಭೂಮಿ ಪೂಜೆ, ಅಪ್ಪೇಂದ್ರೀಯಪ್ಪ ದೇವಸ್ಥಾನ ರಸ್ತೆ ಉದ್ಘಾಟನೆ, ಕಾಟಕೇರಿ ಗೋಳಿಕಟ್ಟೆ ಮುಖ್ಯ ರಸ್ತೆ, ಮದೆನಾಡು ಬೈರೆಟ್ಟಿರ ಜಂಕ್ಷನ್ ರಸ್ತೆ ಮತ್ತು ಮದೆನಾಡು ಮಠದ ಮನೆ ರಸ್ತೆಯನ್ನು ಉದ್ಘಾಟಿಸಿದ ಬಳಿಕ ಗೋಳಿಕಟ್ಟೆ ಸರ್ಕಾರಿ ಶಾಲೆ ಪರಿಶೀಲಿಸಿದರು, ಕೋಲ್ಪೆ ದೈವಸ್ಥಾನ ರಸ್ತೆ ಉದ್ಘಾಟಿಸಿದರು. ಹಾಗೆಯೇ ದೇಶ್‌ಕೋಡಿ, ಸಾಲಾಪು ರಸ್ತೆ ಭೂಮಿ ಪೂಜೆ ನೆರವೇರಿಸಿದರು. ನಂತರ ಕೋಲ್ಚಾರು ರಸ್ತೆ ಉದ್ಘಾಟನೆ, ಕೆಮ್ಮಾರನ ಶಿರಾಜ್ ರಸ್ತೆ ಉದ್ಘಾಟಿಸಿದರು. ಬಳಿಕ ನೆರಿಯನ ಐನ್‌ಮನೆಗೆ ಭೇಟಿ ನೀಡಿದರು, ಹಾಗೆಯೇ ಈಶ್ವರಪ್ಪ ಮಾದೂರಪ್ಪ ರಸ್ತೆ ಉದ್ಘಾಟಿಸಿದರು. ಜೋಡುಪಾಲ ಕಿರಿಕಿಲ್ ರಸ್ತೆ ಭೂಮಿಪೂಜೆ ನೆರವೇರಿಸಿ ಅಬ್ಬಿಕೊಲ್ಲಿ ರಸ್ತೆ ಉದ್ಘಾಟಿಸಿದರು. ಕುಡಿಯರ ಕಾಲೋನಿಯಲ್ಲಿ ಕುಂದುಕೊರತೆ ಸಭೆ ನಡೆಸಿದರು. ಕಾಟಕೇರಿ ಕೂರನ ಬಾಣೆ ರಸ್ತೆ ತಾಳತ್ತಮನೆ, ಮಂಗಳೂರು-ಭಾಗಮAಡಲ ಲಿಂಕ್ ರಸ್ತೆ ಉದ್ಘಾಟಿಸಿದರು. ತಾಳತ್ತಮನೆ ದುರ್ಗಾ ಭಗವತಿ ದೇವಸ್ಥಾನ ರಸ್ತೆ ಭೂಮಿ ಪೂಜೆ ನೆರವೇರಿಸಿದರು.ಈ ಸಂದರ್ಭ ಮಾತನಾಡಿದ ಎ.ಎಸ್. ಪೊನ್ನಣ್ಣ ಅವರು ಮದೆನಾಡು ಗ್ರಾ.ಪಂ.ವ್ಯಾಪ್ತಿಯಲ್ಲಿ ಸುಮಾರು ೩ ಕೋಟಿ ರೂ. ವೆಚ್ಚದ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ಹಾಗೂ ಉದ್ಘಾಟನೆ ನೆರವೇರಿಸಲಾಗಿದೆ ಎಂದರು. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಕಳೆದ ಎರಡೂವರೆ ವರ್ಷದಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗಿದೆ. ಸುಮಾರು ೨,೫೦೦ ಕಿಮೀ. ರಸ್ತೆ ಅಭಿವೃದ್ಧಿಗೆ ಮುಂದಾಗಲಾಗಿದೆ. ಮುಖ್ಯಮಂತ್ರಿಯವರ ರಸ್ತೆ ಅಭಿವೃದ್ಧಿ ಯೋಜನೆಯಡಿ ೫೦ ಕೋಟಿ ರೂ., ಜತೆಗೆ ಹೆಚ್ಚುವರಿಯಾಗಿ ೩೦ ಕೋಟಿ ರೂನಂತೆ ರಸ್ತೆ, ಸೇತುವೆ, ತಡೆಗೋಡೆ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ಸರ್ಕಾರ ಅನುದಾನ ಒದಗಿಸಿದೆ. ಜಲಜೀವನ್ ಮಿಷನ್ ಯೋಜನೆಯಡಿ ಕೊಡಗು ಜಿಲ್ಲೆಗೆ ಇನ್ನೂ ಅನುದಾನ ಬರಬೇಕಿದೆ. ಕುಡಿಯುವ ನೀರಿನ ಯೋಜನೆಗಾಗಿ ೫೮ ಕೋಟಿ ರೂ. ವಿನಿಯೋಗಿಸಲಾಗುತ್ತಿದೆ ಎಂದು ತಿಳಿಸಿದರು.

ಜಮ್ಮಾ ಬಾಣೆ ಸಂಬAಧಿಸಿದAತೆ ಪ್ರತಿಕ್ರಿಯಿಸಿದ ಶಾಸಕರು ಪಟ್ಟೆದಾರರ ಭೂಮಿ ಸಂಬAಧ ಸಮಸ್ಯೆ ಪರಿಹರಿಸಲು ಶ್ರಮಿಸಲಾಗಿದೆ. ಹಿಂದಿನ ಶಾಸಕದ್ವಯರು ಸಹ ಜಮ್ಮಾಬಾಣೆ ಭೂಮಿ ಸಮಸ್ಯೆ ಪರಿಹರಿಸಲು ತಮ್ಮದೇ ಆದ ಪ್ರಯತ್ನ ಮಾಡಿದ್ದಾರೆ ಎಂದು ನುಡಿದರು.

ರಾಜ್ಯ ಬಜೆಟ್ ಕುರಿತು ಪ್ರತಿಕ್ರಿಯಿಸಿದ ಶಾಸಕರು ಕಳೆದ ಬಾರಿ ಬಜೆಟ್‌ನಲ್ಲಿ ವೀರಾಜಪೇಟೆ ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಮುಂದಾಗಲಾಗಿದೆ. ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಯನ್ನು ೫೦ ಹಾಸಿಗೆ ಆಸ್ಪತ್ರೆಯನ್ನಾಗಿ ಮತ್ತು ಹುದಿಕೇರಿ ಆಸ್ಪತ್ರೆಯನ್ನು ಸಮುದಾಯ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವಲ್ಲಿ ಪ್ರಕಟಿಸಲಾಗಿತ್ತು, ಅದರಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಸ್ಥಳ ಪರಿಶೀಲಿಸಲಿದ್ದು, ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುತ್ತದೆ ಎಂದು ವಿವರಿಸಿದರು.

ಕೊಡಗು ಜಿಲ್ಲೆಯಲ್ಲಿ ವಿದ್ಯುತ್ ಬಲವರ್ಧನೆಗೆ ಕ್ರಮವಹಿಸಲಾಗಿದೆ. ಆನೆ ಮತ್ತು ಮಾನವ ಸಂಘರ್ಷ ತಡೆಯಲು ೨೨ ಕಿ.ಮೀ. ಉದ್ದದ ಕಂದಕ/ ಬೇಲಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದರು.

ಕಳೆದ ಬಾರಿ ಬಜೆಟ್‌ನಲ್ಲಿ ಕೊಡಗು ಜಿಲ್ಲೆಗೆ ಘೋಷಣೆ ಮಾಡಿದ್ದ ಯೋಜನೆಗಳಿಗೆ ಚಾಲನೆ ನೀಡಲಾಗುತ್ತಿದೆ. ಇವು ಪೂರ್ಣಗೊಳ್ಳಬೇಕು. ಮುಂದಿನ ಬಜೆಟಿನಲ್ಲಿ ಕೊಡಗು ಜಿಲ್ಲೆಗೆ ವಿಶೇಷ ಪ್ರಾಧಾನ್ಯತೆ ದೊರೆಯುವ ಸಾಧ್ಯತೆ ಇದೆ.

ಕಾವೇರಿ ನದಿ ಪಾತ್ರದಲ್ಲಿನ ತಗ್ಗು ಪ್ರದೇಶದಲ್ಲಿ ತಡೆಗೋಡೆ ನಿರ್ಮಾಣ ಹಾಗೂ ಸ್ವಚ್ಚತೆಗೆ ಸುಮಾರು ೫೦ ಕೋಟಿ ರೂ ವಿನಿಯೋಗಿಸಲಾಗುತ್ತಿದೆ. ಹಾಗೆಯೇ ಲಕ್ಷö್ಮಣ ತೀರ್ಥ ನದಿ ದಂಡೆಯಲ್ಲಿ ವಾಸಿಸುವ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ, ಪುನರ್ ವಸತಿ ಕಲ್ಪಿಸಲು ೨೦ ಕೋಟಿ ರೂ ವೆಚ್ಚ ಮಾಡಲಾಗುತ್ತಿದೆ ಎಂದು ಶಾಸಕರು ಮಾಹಿತಿ ನೀಡಿದರು. ಗ್ರಾ.ಪಂ ಅಧ್ಯಕ್ಷೆ ವಿಮಲಾಕ್ಷಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ, ಪ್ರಮುಖರಾದ ಕೊಲ್ಯದ ಗಿರೀಶ್, ತಹಶೀಲ್ದಾರ್ ಶ್ರೀಧರ, ತಾ.ಪಂ.ಇಒ ಶೇಖರ್, ಗ್ರಾ.ಪಂ.ಸದಸ್ಯರಾದ ಆಗಸ್ಟಿನ್ ಜಯರಾಜ್, ಸೈಯದ್ ಅಲ್ವಿ, ಸೂರಜ್ ಹೊಸೂರು, ಇಸ್ಮಾಯಿಲ್, ಮಜ್ಜಿಗೆಮನೆ ದೀಪಕ್, ಸ್ಥಳೀಯ ಪ್ರಮುಖರು ಹಾಗೂ ಗ್ರಾ.ಪಂ.ಸದಸ್ಯರು, ಅಧಿಕಾರಿಗಳು ಇತರರು ಇದ್ದರು.