ಸೋಮವಾರಪೇಟೆ, ಫೆ. ೧೩: ಇಲ್ಲಿನ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ತಾ. ೧೫ ಮತ್ತು ೧೬ ರಂದು ಮಹಾಶಿವರಾತ್ರಿ ಉತ್ಸವ ನಡೆಯಲಿದೆ.

ತಾ.೧೫ರ ಬೆಳಿಗ್ಗೆ ೭.೧೫ರಿಂದ ಏಕವಾರು ರುದ್ರಾಭಿಷೇಕ, ಕಳಶ ಪೂರಕ ಏಕಾದಶವಾರ ರುದ್ರ ಪಾರಾಯಣ, ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ. ಸಂಜೆ ೬ಕ್ಕೆ ಶ್ರೀ ಗಣಪತಿ, ಸೋಮೇಶ್ವರ ಹಾಗೂ ಪಾರ್ವತಿ ಸನ್ನಿಧಿಯಲ್ಲಿ ರಂಗಪೂಜೆ ನಡೆಯಲಿದೆ.

೬.೩೦ಕ್ಕೆ ರುದ್ರಾಕ್ಷೇಶ್ವರ ಸನ್ನಿಧಿಯಲ್ಲಿ ಬೆಂಗಳೂರಿನ ರಾಮಕೃಷ್ಣ ಆಶ್ರಮದ ಚೇತನ್ ಮತ್ತು ತಂಡದವರಿAದ ಭಜನೆ ಹಾಗೂ ಸಂಗೀತ ಕಾರ್ಯಕ್ರಮ ನಂತರ ದೇವಿ ಬಳಗ ಮತ್ತು ಶ್ರೀ ಮಾತಾ ಬಳಗದಿಂದ ಭಜನಾ ಕಾರ್ಯಕ್ರಮ ನಡೆಸಲಾಗುವುದು. ರಾತ್ರಿ ೮ಕ್ಕೆ ಸಹಸ್ರಬಿಲ್ವಾರ್ಚನೆ ಮತ್ತು ರಜತ ಕಳಶಾಭಿಷೇಕದೊಂದಿಗೆ ಅಭಿಷೇಕ, ಸೋಮೇಶ್ವರನಿಗೆ ೧೨೧ ಕಳಶಗಳಿಂದ ಅಭಿಷೇಕ ನಡೆಯಲಿದೆ.

ತಾ. ೧೬ರ ಬೆಳಿಗ್ಗೆ ೭.೩೦ರಿಂದ ರುದ್ರಹೋಮ ಸಂಕಲ್ಪ, ಕಳಶಾರಾಧನೆ, ರುದ್ರಹೋಮ ಹಾಗೂ ೧೨ಕ್ಕೆ ಪೂರ್ಣಾಹುತಿ, ಮಹಾಮಂಗಳಾರತಿ ಮತ್ತು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ನಂದಕುಮಾರ್ ತಿಳಿಸಿದ್ದಾರೆ.

ಮಸಗೋಡು : ಮಸಗೋಡು ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ತಾ. ೧೫ ಮತ್ತು ೧೬ರಂದು ಅದ್ಧೂರಿ ಮಹಾಶಿವರಾತ್ರಿ ಪೂಜಾ ಉತ್ಸವ ನಡೆಸಲಾಗುವುದು ಎಂದು ದೇವಾಲಯ ಸಮಿತಿ ಅಧ್ಯಕ್ಷ ಬಂಗೀರಮನೆ ಸತೀಶ್ ತಿಳಿಸಿದ್ದಾರೆ.

ತಾ. ೧೫ರ ಸಂಜೆ ೬ಕ್ಕೆ ದೇವಾಲಯದಲ್ಲಿ ಪೂಜಾ ಕಾರ್ಯಕ್ರಮಗಳು ಪ್ರಾರಂಭಗೊಳ್ಳುವುದು. ೯ಕ್ಕೆ ರುದ್ರಾಭಿಷೇಕ ಮತ್ತು ಪ್ರಸಾದ ವಿನಿಯೋಗ ನಡೆಯುವುದು. ೧೬ರ ಬೆಳಿಗ್ಗೆ ೬ ಗಂಟೆಯಿAದ ಗಂಗಾಪೂಜೆ, ಬಸವಣ್ಣನ ಅಡ್ಡೆ, ವೀರಗಾಸೆ ಮೆರವಣಿಗೆ ನಡೆಸಲಾಗುವುದು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.