ಶನಿವಾರಸಂತೆ, ಫೆ. ೧೩: ಪಟ್ಟಣದಿಂದ ೧೨ ಕಿ.ಮೀ ದೂರದ ಮಾಲಂಬಿ ಬೆಟ್ಟದಲ್ಲಿರುವ ಮಳೆ ಮಲ್ಲೇಶ್ವರ ದೇವಾಲಯ ಮಹಾಶಿವರಾತ್ರಿ ವಿಶೇಷ ಪೂಜೆಗೆ ಸಜ್ಜಾಗಿದೆ.
ಶ್ರೀ ಮಳೆ ಮಲ್ಲೇಶ್ವರ ದೇವಾಲಯ ಸಮಿತಿ ವತಿಯಿಂದ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ೨೮ ನೇ ವಾರ್ಷಿಕ ಪೂಜಾ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಅಂದು ಬೆಳಗ್ಗಿನ ಜಾವ ೪-೩೦ ರಿಂದ ಶ್ರೀರುದ್ರ, ಪುರುಷ ಸೂಕ್ತ ಪಾರಾಯಣ, ವೇದಪಾರಾಯಣ ಸಹಿತ ಮಹಾರುದ್ರಾಭಿಷೇಕ ಮಹೋತ್ಸವ ನಡೆಯುತ್ತದೆ.ನಂತರ ಬೆಳಿಗ್ಗೆ ೭ ಗಂಟೆಯಿAದ ೨-೩೦ ರವರೆಗೆ ಪೂಜಾ ಕೈಂಕರ್ಯ ನಡೆಯಲಿದೆ.ಮಧ್ಯಾಹ್ನ ೧೨-೩೦ ಕ್ಕೆ ಮಹಾಮಂಗಳಾರತಿಯಾಗಿ ತೀರ್ಥ-ಪ್ರಸಾದ ವಿನಿಯೋಗವಾಗಲಿದೆ. ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.
ಕೊಡಗಿನ ಏಳು ಸಾವಿರ ಸೀಮೆಬೆಟ್ಟ ಸಾಲುಗಳಲ್ಲಿ ೩ ನೇ ಅತಿ ಎತ್ತರದ ಬೆಟ್ಟವಾಗಿದೆ. ಕೊಡಗಿನ ಬೆಡಗಿನ ಬೆಟ್ಟಗಳ ಸಾಲಿನಲ್ಲಿ ಬರುವ ಈ ಬೆಟ್ಟ ಐತಿಹಾಸಿಕ ಮಹತ್ವ ಹೊಂದಿದೆ. ಸೋಮವಾರಪೇಟೆ ತಾಲೂಕಿನ ಪುಷ್ಪಗಿರಿ ಬಿಟ್ಟರೆ ಮಾಲಂಬಿ ಬೆಟ್ಟವೇ ಎರಡನೇ ಅತಿ ಎತ್ತರದÀ ಬೆಟ್ಟ. ಹೀಗಾಗಿ,ಈ ಬೆಟ್ಟ ಶಿವರಾತ್ರಿಗೆ ಮಾತ್ರವಲ್ಲ; ಪ್ರವಾಸೋದ್ಯಮ ದೃಷ್ಟಿಯಿಂದಲೂ ಮಹತ್ವ ಪಡೆದಿದ್ದು, ಚಾರಣಿಗರಿಗೆ ಅತ್ಯಂತ ಪ್ರಿಯವಾಗಿದೆ.
ಮಾಲಂಬಿ ಬೆಟ್ಟದ ಎತ್ತರ ೫,೪೯೪ ಅಡಿ. ಇದರ ತುದಿಗೆ ಹೋಗಿ ನಿಂತರೆ ಸುತ್ತಮುತ್ತಲಿನ ಸಿರಿ ಹಸಿರು ಕಣ್ಮನ ತಣಿಸುತ್ತದೆ. ಅಂಕುಡೊAಕಾಗಿ ಸೊಂಪಾಗಿ ಬೆಳೆದು ನಿಂತಿರುವ ಕಾಫಿ ತೋಟಗಳ ಐಸಿರಿ ಮನಸೆಳೆಯುತ್ತದೆ. ಬೆಟ್ಟದ ತುದಿಯಲ್ಲಿ ನಿರ್ಮಿಸಿರುವ ಮಳೆಮಲ್ಲೇಶ್ವರನ ದೇವಾಲಯ ಬೆಟ್ಟಕ್ಕೆ ಕಿರೀಟವಿಟ್ಟಂತೆ ಕಾಣುತ್ತದೆ. ಮಳೆಮಲ್ಲೇಶ್ವರನ ದೇವಾಲಯ ಹಳೆಯ ಕಾಲದ್ದು, ಬ್ರಿಟೀಷರ ಕಾಲದಿಂದಲೇ ಅಂದರೆ ೧೮೩೦ರಿಂದ ಮಾಲಂಬಿ ಬೆಟ್ಟದ ಮೇಲೆ ಮಳೆ ಮಲ್ಲೇಶ್ವರನಿಗೆ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ವೀರಶೈವ ರಾಜರು ಕೊಡಗನ್ನು ಆಳಿದ ಕಾರಣ ಶಿವನ ಆರಾಧನೆಯೇ ಇಲ್ಲಿ ಅಧಿಕವಾಗಿದೆ, ಮಳೆ ಮಲ್ಲೇಶ್ವರ ಗುಡಿಯೂ ಇದರಲ್ಲಿ ಒಂದು.
ಮಳೆ ಮಲ್ಲೇಶ್ವರನ ಮಹಿಮೆ : ಹಿಂದೊಮ್ಮೆ ಜಿಲ್ಲೆಯಲ್ಲಿ ಭೀಕರ ಕ್ಷಾಮ ಆವರಿಸಿಕೊಂಡಾಗ ಹಾಸನ ಜಿಲ್ಲೆಯ ಆರಕಲಗೂಡಿನಿಂದ ಶಿವನು ಮಲ್ಲೇಶ್ವರಕ್ಕೆ ಬಂದು ನೆಲೆಸಿದ ಎಂಬುದು ಪುರಾಣ ಕಥೆ. ಆಗ ಮಳೆಯಾಗಿದ್ದರಿಂದ ಈ ದೇವರಿಗೆ ಮಳೆ ಮಲ್ಲೇಶ್ವರ ಎಂಬ ಹೆಸರು ಬಂದಿತೆAದು ಪ್ರತೀತಿ. ಪ್ರತಿವರ್ಷ ಮಹಾಶಿವರಾತ್ರಿಯಂದು ಇಲ್ಲಿ ವಿವಿಧ ಪೂಜೆಗಳು, ಅನ್ನಸಂತರ್ಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಜಿಲ್ಲೆ ಹಾಗೂ ನೆರೆ ಜಿಲ್ಲೆಗಳಿಂದಲೂ ೧೫ ಸಾವಿರಕ್ಕೂ ಅಧಿಕ ಭಕ್ತರು ಬಂದು ಮುಂಜಾನೆಯಿAದಲೇ ಬೆಟ್ಟವೇರುವುದು ವಿಶೇಷ. ಬೆಟ್ಟ ಇಳಿದು ಬರುತ್ತಿರುವಂತೆ ತುಂತುರು ಮಳೆ ಸುರಿಯುತ್ತದೆ. ೧೯೯೯ರಲ್ಲಿ ದಾನಿಗಳು ಹಾಗೂ ಕಾಫಿ ಬೆಳೆಗಾರರು ರೂ ೧೦ ಲಕ್ಷ ವೆಚ್ಚದಲ್ಲಿ ಬೆಟ್ಟದ ತುದಿಯಲ್ಲಿನ ಗುಡಿಯನ್ನು ಜೀರ್ಣೋದ್ದಾರ ಮಾಡಿಸಿದರು. ೨೦೦೬ರಲ್ಲಿ ಪ್ರವಾಸೋದ್ಯಮ ಇಲಾಖೆಗೆ ಮಾಲಂಬಿಯ ಮಳೆಮಲ್ಲೇಶ್ವರ ಬೆಟ್ಟ ಸೇರಿಸಲಾಗಿದೆ. ೨೦೧೨-೧೩ ರ ಸಾಲಿನಲ್ಲಿ ಪ್ರವಾಸೋದÀ್ಯಮ ಇಲಾಖೆಯು ರೂ. ೬೫ ಲಕ್ಷ ವೆಚ್ಚದಲ್ಲಿ ಬೆಟ್ಟ ಅಭಿವೃದ್ದಿ ಪಡಿಸಿz.ೆ ಬೆಟ್ಟದ ಮಧ್ಯ ಭಾಗದ ಪ್ರಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಸಭಾಂಗಣ ನಿರ್ಮಿಸಲಾಗಿದೆ. ಮೆಟ್ಟಲಿನ ವ್ಯವಸ್ಥೆಯನ್ನೂ ಮಾಡಲಾಗಿದೆ. ಬೆಟ್ಟವೇರಿ ಬರುವ ಭಕ್ತರಿಗೆ ಸಮಿತಿ ವತಿಯಿಂದ ನೆರಳಿಗಾಗಿ ಶೇಡ್ ನೆಟ್ ಅಳವಡಿಸಲಾಗಿದೆ. ಸಮಿತಿ ಪದಾಧಿಕಾರಿಗಳು ಸ್ವಚ್ಛತೆಗೆ ಆದ್ಯತೆ ನೀಡಿ ಸ್ವತ: ಶ್ರಮದಾನ ಮಾಡುತ್ತಾರೆ. ದೇವಾಲಯ ಸಮಿತಿ ವತಿಯಿಂದ ಶಿವರಾತ್ರಿಯಂದು ದೇವಸ್ಥಾನದಲ್ಲಿ ಬೆಳಿಗ್ಗಿನ ಜಾವ ಸೂರ್ಯೋದಯವಾಗಿ ಸೂರ್ಯನ ಕಿರಣ ಶಿವಲಿಂಗದ ಮೇಲೆ ಬೀಳುತ್ತಿರುವ ಸಮಯದಲ್ಲಿ ಅರ್ಚಕರು ಹಾಲು-ತುಪ್ಪದ ಅಭಿಷೇಕ ಮಾಡುತ್ತಾರೆ. ನಂತರ ವಿಶೇಷ ಅಲಂಕಾರ ಮಾಡಿ ಪೂಜಿಸಲಾಗುತ್ತದೆ. ೭.೩೦ಕ್ಕೆ ಪೂಜಾ ಕೈಂಕರ್ಯ ಮುಗಿದು ಹೋಗುತ್ತದೆ.ನಂತರ ಸಂಜೆ ೬ ಗಂಟೆಯವರೆಗೆ ಭಕ್ತಾದಿಗಳಿಗೆ ಹಣ್ಣುಕಾಯಿ ಮಾಡಿಕೊಡಲಾಗುವುದು.ತೀರ್ಥ-ಪ್ರಸಾದ ವಿನಿಯೋಗವಾಗುತ್ತದೆ. ನಂತರ ಮಧ್ಯಾಹ್ನದಿಂದ ಸಂಜೆಯವರೆಗೆ ಭಕ್ತರಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಡಿ.ಬಿ. ಧರ್ಮಪ್ಪ ತಿಳಿಸಿದರು.
-ಶ.ಗ.ನಯನತಾರಾ