ಫೆಬ್ರವರಿ ೧೪ ರಂದು ವಿಶ್ವದಾದ್ಯಂತ ಹಾಗೂ ಭಾರತದಲ್ಲಿಯೂ “ಗಿಚಿಟeಟಿಣiಟಿes ಜಚಿಥಿ’ - ಪ್ರೇಮಿಗಳ ದಿನ ಎಂದು ಸಂತಸದಿAದ ಪ್ರೇಮಿಗಳು ಆಚರಣೆ ನಡೆಸುತ್ತಾರೆ.

ವಿಪರ್ಯಾಸವೆಂದರೆ ದೇಶದ ಬಹಳಷ್ಟು ಮಂದಿಗೆ ಆ ದಿನ ನಡೆದ ಕರಾಳ ಘಟನೆ ನೆನಪಿಗೆ ಬರುವುದೇ ಇಲ್ಲ. ಯಾವುದೋ ಒಂದು ಅನಾಹುತ ನಡೆದಾಗ ಒಂದೆರಡು ದಿನ ಪ್ರತಿಭಟನೆ, ರಾತ್ರಿ ಕ್ಯಾಂಡಲ್ ಹಚ್ಚುವುದು, ಭಾಷಣ ಬಿಗಿದರೆ ಅಲ್ಲಿ ಆ ವಿಷಯ ಮುಗಿದಂತೆ.

ನAತರ ಮತ್ತೊಂದು ಈ ರೀತಿಯ ಘಟನೆ ನಡೆದಾಗಲೇ ಜನರು ಮತ್ತೇ ಎಚ್ಚರಗೊಳ್ಳುತ್ತಾರೆ. ಇದು ಹೀಗೆಯೇ ಹಲವಾರು ವರ್ಷಗಳಿಂದ ಮುಂದುವರೆಯುತ್ತಾ ಬಂದಿದೆ.

೧೪ ಫೆಬ್ರವರಿ ೨೦೧೯ರಂದು ಪುಲ್ವಾಮದಲ್ಲಿ ಉಗ್ರರ ದಾಳಿಗೆ ೪೦ ಯೋಧರು ಹುತಾತ್ಮರಾದರು. ಅವರ ಕುಟುಂಬದವರು, ಕಳೆದುಕೊಂಡ ತಮ್ಮ ಪತಿ, ಪುತ್ರರ ಛಿದ್ರ ಛಿದ್ರವಾಗಿರುವ ಶರೀರವನ್ನು ಶವ ಪೆಟ್ಟಿಗೆಯಲ್ಲಿಟ್ಟು ಅದರ ಮೇಲೆ ರಾಷ್ಟçಧ್ವಜ ಹೊದ್ದು ಶಾಶ್ವತವಾಗಿ ತಮ್ಮವರನ್ನು ಮಲಗಿಸಿದರು.

ಕೆಲವು ಕಡೆ ಅರೆಸೈನಿಕರ ಸಂಘಟನೆಗಳು, ತಮ್ಮ ಸಹಪಾಠಿಗಳು ಸಹೋದ್ಯೋಗಿಗಳು ಹುತಾತ್ಮರಾದವರನ್ನು ಚಿರಸ್ಮರಣೆ ಮಾಡುತ್ತಾ ಶ್ರದ್ಧಾಂಜಲಿ ಅರ್ಪಿಸುತ್ತಾರೆ. ಕೆಲವರಿಗೆ ಆ ದಿನದ ಘಟನೆ ಚಿರಸ್ಮರಣೀಯವಾಗಿ ಉಳಿಯುತ್ತದೆ.

೧೪ ಫೆಬ್ರವರಿ ೨೦೧೯ರ ದಿನದಂದು ಉಗ್ರಪೀಡಿತ ಕಾಶ್ಮೀರಕ್ಕೆ ಎಂದಿನAತೆ ವಾರ್ಷಿಕ ರಜೆ ಮುಗಿಸಿ ಬಂದಿದ್ದ ಅರೆಸೇನಾಪಡೆಯ ಸಿ.ಆರ್.ಪಿ.ಎಫ್ ಯೋಧರು ಕರ್ತವ್ಯಕ್ಕೆ ಹಾಜರಾಗಲು ತಮ್ಮ ಕ್ಯಾಂಪಸ್ ಜಮ್ಮುವಿನಿಂದ ಸರದಿಯಂತೆ ತಮ್ಮ ಪಡೆಗಳ ೭೮ ವಾಹನಗಳ ಕಾನ್ವಾಯಿನಲ್ಲಿ ಸುಮಾರು ೨,೫೦೦ ಯೋಧರು ಮುಂದಿನ ಕರ್ತವ್ಯ ಹಾಗೂ ಕಠಿಣ ಹಾದಿಯ ಬಗ್ಗೆ ಚಿಂತಿಸುತಾ ಉಗ್ರ ಪೀಡಿತ ಪ್ರದೇಶ ಕಾಶ್ಮೀರ ಕಣಿವೆಗೆ ಪ್ರಯಾಣ ಬೆಳೆಸುತ್ತಾರೆ.

ತಮ್ಮ ಪಡೆಯ ವಾಹನಗಳ ಕಾನ್ವಾಯಿಯಾಗಿರುವುದರಿಂದ ರಸ್ತೆ ಸುರಕ್ಷಾಗಸ್ತು ಕಡೆಯಿಂದ ಸುಗಮ ಸಂಚಾರಕ್ಕೆ ಅನುಮತಿ ಸಿಕ್ಕಿದ ಮೇರೆಗೆ ಸುರಕ್ಷಿತವಾಗಿ ತಲಪುತ್ತೇವೆ ಎಂಬ ನಿರೀಕ್ಷೆಯಿಂದ ಪ್ರಯಾಣ ಬೆಳೆಸುತ್ತಾರೆ. ಆದರೆ ಅವರಲ್ಲಿ ಕೆಲವರ ವಿಧಿಯಾಟವೇ ಯಾರೂ ಊಹಿಸದ ರೀತಿಯಲ್ಲಿ ನಡೆದುಹೋಯಿತು. ಇನ್ನೇನು ಕೆಲವೇ ದೂರದಲ್ಲಿರುವ ತಮ್ಮ ಆವಾಸ ಸ್ಥಾನಕ್ಕೆ ತಲುಪುತ್ತೇವೆ ಎಂಬ ನಿರೀಕ್ಷೆಯಲ್ಲಿದ್ದ ಯೋಧರ ಮೇಲೆ ಮಧ್ಯಾಹ್ನ ೩:೧೫ರ ವೇಳೆಯಲ್ಲಿ ಪುಲ್ವಾಮಾ ಎಂಬಲ್ಲಿ ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ನಾಲ್ಕು ಚಕ್ರದ ಸ್ಪೋಟಕ ತುಂಬಿದ ವಾಹನವೊಂದನ್ನು ಆತ್ಮಾಹುತಿ ದಾಳಿಕೋರ ವೇಗವಾಗಿ ಚಲಾಯಿಸುತ್ತಾ ಬಂದು ಯೋಧರಿದ್ದ ಬಸ್‌ಗೆ ಡಿಕ್ಕಿಪಡಿಸಿ ಸ್ಫೋಟಗೊಳಿಸುತ್ತಾನೆ.

ಸ್ಫೋಟಗೊಂಡ ಪರಿಣಾಮ ಬಸ್‌ನಲ್ಲಿದ್ದ ೪೦ ಯೋಧರು ಸ್ಥಳದಲ್ಲಿಯೇ ಹುತಾತ್ಮರಾದರು. ೩೫ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿರುತ್ತಾರೆ. ಇದೊಂದು ಕರಾಳ ದಿನವಾಗಿ ದಾಖಲೆಯಾಗಿದೆ.

ಹೀಗೆ ಅರೆಸೇನಾಪಡೆ ಯೋಧರ ಬಲಿದಾನದ ಘಟನೆಗಳು ಇನ್ನು ಹಲವಾರಿವೆ. ವಿಪರ್ಯಾಸವೆಂದರೆ ಅರೆಸೇನಾಪಡೆ ಯೋಧರ ಬಲಿದಾನವನ್ನು ಕೇಂದ್ರ ಸರಕಾರವಾಗಲಿ, ರಾಜ್ಯ ಸರಕಾರವಾಗಲಿ ಗಂಭೀರವಾಗಿ ಪರಿಗಣಿಸದೆ ಸೌಲಭ್ಯ ಸವಲತ್ತುಗಳಿಗಾಗಿ ಜನಪ್ರತಿನಿಧಿಗಳ ಕಛೇರಿ ಹಾಗೂ ಸರಕಾರದ ಕಛೇರಿಗಳಲ್ಲಿ ಇನ್ನೂ ಅಲೆದಾಡುವಂತಾಗಿದೆ. ಇದು ನಾಚಿಕೆಗೇಡಿನ ವಿಷಯ. ದೇಶದ ಗಡಿಯಲ್ಲಿ ತಮ್ಮ ಜೀವದ ಹಂಗು ತೊರೆದು ಸೇವೆಗೈಯ್ಯುವ ಅರೆಸೇನಾಪಡೆ ಯೋಧರ ನೋವನ್ನು ಇನ್ನಾದರೂ ಸರಕಾರಗಳು ಪರಿಗಣಿಸಿ ಅಗತ್ಯ ಸವಲತ್ತುಗಳನ್ನು ನೀಡುವಂತಾಗಲಿ.

-ನೂರೇರ ಎಂ. ಭೀಮಯ್ಯ

ಸಂಚಾಲಕರು

ಮಾಜಿ ಯೋಧರ ಒಕ್ಕೂಟ, ಅರೆಸೇನಾಪಡೆ ಕೊಡಗು ಜಿಲ್ಲೆ

೯೪೮೧೦೫೭೮೬೮