ಹಿಂದೆ ಮಗು ಹುಟ್ಟಿದೆ ಎಂದರೆ ಸಂಭ್ರಮ ಸಂತಸದೊAದಿಗೆ ಮುಂದಿನ ಜೀವನ ಸಾಗುತ್ತಿತ್ತು. ಆದರೆ ಇಂದು ಮಗು ಹುಟ್ಟಿದೆ ಎಂದರೆ ಹುಟ್ಟಿನ ಸಂಭ್ರಮದೊAದಿಗೆ ಒಂದಷ್ಟು ಆತಂಕಗಳು ಮನೆ ಮಾಡಿ ಕೊಂಡಿರುತ್ತದೆ. ಅನಾರೋಗ್ಯ, ಹೃದಯಕ್ಕೆ ಸಂಬAಧಿಸಿದAತಹ ಕಾಯಿಲೆಗಳೊಂದಿಗೆ ಮಗು ಹುಟ್ಟಿ ಸಂಭ್ರಮದೊAದಿಗೆ ಸಂಕಟವನ್ನು ತರುತ್ತದೆ. ಅದರಲ್ಲೂ ನವಜಾತ ಶಿಶುವಿನಲ್ಲಿ ಜನ್ಮಜಾತ ಹೃದಯ ದೋಷಗಳು ಹೆಚ್ಚು ಕಂಡು ಬರುತ್ತಿದೆ. ಅದಕ್ಕೆ ಕಾರಣ ಅವುಗಳ ಪರಿಣಾಮ, ಆರಂಭಿಕ ಪತ್ತೆ ಮತ್ತು ಚಿಕಿತ್ಸೆಯ ಮಹತ್ವದ ಬಗ್ಗೆ ಅರಿವು ಮೂಡಿಸಲು ಮತ್ತು ಕಾರಣ ತಿಳಿಯುವ ಬಗ್ಗೆ ಜನರಲ್ಲಿ ಸಾರ್ವಜನಿಕ ಜಾಗೃತಿ ಮೂಡಿಸಲು ಪ್ರತಿ ವರ್ಷ "ಜನ್ಮಜಾತ ಹೃದಯ ದೋಷ ಜಾಗೃತಿ ವಾರವನ್ನು ಫೆಬ್ರವರಿ ೭ ರಿಂದ ೧೪, ೨೦೨೬ ರ ನಡುವೆ ಆಚರಿಸಲಾಗುತ್ತದೆ.
ಜನ್ಮಜಾತ ಹೃದಯ ದೋಷಗಳು (ಅಊಆ), (ಪರಿಧಮನಿಯ ಹೃದಯ ಕಾಯಿಲೆ) ಒಂದು ರೀತಿಯ ರೋಗಗಳು, ಹುಟ್ಟಿನಿಂದಲೇ ಹೃದಯದ ರಚನೆಯಲ್ಲಿ ಕಂಡುಬರುವ ಸಮಸ್ಯೆಗಳಾಗಿವೆ. ಅನೇಕ ಅಂಶಗಳು ಹೃದಯ ಸಮಸ್ಯೆಯೊಂದಿಗೆ ಹುಟ್ಟಿರುವ ಮಗುವಿನ ಅಪಾಯವನ್ನು ಸೂಚಿಸುತ್ತದೆ. ಈ ಅಪಾಯಗಳಲ್ಲಿ ಕೆಲವು ಗರ್ಭಾವಸ್ಥೆಯಲ್ಲಿ ಧೂಮಪಾನ ಅಥವಾ ಕೆಲವು ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಮತ್ತು ಅನುವಂಶಿಯವಾಗಿ ಕುಟುಂಬದ ಇತಿಹಾಸವನ್ನು ಒಳಗೊಂಡಿರಬಹುದು.
"ಜನ್ಮಜಾತ ಹೃದಯ ದೋಷವು ಗಂಭೀರವಾದದ್ದೇ?" ಎಂದು ಆಶ್ಚರ್ಯಪಡುವುದು ಸಹಜ. ಸೌಮ್ಯದಿಂದ ಹಿಡಿದು ಜೀವಕ್ಕೆ ಅಪಾಯಕಾರಿಯವರೆಗೆ ಗಂಭೀರವಾಗಿರುತ್ತದೆ. ಈ ದೋಷಗಳಲ್ಲಿ ಕೆಲವು ಸರಳವಾಗಿದ್ದು ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲದಿದ್ದರೆ, ಇನ್ನು ಕೆಲವು ಗಂಭೀರವಾಗಿದ್ದು ಜನನದ ನಂತರ ತಕ್ಷಣವೇ ಚಿಕಿತ್ಸೆಯ ಅಗತ್ಯವಿರುತ್ತದೆ. ಭಾರತದಲ್ಲಿ ಪ್ರತಿ ೧,೦೦೦ ಜೀವಂತ ಜನನಗಳಲ್ಲಿ ೮ ರಿಂದ ೧೦ ರವರೆಗೆ ಇರುತ್ತದೆ. ಇವು ಹುಟ್ಟಿನಿಂದಲೇ ಹೃದಯ ಅಥವಾ ಪ್ರಮುಖ ರಕ್ತನಾಳಗಳಲ್ಲಿನ ರಚನಾತ್ಮಕ ಸಮಸ್ಯೆಗಳಾಗಿವೆ. ಹೃದಯದಲ್ಲಿನ ರಂಧ್ರಗಳು, ಅಸಹಜ ರಕ್ತದ ಹರಿವಿನ ಮಾರ್ಗಗಳು, ಕಡಿದಾದ ಕವಾಟಗಳು ಅಥವಾ ನಾಳಗಳು, ಕಡಿಮೆ ಆಮ್ಲಜನಕ ಸೇವನೆ, ಆರೋಗ್ಯಕರ ಚರ್ಮದ ಬಣ್ಣವನ್ನು ಕಳೆದುಕೊಳ್ಳುವುದು, ಚರ್ಮ, ತುಟಿಗಳು ಮತ್ತು ಉಗುರುಗಳು ನೀಲಿ ಅಥವಾ ಬೂದು ಬಣ್ಣಕ್ಕೆ ತಿರುಗುವುದು, ಕಷ್ಟದ ಉಸಿರಾಟ, ಮುಖ, ಕೈಗಳು, ಪಾದಗಳು, ಕಣ್ಣುಗಳ ಸುತ್ತಲಿನ ಪ್ರದೇಶಗಳಲ್ಲಿ ಊತ,ಉಸಿರಾಟದ ತೊಂದರೆ, ಬೇಗ ಸುಸ್ತಾಗುವುದು, ತಲೆಯ ಸುತ್ತಲೂ ಬೆವರುವುದು, ತೂಕ ಹೆಚ್ಚಾಗದಿರುವುದು, ಆಹಾರ ಸೇವಿಸುವ ತೊಂದರೆಗಳು, ಹೃದಯದ ಗೊಣಗಾಟ.
ಜನ್ಮಜಾತ ಹೃದಯ ದೋಷಗಳಿಗೆ ಪ್ರಮುಖ ಕಾರಣ ಹುಡುಕಿದಾಗ ಅನುವಂಶಿಕ ಅಂಶಗಳು (ಉದಾ, ಡೌನ್ ಸಿಂಡ್ರೋಮ್), ತಾಯಿಯ ಸೋಂಕುಗಳು (ರುಬೆಲ್ಲಾ), ಅಥವಾ ಗರ್ಭಾವಸ್ಥೆಯಲ್ಲಿ ಮಾದಕ ದ್ರವ್ಯ ಸೇವನೆ (ಮದ್ಯಪಾನ/ಧೂಮಪಾನ) ಎಂಬ ಕಾರಣವೂ ಕಂಡುಬರುತ್ತದೆ.
ಸೌಮ್ಯವಾದ, ಸ್ವಯಂ-ಪರಿಹರಿಸುವ ಸಮಸ್ಯೆಗಳಿಂದ ಹಿಡಿದು ತಕ್ಷಣದ ಶಸ್ತ್ರಚಿಕಿತ್ಸೆಯ ಅಗತ್ಯವಿರುವ ಮಾರಣಾಂತಿಕ ಪರಿಸ್ಥಿತಿಗಳವರೆಗೆ ಇದು ಕಾಡುತ್ತದೆ.
ಸಾಮಾನ್ಯವಾಗಿ ವೈದ್ಯರು ರೋಗಲಕ್ಷಣಗಳ ಆಧಾರದ ಮೇಲೆ ನವಜಾತ ಶಿಶು ಅಥವಾ ಪ್ರಸವಪೂರ್ವ ತಪಾಸಣೆಯ ಮೂಲಕ ಗುರುತಿಸುತ್ತಾರೆ. ಕೆಲವೊಮ್ಮೆ ಮಗುವಿನ ಹೃದಯ ತಜ್ಞರು ಮಗುವಿಗೆ ಜನ್ಮಜಾತ ಹೃದಯ ದೋಷವಿದೆಯೇ ಎಂದು ಪತ್ತೆಹಚ್ಚಲು ಹೃದಯ ಪರೀಕ್ಷೆಗಳನ್ನು ನಡೆಸಬೇಕಾಗಬಹುದು. ಚಿಕಿತ್ಸೆಯು ಸಣ್ಣಪುಟ್ಟ ದೋಷಗಳಿಂದ ಹಿಡಿದು ಹೃದಯ ಶಸ್ತçಚಿಕಿತ್ಸೆಯವರೆಗೆ ಇರುತ್ತದೆ.
ಬಡತನದ ಕುಟುಂಬಗಳಲ್ಲಿ ಈ ರೀತಿ ಆದಾಗ ಆರಂಭಿಕ ಪತ್ತೆಯ ಬಗ್ಗೆ ಜಾಗೃತಿ ನೀಡಬೇಕು.
ವಿಶೇಷ ಮಕ್ಕಳ ಹೃದಯ ಆರೈಕೆಗೆ ಕುಟುಂಬಗಳಿಗೆ ಬೆಂಬಲ ನೀಡಬೇಕು. ಕುಟುಂಬಕ್ಕೆ ಆರ್ಥಿಕ ನೆರವು, ವಿಶೇಷ ವೈದ್ಯಕೀಯ ಆರೈಕೆ, ಭಾವನಾತ್ಮಕ ಬೆಂಬಲ ನೀಡಲು ಸಾಮಾಜಿಕ ಜಾಲ ತಾಣಗಳ ಮೂಲಕ ಸಹಾಯ ಮಾಡಬಹುದು.
ಮಕ್ಕಳಲ್ಲಿ ರೋಗಲಕ್ಷಣಗಳು ಹೆಚ್ಚಾಗಿ ಆಹಾರ ಸೇವನೆಯಲ್ಲಿ ತೊಂದರೆ, ತೂಕ ಹೆಚ್ಚಾಗುವುದು, ಉಸಿರಾಟದ ತೊಂದರೆ ಹೆಚ್ಚಾದಾಗ, ಅನಿಯಮಿತ ಹೃದಯ ಬಡಿತಗಳು, ರಕ್ತದೊತ್ತಡದ ಸಮಸ್ಯೆಗಳು, ರಚನಾತ್ಮಕ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ವಿಶೇಷ ಹೃದ್ರೋಗ ತಜ್ಞರೊಂದಿಗೆ ನಿಯಮಿತ ತಪಾಸಣೆಗೆ ಒಳಗಾಗುತ್ತಿರಬೇಕಾಗುತ್ತದೆ.
ನವಜಾತ ಶಿಶುಗಳು, ಶಿಶುಗಳು, ಮಕ್ಕಳು ಮತ್ತು ಹದಿಹರೆಯದವರಲ್ಲಿ ಹೃದಯ ಸಮಸ್ಯೆಗಳು ಇತ್ತೀಚಿಗೆ ಹೆಚ್ಚಾಗುತ್ತಿದ್ದು, ತಕ್ಷಣವೇ ಸಾವನ್ನಪ್ಪು ತ್ತಿರುವುದು ಕಂಡುಬರುತ್ತಿದೆ.
ಭ್ರೂಣದ ಎಕೋಕಾರ್ಡಿಯೋಗ್ರಫಿ, ಎಕೋಕಾರ್ಡಿಯೋಗ್ರಾಮ್‌ಗಳು, ಇಸಿಜಿಗಳು, ಹೋಲ್ಟರ್ ಮಾನಿಟರಿಂಗ್ ಮತ್ತು ಹೃದಯದ ಎಂಆರ್‌ಐ ಮುಂತಾದ ಸಾಧನಗಳ ಸಹಾಯದಿಂದ ರೋಗನಿರ್ಣಯ ಗುರುತು ಹಚ್ಚಬಹುದು. ಹೃದಯ ಕಾಯಿಲೆಗೆ ವಿಶೇಷ ಬಹುಶಿಸ್ತೀಯ ವೈದ್ಯಕೀಯ ನಿರ್ವಹಣೆ ಅಗತ್ಯ. ಅಗತ್ಯವಿದ್ದರೆ ತೆರೆದ ಹೃದಯ ಶಸ್ತ್ರಚಿಕಿತ್ಸೆ, ಹೃದಯ ಕಸಿ ಆರೈಕೆ ಮಾಡಬಹುದು.
ಇದಕ್ಕೆಲ್ಲ ಪರಿಹಾರವಾಗಿ ನಾವು ಸರಳ ಜೀವನ ಕ್ರಮವನ್ನು ಅಳವಡಿಸಿಕೊಳ್ಳಬೇಕು. ಕಲುಷಿತ ಆಹಾರ ಸೇವನೆಯನ್ನು ತ್ಯಜಿಸಿ ಗುಣಮಟ್ಟದ ಆಹಾರವನ್ನು ಸೇವಿಸಲು ಬಾಲ್ಯದಿಂದಲೇ ಅಭ್ಯಾಸ ಮಾಡಬೇಕು. ಇಂದಿನ ಜೀವನ ಶೈಲಿ ತುಂಬಾ ಹದಗೆಟ್ಟಿದ್ದು ಸಮತೋಲಿತ ಆಹಾರ ಸೇವನೆಯ ಅಭ್ಯಾಸ ಕ್ರಮವೇ ಇಲ್ಲದಂತಾಗಿದೆ. ಹಸಿವಾದಾಗ ಸಿಕ್ಕಿದ್ದನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುವ ಇಂದಿನ ಯುವ ಪೀಳಿಗೆ ಮುಂದಿನ ಪೀಳಿಗೆಯ ದಿನಗಳಿಗೆ ಮಾರಕವಾಗಿ ಪರಿಣಮಿಸುತ್ತಿದೆ.
ಹುಟ್ಟುವ ಮಗುವಿಗೆ ಹೃದಯ ಸಂಬAಧಿ ಕಾಯಿಲೆಯೊಂದಿಗೆ ಮಧುಮೇಹ, ಕಿಡ್ನಿ ಯಂತಹ ಭೀಕರ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದು ಎಳೆಯ ಜೀವಗಳು ನಲುತ್ತಿರುವುದು ಬೇಸರದ ಸಂಗತಿ.
ಒಂದು ಕಡೆ ಮೊಬೈಲ್ ಮತ್ತೊಂದು ಕಡೆ ಕಳಪೆ ಜೀವನ ಶೈಲಿ ಮತ್ತೊಂದು ಕಡೆ ಗುಣಮಟ್ಟವಿಲ್ಲದ ಆಹಾರ ಪದ್ಧತಿ, ಮನೋರಂಜನೆಗೋಸ್ಕರ ವ್ಯರ್ಥವಾಗಿ ಸುರಿಯುತ್ತಿರುವ ಹಣ ಇವೆಲ್ಲವೂ ನವಜಾತ ಶಿಶುಗಳ ಮೇಲೆ ಹೆಚ್ಚು ಪ್ರಭಾವ ಬೀರಿರುವುದು ನೋವಿನ ಸಂಗತಿ.
ಕೊನೆಹನಿ : ಹೃದಯ ಜೋಪಾನದೊಂದಿಗೆ ಶಿಶುವಿನ ಇಡೀ ದೇಹವನ್ನೇ ರಕ್ಷಿಸಬೇಕಿದೆ.
-ಎಸ್. ಎಂ. ರಜನಿ
ಸಹಾಯಕ ಪ್ರಾಧ್ಯಾಪಕರು
ಕಾವೇರಿ ಕಾಲೇಜು, ಗೋಣಿಕೊಪ್ಪ.