ಮಡಿಕೇರಿ, ಫೆ. ೧೩: ದೇವಣಗೇರಿ ಬಿ.ಸಿ. ಪ್ರೌಢ ಶಾಲೆಗೆ ದಾನಿಗಳಿಂದ ಧನಸಹಾಯದಿಂದ ವಾಹನ ಖರೀದಿಸಲಾಗಿದ್ದು ಸೇವೆಗೆ ಲೋಕಾರ್ಪಣೆಗೊಳಿಸಲಾಯಿತು.
ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗುವಂತೆ ಸರಿಯಾದ ಸಮಯಕ್ಕೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರಲು ಹಾಗೂ ಅವರ ಮನೆಗೆ ಸರಿಯಾದ ವೇಳೆಗೆ ತಲುಪಿಸಲು ಒಂದು ವಾಹನವನ್ನು ಖರೀದಿಸುವ ವಿಚಾರವಾಗಿ ಆಡಳಿತ ಮಂಡಳಿಯ ಸದಸ್ಯರು, ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದದವರೊAದಿಗೆ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಮುಕ್ಕಾಟೀರ ಐ ನಾಣಯ್ಯ ಅವರು ಚರ್ಚಿಸಿದ್ದರು.
ಬಳಿಕ ಸಭೆಯ ತೀರ್ಮಾನದಂತೆ ಈ ವಾಹನಕ್ಕೆ ತಗಲುವ ವೆಚ್ಚವನ್ನು ಭರಿಸಲು ದಾನಿಗಳಿಗೆ ಹಾಗೂ ಶಾಲಾ ಹಳೆಯ ವಿದ್ಯಾರ್ಥಿಗಳಿಗೆ ಮತ್ತು ಗ್ರಾಮಸ್ಥರಿಗೆ ಮನವಿ ಮಾಡಲಾಯಿತು. ಸರ್ವರು ಮನವಿಗೆ ಸ್ಪಂದಿಸಿ ವಾಹನ ಖರೀದಿಸಲು ಧನ ಸಹಾಯ ಮಾಡಿದ್ದು ಶಾಲೆಗೆ ವಾಹನ ಖರೀದಿಸಲಾಗಿದೆ.
ಶಾಲೆಯ ಕಾರ್ಯನಿರ್ವಾಹಕರಾದ ಕರ್ನಂಡ ಎನ್ ಬೆಳ್ಳಮ್ಮ, ಅಧ್ಯಕ್ಷರಾದ ಮುಕ್ಕಾಟೀರ ಐ ನಾಣಯ್ಯ ವಾಹನವನ್ನು ಚಾಲನೆ ಮಾಡುವುದರ ಮೂಲಕ ವಾಹನವನ್ನು ಸೇವೆಗೆ ಸಮರ್ಪಿಸಿದರು. ಈ ಸಂದರ್ಭದಲ್ಲಿ ಹಾಲುಗುಂದ ಗ್ರಾಮದ ದಾನಿಗಳು ಹಾಗೂ ಪಂಚಾಯಿತಿ ಅಧ್ಯಕ್ಷರಾದ ಪಂದಿಕAಡ ದಿನೇಶ್, ಆಡಳಿತ ಮಂಡಳಿಯ ಉಪಾಧ್ಯಾಕ್ಷರಾದ ಚೇಂದAಡ ಜಿ ಪೊನ್ನಪ್ಪ, ಸದಸ್ಯರುಗಳಾದ ಮೂಕೊಂಡ ಶಶಿ ಸುಬ್ರಮಣಿ, ಬೀನಂಡ ಎಸ್ ಪೂಣಚ್ಚ, ಮುಖ್ಯ ಶಿಕ್ಷಕರಾದ ಹೆಚ್.ಡಿ ಲೋಕೇಶ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಎಸ್.ಎಸ್.ಎಲ್.ಸಿ ನೋಡೆಲ್ ಅಧಿಕಾರಿ ಕವಿತ, ಸ.ಮಾ.ಪ್ರಾ.ಶಾಲಾ ಮುಖ್ಯ ಶಿಕ್ಷಕರಾದ ಮಹೇಶ್, ಶಾಲಾ ಶಿಕ್ಷಕ ವೃಂದದವರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.