ಪಾಲಿಬೆಟ್ಟ, ಫೆ. ೧೩: ಸರ್ವಧರ್ಮ ಸಂಕೇತವಾಗಿರುವ ಇತಿಹಾಸ ಪ್ರಸಿದ್ದ ಪಾಲಿಬೆಟ್ಟ ಆರ್ಕಾಡ್ ಪಟ್ಟಾಣ್ ಬಾಬಾ ಶಾಹ್ ವಲಿಯ್ಯ್ (ಖ.ಸಿ) ಅವರ ಉರೂಸ್ ನೇರ್ಚೆಗೆ ಗಣ್ಯರು ಚಾಲನೆ ನೀಡಿದರು. ಜುಮಾ ನಮಾಜ್ ಬಳಿಕ ಪಾಲಿಬೆಟ್ಟ ದರ್ಗಾಗೆ ತೆರಳಿ ವಿಶೇಷ ಪ್ರಾರ್ಥನೆಯೊಂದಿಗೆ ಮುಖಾಂ ಝಿಯಾರತ್ ಜರುಗಿತು.

ಉರೂಸ್ ಕಾರ್ಯಕ್ರಮದ ಉದ್ಘಾಟನೆಯ ಮುಖ್ಯ ಪ್ರವಚನ ಹಾಗೂ ದುಆ ನೇತೃತ್ವವನ್ನು ಧಾರ್ಮಿಕ ವಿದ್ವಾಂಸರಾದ ನೂರುಸ್ಸಾದಾತ್ ಸಯ್ಯಿದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಅಲ್ ಬುಖಾರಿ ಬಾಯರ್ ಅವರು ವಿಶೇಷ ದುಆ ಸಲ್ಲಿಸಿದರು. ಧಾರ್ಮಿಕ ಆಚರಣೆಗಳಿಂದ ಸೌಹಾರ್ದ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದರು.

ಪಾಲಿಬೆಟ್ಟ ಜುಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಪಿ.ಕೆ ಇಸ್ಮಾಯಿಲ್ ಹಾಜಿ ಧ್ವಜಾರೋಹಣ ನೆರವೇರಿಸಿದರು.

ಇತಿಹಾಸ ಪ್ರಸಿದ್ಧ ಉರೂಸ್‌ಗೆ ಸರ್ವಧರ್ಮಿಯರು ನಂಬಿಕೆಯೊAದಿಗೆ ಭಾಗವಹಿಸುತ್ತಿದ್ದು. ಸೌಹಾರ್ದತೆಗೆ ಸಾಕ್ಷಿಯಾಗಿದೆ ಎಂದರು. ತಾ. ೧೬ ರವರೆಗೆ ಉರೂಸ್ ಕಾರ್ಯಕ್ರಮ ನಡೆಯಲಿದ್ದು ಕೊನೆಯ ದಿನ ಸಂಜೆ ಸರ್ವಧರ್ಮ ಸಮ್ಮೇಳನದಲ್ಲಿ ವಿವಿಧ ಧಾರ್ಮಿಕ ವಿದ್ವಾಂಸರು, ಜನಪ್ರತಿನಿಧಿಗಳು, ಸಮಾಜ ಸೇವಕರು, ಗಣ್ಯರು ಭಾಗವಹಿಸಲಿದ್ದಾರೆ ಹಾಗೂ ಅನ್ನದಾನ ಕಾರ್ಯ ನಡೆಯಲಿದೆ.

ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರ. ಕಾರ್ಯದರ್ಶಿ ಶೈಖುನಾ ಅಶ್ರಫ್ ಅಹ್ಸನಿ ಉಸ್ತಾದ್ ಉರೂಸ್ ಕಾರ್ಯಕ್ರಮ ಉದ್ಘಾಟಿಸಿದರು. ಪಾಲಿಬೆಟ್ಟ ಜುಮಾ ಮಸೀದಿ ಖತೀಬ್ ಝುಬೈರ್ ಸಖಾಫಿ ಮೌಲಿದ್ ಮಜ್ಲಿಸ್ ಗೆ ನೇತೃತ್ವ ನೀಡಿದರು. ಆಡಳಿತ ಸಮಿತಿ ಉಪಾಧ್ಯಕ್ಷ ಎಂ. ಸೈನುದ್ದೀನ್, ಪ್ರಧಾನ ಕಾರ್ಯದರ್ಶಿ ಶಮೀರ್ ಮುನ್ನ, ಕೋಶಾಧಿಕಾರಿ ಟಿ.ಕೆ. ಮುಸ್ತಫ, ಕಾರ್ಯದರ್ಶಿ ಫಝಲ್ ರಹ್ಮಾನ್ ಸದಸ್ಯರಾದ ಬಶೀರ್ ಎಂ.ಎ, ಫೈಝಲ್ ಸಿ.ಎ ಹಾಗೂ ತಾರಿಕಟ್ಟೆ ಜುಮಾ ಮಸೀದಿ ಅಧ್ಯಕ್ಷ ಕೆ.ಎಂ. ಅಲಿ ಹಾಜಿ ಸೇರಿದಂತೆ ಪಾಲಿಬೆಟ್ಟ ವ್ಯಾಪ್ತಿಯ ವಿವಿಧ ಮಹಲ್ಲ್ ಗಳ ಆಡಳಿತ ಮಂಡಳಿಯ ಪದಾಧಿಕಾರಿಗಳು ಮುಖ್ಯ ಅತಿಥಿಗಳಾಗಿದ್ದರು.

ಮುಹಿಮ್ಮಾತ್ತುದ್ದೀನ್ ಮದ್ರಸಾ ಮುಖ್ಯ ಅಧ್ಯಾಪಕರಾದ ಸಬಾಹ್ ಸಖಾಫಿ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಶಮೀರ್ ಎಂ.ಹೆಚ್ ವಂದಿಸಿದರು. - ಪುತ್ತಂ ಪ್ರದೀಪ್