ಕುಶಾಲನಗರ, ಫೆ. ೧೩: ರೋಟರಿ ಕುಶಾಲನಗರ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಮತ್ತು ಕೊಪ್ಪ ಭಾರತ ಮಾತಾ ಡಿಗ್ರಿ ಕಾಲೇಜು ಆಶ್ರಯದಲ್ಲಿ ತಾ. ೧೪ ರಂದು (ಇಂದು) ಐ ಲವ್ ಕಾವೇರಿ ಘೋಷ ವಾಕ್ಯದೊಂದಿಗೆ ೩ನೇ ವರ್ಷದ ಜೀವನದಿ ಕಾವೇರಿ ಸ್ವಚ್ಛತಾ ಅಭಿಯಾನ-೨೦೨೬ ಹಮ್ಮಿಕೊಳ್ಳಲಾಗಿದೆ.

ಕುಶಾಲನಗರ ಕೊಪ್ಪ ಗಡಿಭಾಗದ ಸೇತುವೆ ಬಳಿ ಬೆಳಿಗ್ಗೆ ೧೦ ಗಂಟೆಗೆ ಆರಂಭವಾಗಲಿರುವ ಸ್ವಚ್ಛತಾ ಕಾರ್ಯಕ್ರಮದಲ್ಲಿ ಕೊಪ್ಪ ಭಾರತ ಮಾತಾ ಕಾಲೇಜಿನ ೨೫೦ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.

ಕುಶಾಲನಗರ- ಕೊಪ್ಪ ಕಾವೇರಿ ನದಿಯ ೧೮೦ ವರ್ಷದ ಐತಿಹಾಸಿಕ ಹಳೆಯ ಸೇತುವೆಯ ಪುನಶ್ಚೇತನ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.