ಮಡಿಕೇರಿ, ಫೆ. ೧೧: ಮಹಾರಾಷ್ಟçದ ಪಂಚಗಣಿಯಲ್ಲಿ ನಡೆದ ಮಾಸ್ಟರ್ಸ್ ಹಾಕಿ ಕಾರ್ನಿವಲ್ ೨೦೨೬ ರ ಫೈನಲ್ ಪಂದ್ಯದಲ್ಲಿ ಮುಂಬೈ ವಾರಿಯರ್ಸ್ ತಂಡವನ್ನು ೫-೦ ಗೋಲುಗಳ ಭರ್ಜರಿ ಅಂತರದಿAದ ಸೋಲಿಸುವ ಮೂಲಕ ತುದಿಮಾಡ ಲೋಕೇಶ್ ಕುಟ್ಟಪ್ಪ ಮಾಲೀಕತ್ವದ ಶ್ಲೋಕ್ ಹಾಕಿ ಕ್ಲಬ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೆಬ್ರವರಿ ೭ ರಂದು ನಡೆದ ಈ ಹಣಾಹಣಿಯಲ್ಲಿ ಶ್ಲೋಕ್ ಹಾಕಿ ಕ್ಲಬ್ ಆರಂಭದಿAದಲೇ ಪಂದ್ಯದ ಮೇಲೆ ಪೂರ್ಣ ಹಿಡಿತ ಸಾಧಿಸಿ ಭರ್ಜರಿ ಜಯ ಸಾಧಿಸಿತು.
ಟೂರ್ನಿಯ ಮೊದಲ ದಿನ ಶ್ಲೋಕ್ ತಂಡವು ಮೊದಲು ಟಸ್ಕರ್ಸ್ ವುಮೆನ್ ತಂಡವನ್ನು ಎದುರಿಸಿತು. ನಂತರ ವಾರಿಯರ್ಸ್ ಕ್ಲಬ್ ವಿರುದ್ಧ ಜಯಗಳಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು. ಅಂತಿಮ ಪಂದ್ಯದಲ್ಲಿ ಮುಂಬೈ ವಾರಿಯರ್ಸ್ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಕೋಚ್ ಲಕ್ಷö್ಮಣ್ ರಾವ್ ಅವರ ಮಾರ್ಗದರ್ಶನದಲ್ಲಿ ಆಡಿದ ಈ ತಂಡದಲ್ಲಿ ಮಾಜಿ ಅಂತರರಾಷ್ಟಿçÃಯ ಆಟಗಾರ್ತಿಯರಾದ ಹೆಲೆನ್ ಮೇರಿ, ಸರಿತಾ ಲಾಕ್ರಾ, ರಂಜಿತಾ, ರೈನಾ, ಮೀನಾಕ್ಷಿ, ಪುನೀತಾ ಮತ್ತು ಅಮನದೀಪ್ ಅವರು ಪ್ರಮುಖ ಆಕರ್ಷಣೆಯಾಗಿದ್ದರು.