ಮಡಿಕೇರಿ, ಫೆ. ೧೧: ಕಂದಾಯ ಇಲಾಖೆಯಿಂದ ಕೃಷಿಕರಿಗೆ ಕಾರ್ಯ ಯೋಜನೆಗಳ ವಿಳಂಬರಹಿತ ಅನುಷ್ಠಾನಕ್ಕಾಗಿ ಸೀಮಿತ ದಾಖಲೆಗಳು, ಕಾರ್ಯವಿಧಾನಗಳು ಮತ್ತು ವಿಳಂಬವಿಲ್ಲದೆ ನಿಯಮಗಳನ್ನು ರೂಪಿಸುವಂತೆ ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ಸರ್ಕಾರ ಮತ್ತು ಶಾಸಕರುಗಳನ್ನು ಒತ್ತಾಯಿಸಿದೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅಸೋಸಿಯೇಷನ್ ಅಧ್ಯಕ್ಷ ಎ.ನಂದಾಬೆಳ್ಯಪ್ಪ, ಆರ್.ಟಿ.ಸಿ.ಯಲ್ಲಿ ಪಟ್ಟೇದಾರರ ಹೆಸರನ್ನು ಸರಳೀಕೃತ ರೀತಿಯಲ್ಲಿ ತೆಗೆದುಹಾಕಲು ಅಂಗೀಕರಿಸಿದ ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಂದ ತಿದ್ದುಪಡಿ ಸ್ವಾಗತಾರ್ಹ. ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಮತ್ತು ಕೊಡಗು ಸೇವಾ ಕೇಂದ್ರವು ಈ ವಿಚಾರದ ಬಗ್ಗೆ ಶ್ರಮಿಸಿದೆ. ಜಾಗಗಳ ಕಂದಾಯ ನಿಗದಿ ೨೦೧೧-೧೨ರ ತಿದ್ದುಪಡಿಯ ಕಾಯ್ದೆಗೆ ನಿಯಮಗಳನ್ನು ರೂಪಿಸದ ಕಾರಣ ಅಗತ್ಯವಿಲ್ಲದ ದಾಖಲೆಗಳನ್ನು ಅಧಿಕಾರಿಗಳು ಅರ್ಜಿದಾರರಿಂದ ಪಡೆಯುತ್ತಿದ್ದು, ಅನಗತ್ಯವಾಗಿ ಕಡತ ವಿಲೇವಾರಿ ವಿಳಂಬವಾಗುತ್ತಿದೆ. ಕಂದಾಯ ನಿಗದಿ ಮೇಲಿನ ತಿದ್ದುಪಡಿ ಮತ್ತು ಪಟ್ಟೆದಾರರ ಹೆಸರು ವಜಾಮಾಡುವ ಕಾಯ್ದೆ ತಿದ್ದುಪಡಿಗೆ ಆದಷ್ಟು ಬೇಗ ನಿಯಮಗಳನ್ನು ರೂಪಿಸಿ ಜಿಲ್ಲಾ ಕಂದಾಯ ಇಲಾಖೆಗೆ ತಕ್ಷಣ ಜಾರಿಗೆ ತರಲು ನಿರ್ದೇಶನಗಳನ್ನು ನೀಡಬೇಕಾಗಿ ಆಗ್ರಹಿಸಿದ್ದಾರೆ.

ಕನಿಷ್ಟ ದಾಖಲೆಗಳೊಂದಿಗೆ ಜಾರಿಗೆ ತರಬೇಕು ವಿಭಾಗ ಪತ್ರ, ಪೌತಿಖಾತೆ, ಮರಣ ಪ್ರಮಾಣಪತ್ರ, ವಂಶಾವಳಿಪಟ್ಟಿ ಮತ್ತು ಪಟ್ಟೇದಾರರ ಕುಟುಂಬದ ಒಪ್ಪಿಗೆಯನ್ನು ಅಧಿಕಾರಿಗಳು ಅರ್ಜಿದಾರರಿಗೆ ಬಲವಂತಪಡಿಸಬಾರದು.ಎAದೂ ಸಿಪಿಎ ಮೂಲಕ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಮತ್ತು ಕೊಡಗು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದೂ ಅಧ್ಯಕ್ಷ ಎ.ನಂದಾಬೆಳ್ಯಪ್ಪ ಮಾಹಿತಿ ನೀಡಿದ್ದಾರೆ.