ಮಡಿಕೇರಿ, ಫೆ. ೧೧: ನಗರದ ಗಣಪತಿ ಕೊಡವ ಕೇರಿ ಸಂಘದ ವಾರ್ಷಿಕ ಒತ್ತೊರ್ಮೆ ಕೂಟ ಹಾಗೂ ಮಹಾಸಭೆ ಮಡಿಕೇರಿ ಕೊಡವ ಸಮಾಜ ಸಭಾಂಗಣದಲ್ಲಿ ಜರುಗಿತು.

ಕೇರಿಯ ಅಧ್ಯಕ್ಷ ಕಿರಿಯಮಾಡ ರತನ್ ತಮ್ಮಯ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಪೂರ್ವಜರು ನಡೆಸಿಕೊಂಡು ಬಂದ ಪದ್ಧತಿ, ಪರಂಪರೆಗಳನ್ನು ಮುಂದುವರೆಸಿಕೊAಡು ಹೋಗುವ ಮೂಲಕ ನಮ್ಮ ಸಂಸ್ಕೃತಿಯನ್ನು ಪಾಲಿಸಬೇಕು ಎಂದು ಕರೆ ನೀಡಿದರು.

ಸಂಘದ ಕಾರ್ಯದರ್ಶಿ ಮಂಡಿರಾ ಸದಾ ಮುದ್ದಪ್ಪ, ಕಳೆದ ವರ್ಷದ ವಾರ್ಷಿಕ ವರದಿಯನ್ನು ಸಭೆಯ ಮುಂದೆ ಮಂಡಿಸಿದರು.

ನಿರ್ದೇಶಕರುಗಳಾದ ಚಿಲ್ಲವಂಡ ಮಧು, ಕಲಿಯಂಡ ವಿನು ಬೋಪಯ್ಯ, ಬಲ್ಲಚಂಡ ರೇಖಾ,ಚಂಬAಡ ಸುರೇಶ್ ಮುತ್ತಪ್ಪ, ಬಟ್ಟಿರ ರಾಜಪ್ಪ ಬೊಳದಂಡ ಬೋಪಣ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಂಡಿರ ಕೃಪಾ ಮುದ್ದಪ್ಪ ಹಾಗೂ ಕಲಿಯಂಡ ಸ್ಮಿತಾ ಬೋಪಯ್ಯ ಪ್ರಾರ್ಥನೆ ಮಾಡಿ, ಚೌಂಡಿರ ಬನ್ಸಿ ಗಂಗಮ್ಮ ವಂದಿಸಿದರು.