ಮಡಿಕೇರಿ, ಫೆ. ೧೧: ಚೆಟ್ಟಳ್ಳಿ ಪ್ರೌಢಶಾಲೆಗೆ ತಮ್ಮ ಕಾಫಿ ತೋಟ ಹೊಂದಿಕೊAಡಿದ್ದು ಕಾಫಿಯನ್ನು ತೋಟದಿಂದ ಸಾಗಣೆ ಮಾಡುವ ಸಮಯದಲ್ಲಿ ವಾಹನವು ದುಸ್ಥಿತಿ ತಲುಪಿದ ಕಾರಣ ವಾಹನದಲ್ಲಿದ್ದಂತಹ ಕಾಫಿಯನ್ನು ತಾತ್ಕಾಲಿಕವಾಗಿ ಎರಡು ದಿನದ ಮಟ್ಟಿಗೆ ಶಾಲೆಯ ಬಾಸ್ಕೆಟ್‌ಬಾಲ್ ಕೋರ್ಟ್ನಲ್ಲಿ ಹಾಕಿದ್ದಾಗಿ, ಇದೀಗ ವಾಹನ ಸರಿಯಾದ ಬಳಿಕ ಶಾಲಾ ಆವರಣದಿಂದ ತೋಟದ ಕಣಕ್ಕೆ ಕಾಫಿ ಸಾಗಿಸಲಾಗಿದೆ ಎಂದು ಚೆಟ್ಟಳ್ಳಿ ಪ್ರೌಢಶಾಲೆಯ ಸಂಚಾಲಕ ಹಾಗೂ ಶಾಲೆಯ ಜಾಗ ದಾನಿಯಾಗಿರುವ ಎಂ.ಎA ಚಂಗಪ್ಪ ಅವರು ಸ್ಪಷ್ಟನೆ ನೀಡಿದ್ದಾರೆ.
ತಾ.೯ ರಂದು ‘ಶಕ್ತಿ’ಯಲ್ಲಿ ಪ್ರಕಟಗೊಂಡ ‘ಕಾಫಿ ಕಣವಾದ ಬಾಸ್ಕೆಟ್‌ಬಾಲ್ ಕೋರ್ಟ್‘ ವರದಿಗೆ ಪ್ರತಿಕ್ರಿಯೆ ನೀಡಿರುವ ಅವರು, ಚೆಟ್ಟಳ್ಳಿ ಪ್ರೌಢಶಾಲೆ ವಿದ್ಯಾರ್ಥಿಗಳನ್ನು ಪಠ್ಯ ಮತ್ತು ಪಠ್ಯೇತರ ವಿಷಯಗಳಲ್ಲಿ ಪ್ರೋತ್ಸಾಹಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದAತೆ ಶಾಲಾ ಆಡಳಿತ ಮಂಡಳಿಯವರ ಮತ್ತು ಜಾಗದಾನಿಗಳ ಸಹಕಾರದಿಂದ ಅತ್ಯುತ್ತಮ ರೀತಿಯಲ್ಲಿ ಸುಮಾರು ೬೩ ವರ್ಷಗಳಿಂದ ನಡೆಯುತ್ತಿದೆ.
೨೦೧೨ರಲ್ಲಿ ಸುವರ್ಣ ಮಹೋತ್ಸವದ ನೆನಪಿಗಾಗಿ ಶಾಲೆಯ ಹಳೆಯ ವಿದ್ಯಾರ್ಥಿಯಾದ ಜಗದೀಶ್ ರೈ ಅವರು ಬಾಸ್ಕೆಟ್‌ಬಾಲ್ ಕೋರ್ಟ್ ನಿರ್ಮಿಸಿ ಕೊಟ್ಟಿದ್ದಾರೆ.
೨೦೧೮ರಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ನಿವೃತ್ತಿಯ ನಂತರ ತಾತ್ಕಾಲಿಕವಾಗಿ ಆಡಳಿತ ಮಂಡಳಿಯವರು ದೈಹಿಕ ಶಿಕ್ಷಕರನ್ನು ನೇಮಕ ಮಾಡಿ ವಿದ್ಯಾರ್ಥಿಗಳನ್ನು ಶಾಲೆಯ ಎಲ್ಲಾ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬಾಸ್ಕೆಟ್‌ಬಾಲ್ ಕೋರ್ಟ್ ಮತ್ತು ಶಾಲಾ ಮೈದಾನವನ್ನು ಉಪಯೋಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿಗಳು ಹೆಚ್ಚಾಗಿ ಈ ಕೋರ್ಟ್ನ ಬಳಸುವುದರಿಂದ ಅಂಕಣದ ಗುರುತು ಅಳಿಸಿ ಹೋಗಿರುತ್ತದೆ ಎಂದಿರುವ ಅವರು, ೨ ದಿನ ತುರ್ತು ಸಂದರ್ಭ ಕೋರ್ಟ್ನಲ್ಲಿ ಕಾಫಿ ಒಣಗಿಸಿದ್ದು, ಈ ಸಂದರ್ಭವನ್ನೇ ಕಾಯ್ದಿದ್ದ ಕೆಲವರು ಆಡಳಿತ ಮಂಡಳಿಯ ವಿರುದ್ಧ ಚ್ಯುತಿ ತರಲು ಯತ್ನಿಸಿದ್ದಾಗಿ ತಿಳಿಸಿದ್ದಾರೆ.