ಕೂಡಿಗೆ, ಫೆ. ೧೧: ತೊರೆನೂರು ಗ್ರಾಮದ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಹಿಂದೂ ಸಂಗಮ ಹಾಗೂ ಶೋಭಾಯಾತ್ರೆ ನಡೆಯಿತು.
ಆರ್‌ಎಸ್‌ಎಸ್ ಕಾರ್ಯವಾಹಕ ರವಿಕುಮಾರ್ ಮಾತನಾಡಿ, ಸಮಾಜದ ಪರಿವರ್ತನೆಗೆ ಪಂಚಕಾರ್ಯಗಳು ಬಹುಮುಖ್ಯ. ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ, ಕುಟುಂಬ ಜೀವನ, ಸ್ವದೇಶಿ, ನಾಗರಿಕ ಕರ್ತವ್ಯ ಪ್ರಜ್ಞೆ ಇವುಗಳ ಉದ್ದೇಶವಾಗಿದೆ ಎಂದು ತಿಳಿಸಿದರು.
ಸಭಾ ಕಾರ್ಯಕ್ರಮದಲ್ಲಿ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ. ಪಾಶ್ಚಾತ್ಯ ಸಂಸ್ಕತಿಯ ಅಕರ್ಷಣೆಗೆ ಒಳಗಾಗದೆ ಭಾರತೀಯತೆಯನ್ನು ಅನುಸರಿಸಿದಾಗ ಸದೃಢÀ ಸಮಾಜ ರೂಪಗೊಳುತ್ತದೆ ರಾಷ್ಟç ರಕ್ಷಣೆ ಮತ್ತು ಧರ್ಮ ರಕ್ಷಣೆಗಾಗಿ ಸದ್ಟೊçಗ್ಗಟ್ಟಾಗಿರಬೇಕು ಎಂದರು. ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸನಾತನ ಧರ್ಮ ತನ್ನ ಜ್ಞಾನ, ಸಂಸ್ಕೃತಿ, ಚಿಂತನೆ-ಆಚಾರ, ಪದ್ಧತಿಗಳ ಮೂಲಕ ಇಡೀ ಜಗತ್ತನ್ನು ತನ್ನಡೆಗೆ ಅಕರ್ಷಿಸಿದೆ ಎಂದು ತಿಳಿಸಿದರು. ಮಾಜಿ ಶಾಸಕ ಅಪ್ಪಚ್ಚುರಂಜನ್ ಶೋಭಾಯಾತ್ರೆಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ತೊರೆನೂರು ಗ್ರಾಮದ ಹಿಂದೂ ಸಂಗಮ ಅಯೋಜನಾ ಸಮಿತಿಯ ಪ್ರಮುಖರಾದ ಹೆಚ್.ಬಿ. ಚಂದ್ರಪ್ಪ, ಟಿ.ಎಲ್ ಮಹೇಶ್ ಕುಮಾರ್, ಟಿ.ಸಿ. ಶಿವಕುಮಾರ್, ಟಿ.ಬಿ. ಜಗದೀಶ್, ಕೆ.ಬಿ. ದೇವರಾಜ್, ಚಿದಾನಂದ, ಈಶ್ವರಪ್ಪ, ಸೇರಿದಂತೆ ಗ್ರಾಮಸ್ಥರರಿದ್ದರು. ವಿವಿಧ ಮಹಿಳಾ ಸಂಘಟನೆಯ ನೂರಾರು ಮಹಿಳೆಯರು ಕಳಸ ಹೊತ್ತು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು.