ವೀರಾಜಪೇಟೆ, ಫೆ. ೧೧: ಕೊಡಗು ನಿವಾಸಿಗಳು ಮತ್ತು ಮಲಯಾಳಿಗಳು ಜಂಟಿಯಾಗಿ ಕೇರಳದ ಪಯ್ಯಾವೂರಿನ ಶಿವ ದೇವಾಲಯದಲ್ಲಿ ಆಚರಿಸುವ ಹದಿಮೂರು ದಿನಗಳ ಪಯ್ಯವೂರು ಶಿವ ದೇವಾಲಯದ ಊಟ್‌ಮಹೋತ್ಸವವು ಕೊಡಗಿನಿಂದ ಮುಂಡಿಯೋಳAಡ ಹಾಗೂ ಬೊವ್ವೇರಿಯಂಡ ಕುಟುಂಬಸ್ಥರು ಎತ್ತು ಪೋರಾಟ್‌ನೊಂದಿಗೆ ತೆರಳಿ ಅಕ್ಕಿ ಅಳೆಯುವ ಶಾಸ್ತçದೊಂದಿಗೆ ಪ್ರಾರಂಭವಾಯಿತು.

ಪಟ್ಟಣದ ಪಳಸ್ಸಿ ಭಗವತಿ ದೇವಸ್ಥಾನದ ಆವರಣಕ್ಕೆ ಆಗಮಿಸಿದ ಕೊಡವರನ್ನು ಪಯ್ಯಾವೂರು ದೇವಸ್ವಂ ಕಾರ್ಯನಿರ್ವಾಹಕ ಅಧಿಕಾರಿ ಸಿ.ವಿ. ಅನೀಶ್, ವಿಶ್ವಸ್ಥ ಮಂಡಳಿ ಸದಸ್ಯ ಕೆ.ವಿ. ಉತ್ತಮರಾಜನ್ ಮತ್ತು ಆಚರಣೆ ಸಮಿತಿಯ ಪದಾಧಿಕಾರಿಗಳಾದ ಪಿ.ಸುಂದರನ್, ಫಲ್ಗುಣನ್ ಮೆಳೇದತ್, ಸಿ.ವಿ. ಮೋಹನನ್ ಮತ್ತು ಸಿ.ಪಿ. ವಿಜಯನ್ ಸ್ವಾಗತಿಸಿದರು.

ಬುಧವಾರ ಸಂಜೆ ವಾಸವಪುರಂ ಮಹಾವಿಷ್ಣು ದೇವಸ್ಥಾನದಿಂದ ಸಹಸ್ರ ವಿಳಕ, ತಾಳ ಮೇಳದೊಂದಿಗೆ ಮೆರವಣಿಗೆ ನಡೆಯಿತು. ಬಳಿಕ ಕೊಮರತÀಚ್ಚನ್ ಅವರ ಕಲಶಂಕುಳಿ ಪ್ರದರ್ಶನಗೊಂಡಿತು.

ವರ್ಷಕ್ಕೆ ಒಂದು ಬಾರಿ ಕೋಮರತಚ್ಚನ್ ಮುಂಡಿಯೋಳAಡ ಹಾಗೂ ಬೊವ್ವೇರಿಯಂಡ ಕುಟುಂಬಸ್ಥರ ಮನೆಗೆ ತೆರಳಿ ನಂತರ ಕಡಿಯತ್‌ನಾಡಿನ ಮುಖ್ಯವಾದ ೧೨ ಕುಟುಂಬಕ್ಕೆ ಹಾಗೂ ದೇವಸ್ಥಾನಗಳಿಗೆ ತೆರಳಿ ಆಹ್ವಾನ ನೀಡಿ ಹಿಂತಿರುಗಿ ಮುಂಡಿಯೋಳAಡ ಕುಟುಂಬಸ್ಥರಿಗೆ ಕಂಡಿಪಣ ಹಾಗೂ ಬೊವ್ವೇರಿಯಂಡ ಕುಟುಂಬಸ್ಥರಿಗೆ ಕೌಂದಿಪಣ ನೀಡಿ ಕಾಡು ದಾರಿಯ ಮೂಲಕ ಕೇರಳದ ಪಯ್ಯವೂರ್‌ಗೆ ತೆರಳುತ್ತಾರೆ.

ತಾ.೧೮ ರಂದು ನಾಡಿಗೆ ಒಳಪಟ್ಟ ಭಕ್ತರು ಎತ್ತು ಪೋರಾಟದೊಂದಿಗೆ ಪಯ್ಯವೂರ್‌ಗೆ ಹೊರಟು ೨೦,೨೧,೨೨ ರಂದು ಕ್ರಮವಾಗಿ ಎಂಟು, ಒಂಬತ್ತು, ಹತ್ತು ಊಟ್ ಹಬ್ಬ ನಡೆಯುತ್ತದೆ. ನಂತರ ಆನೆಯ ಮೇಲೆ ದೇವರ ಪ್ರದಕ್ಷಿಣೆ, ದೇವರಿಗೆ ತುಪ್ಪಾಭಿಷೇಕ ನಡೆದು ಹಬ್ಬಕ್ಕೆ ತೆರೆ ಎಳೆಯಲಾಗುತ್ತದೆ. ಕಡಿಯತ್ ನಾಡಿನಿಂದ ಬಂದ ಭಕ್ತಾದಿಗಳ ಅಕ್ಕಿಯನ್ನು ಮುಂಡಿಯೋಳAಡ ಹಾಗೂ ಬೊವ್ವೇರಿಯಂಡ ಕುಟುಂಬಸ್ಥರು ಅಳತೆಮಾಡಿ ನೋಂದಾಯಿಸಿಕೊಳ್ಳುತ್ತಾರೆ. ಅದಕ್ಕೆ ಪ್ರತಿಫಲವಾಗಿ ಪ್ರಸಾದ ರೂಪದಲ್ಲಿ ಭಕ್ತಾದಿಗಳಿಗೆ ತೆಂಗಿನಕಾಯಿ ಕೊಡುವ ಪದ್ಧತಿ ರೂಢಿಯಲ್ಲಿದೆ.

ಹಬ್ಬದಲ್ಲಿ ಕೊಡಗಿನ ಕಡಿಯತ್‌ನಾಡಿಗೆ ಒಳಪಟ್ಟ ಭಕ್ತರಿಂದ ದುಡಿಕೋಟ್ ಪಾಟ್, ಬೋಳಕಾಟ್ ಇರುತ್ತದೆ. ಮುಂಡಿಯೋಳAಡ ಹಾಗೂ ಬೊವ್ವೇರಿಯಂಡ ಕುಟುಂಬದ ತಲಾ ಒಬ್ಬರನ್ನು ದೇವಸೋಮ್ ಬೋರ್ಡ್ನಲ್ಲಿ ಟ್ರಸ್ಟಿಗಳಾಗಿ ನೇಮಿಸಿದ್ದಾರೆ.