ಮಡಿಕೇರಿ, ಫೆ. ೧೦: ಮುಲ್ಲೇಂಗಡ ಕುಟುಂಬದ ವತಿಯಿಂದ ಆಯೋಜಿಸಿರುವ ಪ್ರಥಮ ವರ್ಷದ ಕೊಡವ ಕೌಟುಂಬಿಕ ಕಬಡ್ಡಿ ನಮ್ಮೆ ಏಪ್ರಿಲ್ ೨ ಹಾಗೂ ೩ ರಂದು ಕಂಡAಗಾಲ ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಸಂಚಾಲಕ ಮುಲ್ಲೇಂಗಡ ಮಧೋಶ್ ಪೂವಯ್ಯ ಮಾಹಿತಿ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಪ್ರಥಮ ಬಾರಿಗೆ ಕೊಡವ ಕುಟುಂಬಗಳ ನಡುವೆ ಕಬಡ್ಡಿ ಪಂದ್ಯಾವಳಿಯನ್ನು ನಡೆಸಲಾಗುತ್ತಿದೆ. ಈಗಾಗಲೇ ನೋಂದಣಿ ಆರಂಭಗೊAಡಿದ್ದು, ಸುಮಾರು ೫೦ ತಂಡ ಭಾಗವಹಿಸುವ ನಿರೀಕ್ಷೆ ಇದೆ. ಕರ್ನಾಟಕ ಕಬಡ್ಡಿ ಫೆಡರೇಷನ್ ನಿಯಮಾವಳಿಗಳಂತೆ ಮ್ಯಾಟ್ ಕಬಡ್ಡಿ ನಡೆಯಲಿದ್ದು, ನೋಂದಾಯಿತ ತೀರ್ಪುಗಾರರು, ತಾಂತ್ರಿಕ ಸಮಿತಿಯನ್ನು ಒಳಗೊಂಡಿರುತ್ತದೆ. ವಿಜೇತ ತಂಡಕ್ಕೆ ರೂ. ೩೦ ಸಾವಿರ, ದ್ವಿತೀಯ ಬಹುಮಾನವಾಗಿ ರೂ. ೨೦ ಸಾವಿರ ನಗದು ಬಹುಮಾನದೊಂದಿಗೆ ಆಕರ್ಷಕ ಟ್ರೋಫಿ ನೀಡಲಾಗುವುದು.

ಮಾರ್ಚ್ ೧೫ರೊಳಗೆ ತಂಡಗಳ ನೋಂದಣಿ ಅವಕಾಶವಿದೆ. ಮೊದಲು ನೋಂದಾಯಿಸಿಕೊAಡ ೧೦ ತಂಡಗಳಿಗೆ ವಿಶೇಷ ಕಾಣಿಕೆ ನೀಡಲಾಗುವುದು ಹೆಚ್ಚಿನ ಮಾಹಿತಿ ೯೪೮೦೫೫೬೬೬೭ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಕುಟುಂಬದ ಅಧ್ಯಕ್ಷ ಮುಲ್ಲೇಂಗಡ ಶಂಕರಿ ಪೊನ್ನಪ್ಪ, ಕ್ರೀಡಾ ನಿರ್ದೇಶಕ ಮುಲ್ಲೇಂಗಡ ರಘು ದೇವಯ್ಯ ಉಪಸ್ಥಿತರಿದ್ದರು.