ಬೆಂಗಳೂರು, ಫೆ. ೧೦: ತಾ. ೧೨ ರಿಂದ ೧೪ ರವರೆಗೆ ನಡೆಯಲಿರುವ ಭಾರತ ಅಂತರರಾಷ್ಟಿçÃಯ ಕಾಫಿ ಉತ್ಸವಕ್ಕೆ ಜಯಮಹಲ್ ಅರಮನೆಯಲ್ಲಿ ಭರದ ಸಿದ್ಧತೆಗಳು ನಡೆದಿವೆ. ವಿಶೇಷ ಕಾಫಿ ಸಂಘ (SಅಂI), ಕಾಫಿ ಬೋರ್ಡ್ ಆಫ್ ಇಂಡಿಯಾ ಮತ್ತು ನೆಸ್ಲೆ ಇಂಡಿಯಾ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ದೇಶದ ಇತಿಹಾಸದಲ್ಲೇ ಅತಿದೊಡ್ಡ ಕಾಫಿ ಪ್ರದರ್ಶನವಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಜರ್ಮನಿ, ಜಪಾನ್ ಸೇರಿದಂತೆ ಇತರೆಡೆಗಳಿಂದ ೨೦,೦೦೦ಕ್ಕೂ ಹೆಚ್ಚು ಕಾಫಿ ಪ್ರಿಯರು ಈ ಉತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ಕಾಫಿ ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ಕಾರ್ಯದರ್ಶಿ ಎಂ. ಕುರ್ಮಾ ರಾವ್ ತಿಳಿಸಿದ್ದಾರೆ. ಕಾಫಿ ಬೆಳೆಗಾರರು, ಸಂಸ್ಕರಣಗಾರರು, ರೋಸ್ಟರ್‌ಗಳು, ರಫ್ತುದಾರರು, ಬಾರಿ ಸ್ಟಾಗಳು ಮತ್ತು ಗ್ರಾಹಕರೂ ಇದರಲ್ಲಿ ಸೇರಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಕೂರ್ಮಾರಾವ್, “ಭಾರತೀಯ ಕಾಫಿಯು ಗುಣಮಟ್ಟ ಮತ್ತು ವೈವಿಧ್ಯತೆಗೆ ಹೆಸರುವಾಸಿಯಾಗುತ್ತಿದೆ. IIಅಈ ನಂತಹ ವೇದಿಕೆಗಳು ಉತ್ಪಾದಕರನ್ನು ಮಾರುಕಟ್ಟೆಗೆ ಸಂಪರ್ಕಿಸಲು, ಉತ್ತಮ ಪದ್ಧತಿಗಳನ್ನು ಪ್ರೋತ್ಸಾಹಿಸಲು ಮತ್ತು ದೇಶೀಯ-ಜಾಗತಿಕ ಮಾರುಕಟ್ಟೆಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ,” ಎಂದು ಹೇಳಿದರು. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ೨೦೨೬ರ ಉತ್ಸವದಲ್ಲಿ ರಾಷ್ಟಿçÃಯ ಕಾಫಿ ಚಾಂಪಿಯನ್‌ಶಿಪ್ ಕೂಡ ಇದೆ. ಇದರಲ್ಲಿ ಪ್ರಾದೇಶಿಕ ಸುತ್ತಿನ ವಿಜೇತರು ಅಂತರರಾಷ್ಟಿçÃಯ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆಯುತ್ತಾರೆ. ಸ್ಪೆಷಾಲಿಟಿ ಕಾಫಿ ಅಸೋಸಿಯೇಷನ್ ಆಫ್ ಇಂಡಿಯಾದ ಅಧ್ಯಕ್ಷೆ ಹಮ್ಸಿನಿ ಅಪ್ಪದುರೈ ಮಾತನಾಡಿ, “ಭಾರತದ ಕಾಫಿ ವಲಯವು ಕೇವಲ ಸರಕು-ಆಧಾರಿತ ವಿಧಾನದಿಂದ ಗುಣಮಟ್ಟ ಮತ್ತು ಅನುಭವ-ಕೇಂದ್ರಿತ ಮಾರುಕಟ್ಟೆಗೆ ಬದಲಾಗುತ್ತಿದೆ. ಈ ಉತ್ಸವವು ದೇಶೀಯ ಮತ್ತು ಜಾಗತಿಕ ಮಟ್ಟದಲ್ಲಿ ಭಾರತೀಯ ಕಾಫಿಯ ಸಾಮರ್ಥ್ಯ ಮತ್ತು ವೈವಿಧ್ಯತೆಯನ್ನು ಪ್ರದರ್ಶಿಸುತ್ತದೆ,” ಎಂದು ತಿಳಿಸಿದ್ದಾರೆ. ಈ ಉತ್ಸವವು “ಫಾರ್ಮ್-ಟು-ಕಪ್” ರೂಪರೇಖೆಯಡಿಯಲ್ಲಿ ಕಾಫಿ ಉತ್ಪಾದನೆ, ಸಂಸ್ಕರಣೆ, ರೋಸ್ಟಿಂಗ್ ಮತ್ತು ಬ್ರೂಯಿಂಗ್ ಕಲೆಯನ್ನು ಪ್ರದರ್ಶಿಸುತ್ತದೆ. ವಿಶೇಷ ರುಚಿ ಪರೀಕ್ಷೆ, ಕಾರ್ಯಾಗಾರಗಳು ಮತ್ತು ಕ್ಯುಪಿಂಗ್ ಸೆಷನ್‌ಗಳ ಮೂಲಕ ಪ್ರಾದೇಶಿಕ ಕಾಫಿಯ ವಿಶಿಷ್ಟತೆಗಳನ್ನು ಹಂಚಿಕೊಳ್ಳಲಾಗುತ್ತದೆ. ಈ ಕಾರ್ಯಕ್ರಮವು ಜಯಮಹಲ್ ಪ್ಯಾಲೇಸ್‌ನ ಚಾಮರಾಜ ವಜ್ರದಲ್ಲಿ ನಡೆಯಲಿದೆ. ಇದು ಭಾರತದಲ್ಲಿ ವಿಶೇಷ ಕಾಫಿ ಸಂಸ್ಕೃತಿಯನ್ನು ಪ್ರಚಾರ ಮಾಡುವ ಗುರಿಯನ್ನು ಹೊಂದಿದೆ. ಈ ಉತ್ಸವವು ಕಾಫಿ ಪ್ರಿಯರಿಗೆ ಗುಣಮಟ್ಟ ಮತ್ತು ಪಾರದರ್ಶಕತೆಯ ಮಹತ್ವವನ್ನು ಅರಿವು ಮೂಡಿಸುವ ಅವಕಾಶವನ್ನು ನೀಡುತ್ತದೆ ಎಂದಿದ್ದಾರೆ.

ಕೋವರ್‌ಕೊಲ್ಲಿ ಇಂದ್ರೇಶ್