ಮಡಿಕೇರಿ,ಫೆ.೯: ಕ್ಲೀನ್ ಕೂರ್ಗ್ ಇನಿಷಿಯೇಟಿವ್ ಸದಸ್ಯರಿಂದ ಮೂರ್ನಾಡು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತಾ ಅರಿವು ಕಾರ್ಯಕ್ರಮ ನೆರವೇರಿತು.

ಮೂರ್ನಾಡಿನ ಮಾರುತಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಕ್ಲೀನ್ ಕೂರ್ಗ್ ಇನಿಷಿಯೇಟಿವ್‌ನ ಸದಸ್ಯರು ಸರಕಾರಿ ಶಾಲೆಗೆ ಸೈಕಲ್‌ನಲ್ಲಿ ತೆರಳಿ ಅಲ್ಲಿನ ವಿದ್ಯಾರ್ಥಿಗಳಲ್ಲಿ ಸ್ವಚ್ಚತೆ ಬಗ್ಗೆ ಅರಿವು ಮೂಡಿಸಿದರು.

ಪರಿಸರ ಹಾಗೂ ಸ್ವಚ್ಚತೆಯ ಬಗ್ಗೆ ಶಾಲೆಯ ಗೋಡೆಯಲ್ಲಿ ಚಿತ್ರೀಕರಿಸಲಾದ ಮಾಹಿತಿಯನ್ನು ಈ ಸಂದರ್ಭ ಉದ್ಘಾಟನೆಗೊಳಿಸಲಾಯಿತು. ಪರಿಸರ ಸ್ವಚ್ಚತೆ ಸಂಬAಧ ಭಾಷಣ ಸ್ಫರ್ದೆಯನ್ನೂ ಈ ಸಂದರ್ಭದಲ್ಲಿ ಏರ್ಪಡಿಸಲಾಗಿತ್ತು.

ಶಾಲೆಯ ಮುಖ್ಯೋಪಾಧ್ಯಾಯಿನಿ ಪ್ರೇಮ ಕುಮಾರಿ, ಕ್ಲೀನ್ ಕೂರ್ಗ್ ಇನಿಷಿಯೇಟಿವ್‌ನ ಅರುಣ್ ಅಪ್ಪಚ್ಚು ಅವರುಗಳು ಮಾತನಾಡಿ ವಿದ್ಯಾರ್ಥಿಗಳಲ್ಲಿ ಸ್ವಚ್ಚತೆಯ ಕುರಿತು ಅರಿವು ಮೂಡಿಸಿದರು.