ಮಡಿಕೇರಿ, ಫೆ.೯: ಮಡಿಕೇರಿಯ ಸಂತ ಮೈಕಲರ ವಿದ್ಯಾಸಂಸ್ಥೆಯಲ್ಲಿ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ‘ಅನುಸ್ಮೃತಿ‘ ಬೀಳ್ಕೊಡುಗೆ ಕಾರ್ಯಕ್ರಮ ಸಮಾರಂಭವನ್ನು ಏರ್ಪಡಿಸಲಾಗಿತ್ತು.

ವಿದ್ಯಾಸಂಸ್ಥೆಯ ಸಂಚಾಲಕರಾದ ಸಂಜಯ್ ಕುಮಾರ್ ಎಫ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಕ್ತಿ ದಿನಪತ್ರಿಕೆಯ ಸಂಪಾದಕರಾದ ಜಿ ಚಿದ್ವಿಲಾಸ್ ಅವರು ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ವಿದ್ಯೆ ಎಷ್ಟು ಅವಶ್ಯಕವೋ ಮಾನವೀಯ ಮೌಲ್ಯಗಳೂ ಅಷ್ಟೇ ಮುಖ್ಯ ಎಂದರು. ಸಮಯ ಪಾಲನೆ, ಶಿಸ್ತು, ಪರಿಸರ ಸಂರಕ್ಷಣೆಯೊAದಿಗೆ ಹುಟ್ಟು ಹಬ್ಬದಂದು ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳಲ್ಲಿ ಒಂದೊAದು ಗಿಡವನ್ನು ನೆಡುವಂತೆ ಕರೆ ನೀಡಿದರು. ವಿದ್ಯಾರ್ಥಿಗಳು ಮೊಬೈಲ್ ಫೋನ್ ಬಳಕೆ ಕಡಿತಗೊಳಿಸುವಂತೆ, ಪೋಷಕರ ಪರಿಶ್ರಮದ ಹಣಕ್ಕೆ ಗೌರವ ನೀಡಬೇಕೆಂದು ಹಾಗೂ ಅನಗತ್ಯ ಹಣ ವ್ಯಯಿಸದಂತೆ, ಪ್ರಾಣಿಗಳ ಮೇಲೆ ದಯೆ ತೋರುವಂತೆ ಕಿವಿ ಮಾತಾಡಿದರು. ಶಿಕ್ಷಕರು ವಿದ್ಯಾರ್ಥಿಗಳ ೨ನೇ ಪೋಷಕರಾಗಿದ್ದು, ಅವರುಗಳನ್ನು ಗೌರವಿಸುವಂತೆ ಸಲಹೆ ಇತ್ತರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ್ದ ಗುರು ಸಂಜಯ್ ಕುಮಾರ್ ಅವರು ಮಾತನಾಡಿ, ಶಿಕ್ಷಣದ ಜೊತೆಗೆ ಶಿಸ್ತು, ಸಮಯಪ್ರಜ್ಞೆ, ನಾಯಕತ್ವ ಗುಣ ಬೆಳೆಸಿಕೊಳ್ಳುವುದು ಮುಖ್ಯ ಎಂದರು. ಸಾಧನೆಯ ಶಿಖರವೇರುವಾಗ ಕಾಲೆಳೆಯುವವರು ಬಹಳಷ್ಟು ಮಂದಿ ಇರುತ್ತಾರೆ, ಆದರೆ ಅವರನ್ನು ಲೆಕ್ಕಿಸದೆ ಪ್ರಯತ್ನದೊಂದಿಗೆ ಜಯ ಸಾಧಿಸುವಂತೆ ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಪಂಕಜ, ಪ್ರೌಢಶಾಲಾ ಮುಖ್ಯಸ್ಥರಾದ ಜೆಫ್ರಿ ಡಿ.ಸಿಲ್ವಾ, ಪ್ರಾಥಮಿಕ ಶಾಲಾ ಮುಖ್ಯಸ್ಥರಾದ ಸಿಸ್ಟರ್ ಸರಿತಾ ಹಾಗೂ ಸಿಸ್ಟರ್ ಸಿಸಿಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

ವಿದ್ಯಾರ್ಥಿ ತನುಶ್ರೀ ಸ್ವಾಗತಿಸಿ ಮರಿಯ ವಂದಿಸಿದರು. ಲಿಪಿಕ್ಷ ಹಾಗೂ ಮೂಶಿಕ ವಂದಿಸಿದರು. ಶಿಕ್ಷಕಿಯರಾದ ಸವರಿನ್ ಡಿಸೋಜ, ಭವ್ಯ, ರೀನಾ, ಜಾಯ್ಸ್ ಡಿಸೋಜ ಕಾರ್ಯಕ್ರಮ ನಿರ್ವಹಿಸಿದರು.