ಮಡಿಕೇರಿ, ಫೆ. ೮: ನಗರಸಭೆ ವ್ಯಾಪ್ತಿಯಲ್ಲಿ ಇರುವ ೨೩ ವಾರ್ಡ್ಗಳನ್ನು ಸರ್ಕಾರ ಸೂಚಿಸಿರುವಂತೆ ಒಡಿಎಫ್ ಪ್ರೋಟೋಕಾಲ್ ಮತ್ತು ಒಡಿಎಫ್+ (ಬಯಲು ಶೌಚಾಲಯ ಮುಕ್ತ ಪ್ರದೇಶ) ಶಿಷ್ಟಾಚಾರಗಳಂತೆ ಕ್ರಮ ಅನುಸರಿಸಿ ಘೋಷಣಾ ಪತ್ರ ಪಡೆಯಲಾಗಿದೆ. ಅದರಂತೆ ಈ ಪ್ರಕಟಣೆಯನ್ನು ಸಾರ್ವಜನಿಕ ಮಾಹಿತಿಗಾಗಿ ಪ್ರಚಾರಪಡಿಸಲಾಗಿದ್ದು, ಒಡಿಎಪ್ ಪ್ರೋಟೋಕಾಲ್ ಮತ್ತು ಒಡಿಎಫ್+ (ಬಯಲು ಶೌಚಾಲಯ ಮುಕ್ತ ಪ್ರದೇಶ) ಈಗಾಗಲೇ ಘೋಷಿಸಲಾಗಿದೆ.
ಈ ಸಂಬAಧ ಬಯಲು ಪ್ರದೇಶದಲ್ಲಿ ಮಲ-ಮೂತ್ರ ವಿಸರ್ಜನೆ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಮನೆ ಅಥವಾ ವಾಣಿಜ್ಯ ಪ್ರದೇಶಗಳಿಂದ ಮಲ ಮೂತ್ರದ ತ್ಯಾಜ್ಯವನ್ನು ಚರಂಡಿಗೆ ಹರಿಸಿದಲ್ಲಿ ಬಯಲು ಮೂತ್ರ ವಿಸರ್ಜನೆಗೆ ರೂ. ೫೦೦, ಬಯಲು ಮಲ ವಿಸರ್ಜನೆ ರೂ. ೧,೦೦೦ ಹಾಗೂ ಸಾರ್ವಜನಿಕ ಚರಂಡಿಗೆ ಮಲ ತ್ಯಾಜ್ಯ ಹರಿಸಿದ್ದಲ್ಲಿ ರೂ. ೨,೦೦೦ ದಂಡ ವಿಧಿಸಿ, ಕಾನೂನು ಕ್ರಮ ವಹಿಸಲಾಗುವುದು. ಮಡಿಕೇರಿ ನಗರಸಭೆಯ ವ್ಯಾಪ್ತಿಯಲ್ಲಿನ ವಸತಿ/ವಾಣಿಜ್ಯ ಕಟ್ಟಡ ಹೊಂದಿರುವ ಮಾಲೀಕರು ಸೆಪ್ಟಿಕ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಲು ನಗರಸಭೆಯ ಸಕ್ಕಿಂಗ್ ಯಂತ್ರವನ್ನು ಸದುಪಯೋಗಪಡೆದುಕೊಳ್ಳುವಂತೆ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.