*ಗೋಣಿಕೊಪ್ಪ, ಫೆ. ೮: ಪಾಂಡಿಚೇರಿಯಲ್ಲಿ ನಡೆದ ೧೧ನೇ ರಾಷ್ಟçಮಟ್ಟದ ನೃತ್ಯ ಸ್ಪರ್ಧೆಯಲ್ಲಿ ತಿತಿಮತಿ ಯಾಹವಿ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಸ್ಪರ್ಧೆಯಲ್ಲಿ ಯಶ್ಮಿತಾ, ವರುಣ್, ಅನುಷ್ಕಾ, ಮಹಿಕ ಡಯಾನಾ, ಭುವನೇಶ್ವರಿ, ನಿಕ್ಷಿತಾ ಭಾಗವಹಿಸಿ ೧೦ ಚಿನ್ನದ ಪದಕ ಹಾಗೂ ೨ ಬೆಳ್ಳಿ ಪದಕ ಪಡೆಯುವುದರ ಮೂಲಕ ಮಲೇಷಿಯಾದಲ್ಲಿ ನಡೆಯುವ ಅಂತರರಾಷ್ಟಿçÃಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ನೃತ್ಯ ಶಾಲೆಯ ಮುಖ್ಯಸ್ಥೆ ಶ್ವೇತಾ ಸುಬ್ರಮಣಿ ಮಾಹಿತಿ ನೀಡಿದ್ದಾರೆ.