ಮಡಿಕೇರಿ, ಫೆ. ೭: ಮಡಿಕೇರಿ ಹಾಗೂ ನಂದಿಮೊಟ್ಟೆಯಿAದ ಮಾಂದಲಪಟ್ಟಿಗೆ ಸಂಚರಿಸುವ ಜೀಪ್‌ಗಳು ಕಡ್ಡಾಯವಾಗಿ ರೂ. ೨,೫೦೦ ಹಣವನ್ನು ಮಾತ್ರ ಬಾಡಿಗೆಯಾಗಿ ಪಡೆಯಬೇಕು. ಅಲ್ಲದೆ ಪೊಲೀಸ್ ಇಲಾಖೆಯಿಂದ ಎಂ.ಟಿ. ಸಂಖ್ಯೆ ಪಡೆದ ವಾಹನಗಳಷ್ಟೆ ಸಂಚರಿಸಬೇಕೆAದು ನಿರ್ಣಯ ಕೈಗೊಳ್ಳಲಾಗಿದೆ ಎಂದು ಮಡಿಕೇರಿ ಜೀಪ್ ಚಾಲಕರ ಹಾಗೂ ಮಾಲೀಕರ ಸಂಘದ ಅಧ್ಯಕ್ಷ ಉಣ್ಣಿಕೃಷ್ಣ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾಸಿಗರಿಂದ ಜೀಪ್ ಚಾಲಕನೋರ್ವ ಹೆಚ್ಚಿನ ಹಣ ವಸೂಲಿ ಮಾಡಿದ ವಿಚಾರ ವಿವಾದಗೊಂಡ ಬೆನ್ನಲ್ಲೇ ಜೀಪ್ ಚಾಲಕ ಹಾಗೂ ಮಾಲೀಕರ ಸಂಘ ಇದನ್ನು ತಡೆಗಟ್ಟಲು ಮುಂದಾಗಿದೆ. ಕೆಲವು ದಿನಗಳ ಹಿಂದೆ ಚಾಲಕ ಹಾಗೂ ಮಾಲೀಕರ ಸಭೆ ನಡೆಸಿ ತಿಳುವಳಿಕೆ ನೀಡುವ ಕೆಲಸವಾಗಿದೆ. ಕಡ್ಡಾಯವಾಗಿ ರೂ. ೨೫೦೦ ಹಣವನ್ನು ಬಾಡಿಗೆಯಾಗಿ ಪಡೆಯಬೇಕು. ವ್ಯೂ ಪಾಯಿಂಟ್‌ನಲ್ಲಿ ಒಂದು ಗಂಟೆಗಳ ಕಾಲ ಕಾದು ಪ್ರವಾಸಿಗರನ್ನು ಕರೆತರಬೇಕೆಂಬ ಷರತ್ತನ್ನು ವಿಧಿಸಲಾಗಿದೆ. ಸರತಿ ಸಾಲಿನಂತೆ ವಾಹನಗಳು ಬಾಡಿಗೆಗೆ ತೆರಳಬೇಕು. ಅಗತ್ಯ ದಾಖಲಾತಿ ಹಾಗೂ ಹಳದಿ ಬೋರ್ಡ್ ಹೊಂದಿರುವ ವಾಹನಗಳಷ್ಟೆ ಬಾಡಿಗೆ ಮಾಡಬೇಕೆಂದು ಸ್ಪಷ್ಟಪಡಿಸಲಾಗಿದೆ. ಸಭೆಗೆ ಬಂದಿದ್ದ ೧೫೦ ಚಾಲಕರು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಅಲ್ಲದೆ ಪೊಲೀಸ್ ಇಲಾಖೆಗೆ ಅಗತ್ಯ ದಾಖಲಾತಿಯನ್ನು ನೀಡಿ ವಾಹನಗಳಿಗೆ ಎಂ.ಟಿ. ನಂಬರ್ ಅನ್ನು ಪಡೆದುಕೊಳ್ಳಬೇಕು. ಪರಸ್ಪರ ಹೊಂದಾಣಿಕೆಯಿAದ ಸೇವೆ ನೀಡಲಾಗುವುದು. ಯಾವುದೇ ಸಮಸ್ಯೆ ಉಂಟಾಗದAತೆ ಎಚ್ಚರಿಕೆ ವಹಿಸಲಾಗುವುದು. ಹೆಚ್ಚುವರಿ ಹಣ ಪಡೆದಿರುವುದು ಕಂಡುಬAದಲ್ಲಿ ಸಂಬAಧಪಟ್ಟ ಅಧಿಕಾರಿಗಳು ಕ್ರಮವಹಿಸಲಿದ್ದಾರೆ ಎಂದು ಎಚ್ಚರಿಸಿದರು. ಮಾಂದಲಪಟ್ಟಿ ಜೀಪ್ ಚಾಲಕ ಹಾಗೂ ಮಾಲೀಕರ ೪ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ಸಂಘದ ಪದಾಧಿಕಾರಿ ಚನ್ನಪಂಡ ದರ್ಶನ್ ಮಾತನಾಡಿ, ದಾಖಲೆ ನೀಡದ ವಾಹನಗಳಿಗೆ ಪೊಲೀಸ್ ಇಲಾಖೆ ಎಂ.ಟಿ. ನಂಬರ್ ನೀಡುವುದಿಲ್ಲ. ಸರತಿ ಸಾಲಿನಲ್ಲಿಯೇ ಬಾಡಿಗೆಗೆ ಚಾಲಕರು ತೆರಳಬೇಕಾಗಿದೆ. ನಿಗದಿತ ದರವನ್ನು ಮಾತ್ರ ಪಡೆಯಬೇಕು. ಜೊತೆಗೆ ಗ್ರಾ.ಪಂ.ಗೆ ರೂ. ೫೦ ಹಾಗೂ ಮಾಂದಲಪಟ್ಟಿಯಲ್ಲಿ ಅರಣ್ಯ ಇಲಾಖೆಗೆ ತಲಾ ಓರ್ವನಿಗೆ ರೂ. ೫೦ ಹಾಗೂ ವಾಹನಕ್ಕೆ ರೂ. ೫೦ ಹಣವನ್ನು ಪ್ರವಾಸಿಗರು ನೀಡಬೇಕಾಗಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ಜೀಪ್ ಚಾಲಕ ಹಾಗೂ ಮಾಲೀಕರ ಸಂಘದ ಉಪಾಧ್ಯಕ್ಷ ಜೆ.ಎಸ್. ವಿನೋದ್, ಗೌರವಾಧ್ಯಕ್ಷ ಜಾನ್ಸನ್, ಕಾರ್ಯದರ್ಶಿ ಹರೀಶ್, ನಂದಿಮೊಟ್ಟೆ ಜೀಪ್ ಚಾಲಕ ಹಾಗೂ ಮಾಲೀಕರ ಸಂಘದ ಉಪಾಧ್ಯಕ್ಷ ಉಮೇಶ್ ಹಾಜರಿದ್ದರು.