ವೀರಾಜಪೇಟೆ, ಫೆ. ೭: ಕೊಡವ ಸಾಹಿತ್ಯ ಹಾಗೂ ಸಂಸ್ಕೃತಿಯ ಮೇಲೆ ಆಸಕ್ತಿ-ಅಭಿಮಾನ ಹುಟ್ಟಿಸುವ ಉದ್ದೇಶದಿಂದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ನೂತನವಾಗಿ ಕೊಡವ ಪುಸ್ತಕ ಪತ್ತಾಯ ಯೋಜನೆ ಆರಂಭಿಸಿರುವುದು ಶ್ಲಾಘನೀಯ ಎಂದು ಶಾಸಕರು ಹಾಗೂ ಮುಖ್ಯಮಂತ್ರಿಗಳÀ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಹೇಳಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ವೀರಾಜಪೇಟೆಯಲ್ಲಿರುವ ಶಾಸಕರ ಗೃಹಕಚೇರಿಯಲ್ಲಿ ಇದೇ ಮೊದಲ ಬಾರಿಗೆ ಸ್ಥಾಪಿಸಿದ ಕೊಡವ ಪುಸ್ತಕ ಪತ್ತಾಯವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು, ಅಕಾಡೆಮಿಯ ಇಂತಹ ಯೋಜನೆಯು ಕೊಡವ ಸಾಹಿತ್ಯ-ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸಲು ಸಹಕಾರಿಯಾಗಲಿದೆ.
ಭಾಷೆಯಿದ್ದರೆ ಮಾತ್ರ ಜನಾಂಗ ಹಾಗೂ ಸಂಸ್ಕೃತಿ ಉಳಿಯಲು ಸಾಧ್ಯ. ಹಿಂದಿನ ಕಾಲದಲ್ಲಿ ನಮ್ಮ ಹಿರಿಯರಿಗೆ ಯಾವುದೇ ಅನುಕೂಲತೆಗಳು ಇರಲಿಲ್ಲ. ಆದರೂ ಕೊಡವ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದ್ದಾರೆ. ಅವನ್ನೆಲ್ಲ ನಾವು ನಮ್ಮ ಮುಂದಿನ ಪೀಳಿಗೆಗೆ ಸಾಂಪ್ರದಾಯಿಕವಾಗಿ ಮುಂದುವರಿಸುವ ಕಾರ್ಯ ಆಗಬೇಕು. ಕೊಡವ ಪುಸ್ತಕ ಪತ್ತಾಯವನ್ನು ಎಲ್ಲಾ ಐನ್‌ಮನೆಗಳಲ್ಲಿ, ಮನೆ ಮನೆಗಳಲ್ಲಿ ಸ್ಥಾಪಿಸುವ ಗುರಿ ಇಟ್ಟುಕೊಂಡಿರುವುದು ಸಂತಸದ ವಿಷಯ. ಎಲ್ಲರೂ ಇದಕ್ಕೆ ಸಹಕರಿಸುವಂತಾಗಲಿ ಎಂದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ ಕೊಡವ ಭಾಷೆಯು ಉತ್ತಮ ಮೌಲ್ಯಗಳನ್ನು ಹೊಂದಿರುವ, ಸಂಪದ್ಭರಿತವಾಗಿರುವ ಭಾಷೆಯಾಗಿದೆ. ಕೊಡವ ಭಾಷೆಯಲ್ಲಿ ಮತ್ತಷ್ಟು ಸಾಹಿತ್ಯ ರೂಪುಗೊಳ್ಳಬೇಕು. ಸಾಹಿತಿಗಳಿಗೆ ಉತ್ತಮವಾದ ವೇದಿಕೆ ಸೃಷ್ಟಿಯಾಗಬೇಕು. ೪ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಇದಕ್ಕಾಗಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ರೂಪಿಸಿರುವ ಕೊಡವ ಪುಸ್ತಕ ಪತ್ತಾಯ ಮುಂದಿನ ದಿನಗಳಲ್ಲಿ ಕೊಡವ ಸಾಹಿತ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಕೊಡವ ಪುಸ್ತಕ ಪತ್ತಾಯವನ್ನು ಮುಂದಿನ ದಿನಗಳಲ್ಲಿ ಪ್ರತೀಯೊಂದು ಕೊಡವ ಸಮಾಜಗಳಲ್ಲಿ, ಭಾಷಿಕರ ಸಮಾಜಗಳಲ್ಲಿ, ಬಲ್ಯಮನೆ, ಮುಂದ್‌ಮನೆ, ಐನ್‌ಮನೆಗಳಲ್ಲಿ, ದೇವನೆಲೆಗಳಲ್ಲಿ ಸ್ಥಾಪಿಸುವ ಚಿಂತನೆಯಿದೆ. ಸಾಹಿತ್ಯಾಭಿಮಾನಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು.
ಕೊಡವ ಸಾಹಿತ್ಯ ಕ್ಷೇತ್ರವನ್ನು ಅಂದಿನ ಕಾಲಮಾನದಲ್ಲಿ ಉತ್ತುಂಗಕ್ಕೆ ಏರಿಸಿದ ನಡಿಕೇರಿಯಂಡ ಚಿಣ್ಣಪ್ಪ, ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ, ಐಚೆಟ್ಟಿರ ಮಾ. ಮುತ್ತಣ್ಣ, ಬಾಚಮಡ ಡಿ.ಗಣಪತಿ, ಮಂಡಿರ ಜಯ ಅಪ್ಪಣ್ಣ, ಬೊವ್ವೇರಿಯಂಡ ನಂಜಮ್ಮ ಚಿಣ್ಣಪ್ಪ ಇವರೆಲ್ಲರ ಸಾಹಿತ್ಯವನ್ನು ಜಿವಂತವಾಗಿರಿಸಲು ಕೊಡವ ಪುಸ್ತಕ ಪತ್ತಾಯವು ಸಹಕಾರಿಯಾಗಲಿದೆ ಎಂದರು.
ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಮಾತನಾಡಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಉತ್ತಮ ಕಾರ್ಯಕ್ರಮಗಳು ನಡೆಯುತ್ತಿವೆ. ಇದರಿಂದಾಗಿ ಎಲ್ಲಾ ಜನಾಂಗಗಳ ಒಗ್ಗಟ್ಟಿಗೆ ಕಾರಣವಾಗಿದೆ. ಕೊಡವ ಭಾಷೆಯ ಬಳಕೆ ಅಧಿಕವಾಗಬೇಕು. ವಿದೇಶದಲ್ಲಿರುವ ನಮ್ಮ ಮಕ್ಕಳಿಗೆ ಕೊಡವ ಭಾಷೆ-ಸಾಹಿತ್ಯ ಮಹತ್ವವನ್ನು ಪೋಷಕರು ಕಲಿಸುವಂತಾಗಬೇಕು ಎಂದರು.
ಕೊಡವ ಸಮಾಜ ಒಕ್ಕೂಟಗಳ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಮಾತನಾಡಿ, ಕುಟ್ಟ ಕೊಡವ ಸಮಾಜ ಹಾಗೂ ಬಾಳುಗೋಡು ಕೊಡವ ಫೆಡರೇಶನಿನಲ್ಲಿ ಕೊಡವ ಪುಸ್ತಕ ಪತ್ತಾಯ ಸ್ಥಾಪಿಸುವಂತೆ ಮನವಿ ಮಾಡಿದರು. ಪುಸ್ತಕ ಓದುವ ಅಭ್ಯಾಸವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಮನೆಯಲ್ಲಿ ಕೊಡವ ಭಾಷೆಗೆ ಮಾತ್ರ ಆದ್ಯತೆ ನೀಡಬೇಕು ಎಂದರು. ವೇದಿಕೆಯಲ್ಲಿ ನಿವೃತ್ತ ಶಿಕ್ಷಕಿ ಹಿರಿಯರಾದ ಕರ್ನಂಡ ಬೊಳ್ಳಮ್ಮ ನಾಣಯ್ಯ ಉಪಸ್ಥಿತರಿದ್ದು ಮಾತನಾಡಿದರು.
ಸೋಮವಾರಪೇಟೆ ಕೊಡವ ಸಮಾಜದ ಅಧ್ಯಕ್ಷ ಮಾಳೇಟಿರ ಅಭಿಮನ್ಯುಕುಮಾರ್ ಮಾತನಾಡಿ ಅಕಾಡೆಮಿ ವತಿಯಿಂದ ಸೋಮವಾರಪೇಟೆ ಕೊಡವ ಸಮಾಜದಲ್ಲಿ ಪುಸ್ತಕ ಪತ್ತಾಯ ಸ್ಥಾಪಿಸುವುದಕ್ಕೆ ಸೋಮವಾರಪೇಟೆ ವಿಭಾಗದಲ್ಲಿ ಕೊಡವ ಭಾಷೆ-ಸಾಹಿತ್ಯ, ಸಂಸ್ಕೃತಿಪರ ಕಾರ್ಯಕ್ರಮಗಳಿಗೆ ನಮ್ಮ ಸಹಕಾರವಿದೆ ಎಂದರು.
ಮಾದಾಪುರ ಕೊಡವ ಸಮಾಜದ ಅಧ್ಯಕ್ಷ ಮಂಡೇಪAಡ ಮನು ಮೇದಪ್ಪ, ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ತೇಲಪಂಡ ಸುಬ್ಬಯ್ಯ, ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಐನಂಡ ಪ್ರಕಾಶ್ ಗಣಪತಿ, ಕೊಡವ ಭಾಷಿಕ ಸಮಾಜದ ವತಿಯಿಂದ ಎಲ್ಲಾ ಸಮಾಜಗಳ ಪರವಾಗಿ ಕೊಡವ ತಕ್ಕ್ ಜನಾಂಗಕಾರಡ ಒಕ್ಕೂಟದ ಪಡಿಞÁರಂಡ ಜಿ. ಅಯ್ಯಪ್ಪ, ಕೊಡವ ಭಾಷಿಕ ಸಮುದಾಯಗಳ ಅಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ ಕೊಡವ ಪುಸ್ತಕ ಪತ್ತಾಯಕ್ಕೆ ತಮ್ಮ ಬೆಂಬಲ ಸೂಚಿಸಿದರು.
ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಚೆಪ್ಪುಡಿರ ಅರುಣ್ ಮಾಚಯ್ಯ ಹಾಗೂ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ಕೊಡವ ಭಾಷಿಕ ಸಮುದಾಯಗಳ ಒಕ್ಕೂಟದಿಂದ ಸನ್ಮಾನಿಸಲಾಯಿತು. ವೀರಾಜಪೇಟೆಯ ಪಂಜರಪೇಟೆ ಕೊಡವ ಕೇರಿ ಅಧ್ಯಕ್ಷ ವಾಂಚಿರ ಟಿ.ನಾಣಯ್ಯ, ಪರದಂಡ ವಿಠಲ ಹಾಗೂ ಪದಾಧಿಕಾರಿಗಳು, ಕೆಂಬಟ್ಟಿ ಸಮಾಜದ ಬಿಲ್ಲೆರಿಕುಟ್ಟಡ ಪ್ರಭು ಅಯ್ಯಪ್ಪ, ಚೋಕುಟ್ಟಡ ಚಿಮ್ಮ ಅಯ್ಯಪ್ಪ, ಕಾರ್ಯಧ್ಯಕ್ಷ ಬಾಳೆಕುಟ್ಟಡ ಉದಯ ಮಾದಪ್ಪ ಮತ್ತಿತರರು ಕೊಡವ ಪುಸ್ತಕ ಪತ್ತಾಯಕ್ಕೆ ಬೆಂಬಲ ಸೂಚಿಸಿದರು.
ಬಣ್ಣ ಸಮಾಜದ ಅಧ್ಯಕ್ಷರಾದ ಬೀಕಚಂಡ ಪುಟ್ಟ ಬೆಳ್ಯಪ್ಪ ಹಾಗೂ ಸಮಾಜದವರು ಕುಡಿಯ ಸಮಾಜದ ಕುಡಿಯರ ಕೆ.ಮುತ್ತಪ್ಪ ಹಾಗೂ ಜನಾಂಗದವರು ಹಾಜರಿದ್ದರು. ಸಾಹಿತಿಗಳಾದ ಪಿ.ವೈಲೇಶ್, ಉಳುವಂಗಡ ಕಾವೇರಿ ಉದಯ, ಕೊಟ್ಟಿಯಂಡ ಜೀವನ್ ಚಿಣ್ಣಪ್ಪ, ಪ್ರೊ.ಪಟ್ಟಡ ಎ. ಪೂವಣ್ಣ, ತಾತಂಡ ಪ್ರಭಾ ನಾಣಯ್ಯ, ಕರೋಟಿರ ಶಶಿ ಸುಬ್ರಮಣಿ, ಅಮ್ಮಣಿಚಂಡ ಗಂಗಮ್ಮ ಬೆಳ್ಯಪ್ಪ, ಅಜ್ಜಿನಿಕಂಡ ಪ್ರಮೀಳ ನಾಚಯ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಅರೆಕಾಡ್-ಹೊಸ್ಕೇರಿ ಕೊಡವ ಅಸೋಸಿಯೇಶನ್ ಅಧ್ಯಕ್ಷರಾದ ಕುಕ್ಕೆರ ಜಯಚಿಣ್ಣಪ್ಪ ಹಾಗೂ ಪದಾಧಿಕಾರಿಗಳು, ಹಿರಿಯ ಶಿಕ್ಷಕರಾದ ಬೀನಂಡ ಎಸ್.ಪೂಣಚ್ಚ, ಪ್ರಗತಿ ಶಾಲೆಯ ಸ್ಥಾಪಕ ಮಾದಂಡ ಎಸ್.ಪೂವಯ್ಯ, ಪಾಲೇಂಗಡ ಅಮಿತ್ ಭೀಮಯ್ಯ, ಚೇಂದAಡ ವಸಂತ, ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರಾದ ಪುತ್ತರಿರ ಪಪ್ಪು ತಿಮ್ಮಯ್ಯ, ಪೊನ್ನಿರ ಯು.ಗಗನ್, ಕುಡಿಯರ ಕಾವೇರಪ್ಪ, ನಾಯಂದಿರ ಆರ್.ಶಿವಾಜಿ, ಚೆಪ್ಪುಡಿರ ಎಸ್.ಉತ್ತಪ್ಪ, ನಾಪಂಡ ಗಣೇಶ್ ಉಪಸ್ಥಿತರಿದ್ದರು. ಮೊಳ್ಳೆಕುಟ್ಟಡ ದಿನು ಬೋಜಪ್ಪ, ಚೊಟ್ಟೆಯಂಡ ಎ. ಸಂಜು ಕಾವೇರಪ್ಪ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದರು.
ಆರಂಭದಲ್ಲಿ ಮೇಚಂಡ ಅಚ್ಚಪ್ಪ ತಂಡದವರು ಶಾಸಕರು, ಅಕಾಡೆಮಿ ಅಧ್ಯಕ್ಷರು, ಮುಖ್ಯ ಅತಿಥಿಗಳು ಹಾಗೂ ನೆರೆದಿದ್ದ ಸಾಹಿತ್ಯಾಭಿಮಾನಿಗಳನ್ನು ಶಾಸಕರ ಮನೆಯಿಂದ ದುಡಿಕೊಟ್ಟ್ ಪಾಟ್, ತಳಿಯತಕ್ಕಿ ಬೊಳಕಿನ ಮೂಲಕ ವೇದಿಕೆಗೆ ಕರೆತಂದರು.
ವೀರಾಜಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟದಿಂದ ಸ್ವಾಗತ ನೃತ್ಯ, ಉಮ್ಮತಾಟ್ ಪ್ರದರ್ಶನ ನಡೆಯಿತು. ಸದಸ್ಯೆ ಉದ್ದಪಂಡ ವಿಮಲ ಮಂದಣ್ಣ ಪ್ರಾರ್ಥಿಸಿ, ಅಕಾಡೆಮಿ ಸದಸ್ಯ ನಾಪಂಡ ಸಿ.ಗಣೇಶ್ ಸ್ವಾಗತಿಸಿ, ಸದಸ್ಯರಾದ ಕಂಬೆಯAಡ ಡೀನ ಬೋಜಣ್ಣ, ಪುತ್ತರಿರ ಪಪ್ಪು ತಿಮ್ಮಯ್ಯ ನಿರೂಪಿಸಿ ಅಕಾಡೆಮಿ ಸದಸ್ಯರಾದ ಕೊಂಡಿಜಮ್ಮನ ಎಂ. ಬಾಲಕೃಷ್ಣ ವಂದಿಸಿದರು.