ಮಡಿಕೇರಿ,ಫೆ.೭: ಜಿಲ್ಲಾಡಳಿತ, ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ, ದಿಶಾ ಬೋದ್ ಫೌಂಡೇಶನ್, ವಿವಿಧ ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳ ಸಹಯೋಗದೊಂದಿಗೆ ನಡೆದ ನಶಾ ಮುಕ್ತ ಭಾರತ ಜಾಗೃತಿ ಅಭಿಯಾನದ ಅಂಗವಾಗಿ ಏರ್ಪಡಿಸಲಾಗಿದ್ದ ವಾಕಥಾನ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಸಹಸ್ರಾರು ಮಂದಿ ಭಾಗವಹಿಸಿ ಯಶಗೊಳಿಸಿದರು.
ಗಾಂಧಿ ಮೈದಾನದಲ್ಲಿ ಸಮಾವೇಶಗೊಂಡು ಪ್ರತಿಜ್ಞಾವಿಧಿ ಸ್ವೀಕಾರದ ಬಳಿಕ ಕಾಲ್ನಡಿಗೆ ಮೂಲಕ ಮುಖ್ಯ ರಸ್ತೆಯಲ್ಲಿ ಸಾಗಿ ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಸಂಪನ್ನಗೊAಡಿತು. ಮೈದಾನದಲ್ಲಿ ಭಾಗವಹಿಸಿದವರೆಲ್ಲರಿಗೂ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಹಳೆ ಖಾಸಗಿ ಬಸ್ ನಿಲ್ದಾಣ ಹಾಗೂ ಕ್ರೀಡಾಂಗಣದಲ್ಲಿ ಬೀದಿ ನಾಟಕ ಪ್ರದರ್ಶನ ಮೂಲಕ ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳು ಹಾಗೂ ಅಂಗಾAಗ ದಾನದ ಮಹತ್ವದ ಕುರಿತು ಅರಿವು ಮೂಡಿಸಲಾಯಿತು.
ಗಾಂಧಿ ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಸಿ. ಭಗವಾನ್ ಇನ್ನು ಮುಂದೆ ಮಾದಕ ವಸ್ತು ಮುಕ್ತ ಕ್ಯಾಂಪಸ್ ಎಂದು ಘೋಷಣೆ ಮಾಡಿಕೊಂಡ ಕಾಲೇಜುಗಳಿಗೆ ಮಾತ್ರವೇ ಮಾನ್ಯತೆ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಲಕ್ಷಾಂತರ ಮಂದಿ ಅಂಗಾAಗಗಳಿಗಾಗಿ ಕಾಯುತ್ತಿದ್ದಾರೆ. ಆದರೆ, ಅಂಗಾAಗ ದಾನ ಮಾಡುವವರ ಸಂಖ್ಯೆ ತೀರಾ ಕಡಿಮೆ ಇದೆ. ಅರಿವಿನ ಕೊರತೆಯಿಂದ ಅಮೂಲ್ಯ ಅಂಗಾAಗಗಳು ಮಣ್ಣು ಪಾಲಾಗುತ್ತಿವೆ. ಹಾಗಾಗಿ, ಈ ಕುರಿತು ಜಾಗೃತಿ ಮೂಡಿಸಲೂ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರತಿ ವಿದ್ಯಾರ್ಥಿಗಳನ್ನೂ ಉಪನ್ಯಾಸಕರು ಈ ಮಾದಕ ದ್ರವ್ಯದಿಂದ ರಕ್ಷಿಸಿ, ತಮ್ಮ ಕ್ಯಾಂಪಸ್ ಅನ್ನು ಮಾದಕ ವಸ್ತು ಮುಕ್ತ ಕ್ಯಾಂಪಸ್ ಎಂದು ಘೋಷಣೆ ಮಾಡಿಕೊಳ್ಳಬೇಕು. ಈ ರೀತಿ ಮಾಡಿದ ಕಾಲೇಜುಗಳಿಗೆ ಮಾತ್ರವೇ ನಾವು ಮಾನ್ಯತೆ ನೀಡುತ್ತೇವೆ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕು, ದೇಶದಲ್ಲಿ ಶೇ.೩೦ರಿಂದ ೪೦ ರಷ್ಟು ವಿದ್ಯಾರ್ಥಿಗಳು ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗಿ ತಮ್ಮ ಜೀವನವನ್ನೇ ಸಂಪೂರ್ಣ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದಕ್ಕಾಗಿಯೇ ಈ ಅಭಿಯಾನ ಕೈಗೊಳ್ಳಲಾಗಿದೆ.
ವಿದ್ಯಾರ್ಥಿಗಳೂ ಸಹ ಇನ್ನು ಮುಂದೆ ಎಚ್ಚರಿಕೆಯಿಂದಿರಬೇಕು. ಎಲ್ಲಾ ವಿದ್ಯಾರ್ಥಿಗಳನ್ನೂ ಪರೀಕ್ಷಿಸುತ್ತೇವೆ. ಮದ್ಯ ಮತ್ತು ಮಾದಕ ವಸ್ತುಗಳ ಸೇವನೆಯಿಂದ ದೂರ ಇರಬೇಕು ಎಂದು ಕಿವಿಮಾತು ಹೇಳಿದರು.
೧೫೦೦ ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜು ಹಾಗೂ ಇತರ ಸಂಸ್ಥೆಗಳು ಈ ವಿವಿ ವ್ಯಾಪ್ತಿಯಲ್ಲಿದ್ದು, ದೇಶಕ್ಕೆ ಮಾದರಿ ವಿವಿ ಎನಿಸಿದೆ. ಮಾತ್ರವಲ್ಲ, ಪ್ರಪಂಚದಲ್ಲಿಯೆ ಹೆಸರುವಾಸಿಯಾಗಿದೆ. ಇಂತಹ ವಿಶ್ವವಿದ್ಯಾಲಯ ಈಗ ನಶಾ ಮುಕ್ತ ಕ್ಯಾಂಪಸ್ ಆಗುವತ್ತ ದೃಢವಾದ ಹೆಜ್ಜೆ ಇರಿಸಿದೆ. ಈಗ ಚಟ ಎಂಬುದು ಯುವ ಸಮುದಾಯವನ್ನು ಕಾಡುತ್ತಿದೆ. ಶೇ ೩೦-೪೦ರಷ್ಟು ವಿದ್ಯಾರ್ಥಿಗಳು ಚಟಕ್ಕೆ ಒಳಗಾಗಿ ಅಧ್ಯಯನದಲ್ಲಿ ಹಿಂದೆ ಉಳಿಯುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಇದರ ದುಷ್ಪರಿಣಾಮಗಳ ಅರಿವು ಬರಬೇಕು; ೪ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಅದಕ್ಕಾಗಿ ವಿವಿ ವ್ಯಾಪ್ತಿಯ ಪ್ರತಿ ಕಾಲೇಜಿನಲ್ಲಿ ನಶಾ ಮುಕ್ತ ಕ್ಯಾಂಪಸ್ ರಚಿಸುತ್ತಿದೆ. ಇದಕ್ಕಾಗಿ ಒಂದು ಕಾರ್ಯಪಡೆ ರಚಿಸುತ್ತಿದೆ ಎಂದರು.
‘ಡಿಜಿಟಲ್ ಅಡಿಕ್ಷನ್’ ಎಂಬುದು ಈಗ ಹೊಸ ಬಗೆಯ ಚಟವಾಗಿ ಪರಿಣಮಿಸಿದೆ. ಮಕ್ಕಳು ಮತ್ತು ಮಹಿಳೆಯರು ಹೆಚ್ಚು ಒಳಗಾಗಿದ್ದಾರೆ. ಅನೇಕ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ತಂತ್ರಜ್ಞಾನವನ್ನು ಜ್ಞಾನದ ಗಳಿಕೆಗಾಗಿ ಮಾತ್ರ ಬಳಸಬೇಕು. ಈ ಕುರಿತು ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾ ವಹಿಸಬೇಕು.
ಜಂಕ್‌ಫುಡ್ ಸಹ ಚಟವಾಗಿದೆ. ಮಹಿಳೆಯರು ವಿಶೇಷವಾಗಿ ಇದಕ್ಕೆ ಬಲಿಯಾಗುತ್ತಿದ್ದಾರೆ. ಇದರಿಂದಲೂ ಅನೇಕ ಕಾಯಿಲೆಗಳು ಬರುತ್ತಿವೆ ಎಂದು ಎಚ್ಚರಿಕೆ ನೀಡಿದರು.
ಯೋಗಾಭ್ಯಾಸ ಧ್ಯಾನ ಪ್ರತಿ ಕ್ಯಾಂಪಸ್‌ನಲ್ಲೂ ಮಾಡುವಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕೆ ಎಲ್ಲಾ ಉಪನ್ಯಾಸಕರೂ ವಿವಿ ಜೊತೆಗೆ ಕೈಜೋಡಿಸಬೇಕು ಎಂದು ಹೇಳಿದರು.
ಅಂಗಾAಗ ದಾನ ಶ್ರೇಷ್ಠ ದಾನ. ಆದರೆ, ದಾನ ಮಾಡುವವರ ಸಂಖ್ಯೆ ಕಡಿಮೆ ಇದೆ. ಈಗ ನೋಂದಣಿ ಮಾಡಿದರೆ ಮೆದುಳು ನಿಷ್ಕಿçಯಗೊಂಡಾಗ ಮಾತ್ರ ಅಂಗಾAಗ ತೆಗೆದುಕೊಳ್ಳಲಾಗುತ್ತದೆ. ದೇಶದಲ್ಲಿ ೨-೩ ಲಕ್ಷ ಜನ ಅಂಗಾAಗಗಳಿಗಾಗಿ ಕಾಯುತ್ತಿದ್ದಾರೆ. ಆದರೆ, ಕೇವಲ ೧೬-೧೭ ಸಾವಿರ ಜನ ಮಾತ್ರ ಅಂಗಾAಗ ದಾನ ನೀಡುತ್ತಿದ್ದಾರೆ. ಈ ಸಂಖ್ಯೆ ಹೆಚ್ಚಬೇಕಿದೆ ಎಂದು ಹೇಳಿದರು. ಅಂಗಾAಗ ದಾನ ಮತ್ತು ಮಾದಕವಸ್ತು ವಿರುದ್ಧ ಪ್ರತಿಜ್ಞಾ ವಿಧಿಯನ್ನು ಅವರು ವಿದ್ಯಾರ್ಥಿಗಳಿಗೆ ಬೋಧಿಸಿದರು.
ಶಾಸಕ ಡಾ.ಮಂತರ್‌ಗೌಡ ಅವರು ಮಾತನಾಡಿ, ‘ಮಾದಕ ವಸ್ತುಗಳು ಕೇವಲ ವ್ಯಕ್ತಿಯನ್ನು ಮಾತ್ರ ಅಲ್ಲ, ಇಡೀ ಸಮಾಜವನ್ನೇ ಹಾಳು ಮಾಡುತ್ತದೆ. ನಮ್ಮಲ್ಲಿ ಉತ್ತಮವಾದ ಮಾನಸಿಕ ಅರೋಗ್ಯ ವಿಭಾಗ ಇದೆ. ಚಟದಿಂದ ಮುಕ್ತರಾಗಲು ಬಯಸುವವರು ಈ ವಿಭಾಗವನ್ನು ಸಂಪರ್ಕಿಸಬಹುದು’ ಎಂದು ಹೇಳಿದರು.
ಪದವಿಗಳಿಗಿಂತ ಮೌಲ್ಯ ಮುಖ್ಯ. ಉತ್ತಮ ಮೌಲ್ಯಯುತ ಬದುಕನ್ನು ಎಲ್ಲರೂ ನಡೆಸಬೇಕು. ಮಾದಕ ವಸ್ತುಗಳು ಕೇವಲ ವ್ಯಕ್ತಿಯನ್ನು ಮಾತ್ರ ಅಲ್ಲ ಇಡೀ ಸಮಾಜವನ್ನೇ ಹಾಳು ಮಾಡುತ್ತದೆ. ಚಟ ಬಿಡಿಸಲು ನಮ್ಮ ಆಸ್ಪತ್ರೆಯಲ್ಲಿ ಉತ್ತಮ ಮಾನಸಿಕ ಅರೋಗ್ಯ ವಿಭಾಗ ಇದೆ.
ಮಾದಕ ವಸ್ತುಗಳ ಕುರಿತು ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿಸಬೇಕು ಎಂದು ಅವರು ಇದೇ ವೇಳೆ ಮನವಿ ಮಾಡಿದರು. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ಇನ್ಸ್ಪೆಕ್ಟರ್ ವೃಷಬ್ ಮಿಶ್ರಾ ಮಾತನಾಡಿ, ‘ಮಾದಕವಸ್ತು ವ್ಯಸನ ಕುರಿತು ಸಹಾಯವಾಣಿ ೧೯೩೩ ನ್ನು ಸಂಪರ್ಕಿಸಬಹುದು ಎಂದರು. ನಟಿ ತೇಜಸ್ವಿನಿ ರಮಾ ಸೇರಿದಂತೆ ನಗರದ ವಿವಿಧ ಶಾಲಾ, ಕಾಲೇಜುಗಳ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಭಾಗವಹಿಸಿದ್ದು, ಜಾಥಾದಲ್ಲಿ ಪಾಲ್ಗೊಂಡಿದ್ದರು.
ನಗರಸಭೆ ಅಧ್ಯಕ್ಷ ಪಿ.ಕಲಾವತಿ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಿ.ವೈ. ರಾಜೇಶ್, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ.ಎ.ಜೆ. ಲೋಕೇಶ್, ಡಾ. ಮೋಹನ್ ಅಪ್ಪಾಜಿ, ಜಿಲ್ಲಾ ಶಸ್ತçಚಿಕಿತ್ಸಕ ಡಾ.ನಂಜುAಡಯ್ಯ, ಡಾ.ವಿಶಾಲ್ ಕುಮಾರ್, ಡಾ. ಸೋಮಶೇಖರ್, ಡಾ. ಧನಂಜಯ್, ಡಾ. ಸುಮುಖ್, ದಿಶಾಭೋದ್ ಫೌಂಡೇಷನ್‌ನ ಸಲಹೆಗಾರ ಅಜಯ ಪುರುಷೋತ್ತಮ್ ಶೆಟ್ಟಿ, ರೋಟರಿ ಮಿಸ್ಟಿ ಹಿಲ್ಸ್, ರೋಟರಿ ವುಡ್ಸ್, ಲಯನ್ಸ್, ಇನ್ನರ್ ವಿಲ್, ಮಡಿಕೇರಿ ಚೇಂಬರ್ ಆಫ್ ಕಾಮರ್ಸ್, ರೆಡ್ ಕ್ರಾಸ್, ಕೊಡಗು ಪತ್ರಕರ್ತರ ಸಂಘ, ಕೊಡಗು ಹೊಟೇಲ್ ರೆಸಾರ್ಟ್ ಅಸೋಸಿಯೇಷನ್, ನೀಮಾ ಸಂಘ, ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ ಮತ್ತು ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳು ಇತರರು ಭಾಗವಹಿಸಿದ್ದರು.