ಕಣಿವೆ, ಫೆ. ೭: ಕುಶಾಲನಗರ ತಾಲೂಕಿನ ಸಿದ್ದಲಿಂಗಪುರ ಬಳಿಯ ಅರಸಿನಗುಪ್ಪೆ ಗ್ರಾಮದಲ್ಲಿ ಇರುವ ಶ್ರೀ ಮಂಜುನಾಥ ಸ್ವಾಮಿ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಜಾತ್ರೋತ್ಸವದ ಅಂಗವಾಗಿ ತಾ. ೧೫ ಹಾಗೂ ೧೬ ರಂದು ಶ್ರೀ ಸ್ವಾಮಿಗೆ ೧,೧೦೮ ಎಳನೀರು ಅಭಿಷೇಕ ನಡೆಯಲಿದೆ.

ಇದರ ಅಂಗವಾಗಿ ಸನ್ನಿಧಿಯಲ್ಲಿ ಮಹಾಗಣಪತಿ ಹೋಮ, ಅಷ್ಟಯಾಮ ಪೂಜೆ, ರುದ್ರ ಹೋಮ, ತೀರ್ಥಸ್ನಾನ, ಅನ್ನಪ್ರಸಾದ ವಿತರಣೆ ನಡೆಯಲಿದೆ. ತಾ.೧೫ ರಂದು ಭಾನುವಾರ ಮುಂಜಾನೆ ೫ ಗಂಟೆಗೆ ಗಣಪತಿಹೋಮ ಜರುಗಲಿದೆ. ತಾ೧೬ ರಂದು ಸೋಮವಾರ ಬೆಳಿಗ್ಗೆ ೭ ಗಂಟೆಗೆ ರುದ್ರ ಹೋಮ ಆರಂಭವಾಗಲಿದ್ದು, ಬೆಳಿಗ್ಗೆ ೮.೩೦ ಗಂಟೆಗೆ ಪೂರ್ಣಾಹುತಿ, ೯.೩೦ಕ್ಕೆ ಕಲಶಾಭಿಷೇಕ ಮತ್ತು ಮಹಾ ಮಂಗಳಾರತಿ, ೧೦ ಗಂಟೆಗೆ ತೀರ್ಥಸ್ನಾನ ಹಾಗೂ ದೇವರ ಪ್ರಸಾದ ವಿತರಣೆ ನಡೆಯಲಿದೆ.

ಪೂರ್ವಾಹ್ನ ೧೧ ರಿಂದ ೧೨ ಗಂಟೆಯವರೆಗೆ ಮಂಜುನಾಥ ಸ್ವಾಮಿ ಮತ್ತು ಪರಿವಾರ ದೇವರು ಗಳಿಗೆ ಮಹಾ ನೈವೇದ್ಯ ಮತ್ತು ಮಹಾ ಪೂಜೆ ನಡೆಯಲಿದ್ದು, ಭಕ್ತಾದಿಗಳಿಗೆ ಅನ್ನಪ್ರಸಾದ ನೆರವೇರಲಿದೆ ಎಂದು ಶ್ರೀ ಮಂಜುನಾಥ ಸ್ವಾಮಿ ಕ್ಷೇತ್ರದ ಗುರುಗಳಾದ ರಾಜೇಶನಾಥ ಗುರೂಜಿ ಹಾಗೂ ಮಂಜುನಾಥ ಸ್ವಾಮಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ನಾಪಂಡ ಮುತ್ತಪ್ಪ ತಿಳಿಸಿದ್ದಾರೆ.