ಸಿದ್ದಾಪುರ, ಫೆ. ೭: ಐಪಿಎಲ್ ಮಾದರಿ ಆಯೋಜಿಸಲಾಗಿರುವ ಕ್ರಿಶ್ಚಿಯನ್ ಪ್ರೀಮಿಯರ್ ಲೀಗ್ (ಸಿ.ಪಿ.ಎಲ್) ಆವೃತ್ತಿ-೧ರ ಅಧಿಕೃತ ಲೋಗೋ ಅನಾವರಣ ಕಾರ್ಯಕ್ರಮ ನೆಲ್ಲಿಹುದಿಕೇರಿ ಗ್ರಾಮದ ಕೋಫಿಯಾ ಹೊಟೇಲ್ ಸಭಾಂಗಣದಲ್ಲಿ ನಡೆಯಿತು.

ಏಪ್ರಿಲ್ ೧೦ ರಿಂದ ೧೨ ರವರೆಗೆ ಸಿದ್ದಾಪುರ ಪ್ರೌಢಶಾಲಾ ಮೈದಾನದಲ್ಲಿ ಪಂದ್ಯಾಟ ನಡೆಯಲಿದ್ದು, ಕೊಡಗು ರೋಮನ್ ಕ್ಯಾಥೊಲಿಕ್ ಕ್ರಿಶ್ಚಿಯನ್ ಯುವಕರಿಗೆ ಕ್ರೀಡಾ ವೇದಿಕೆಯನ್ನು ಒದಗಿಸುವ ನಿಟ್ಟಿನಲ್ಲಿ ಈ ಕ್ರೀಡಾ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.

ಲೋಗೋ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಪಂದ್ಯಾಟದ ಪ್ರಾಯೋಜಕರಾಗಿರುವ ಸಿಜೆ ಬಿಲ್ಡ್ ವೇರ್‌ನ ವ್ಯವಸ್ಥಾಪಕ ಪ್ರಿನ್ಸ್, ಸಂಸ್ಥೆಯು ಸದಾ ಕ್ರೀಡೆ ಶಿಸ್ತು ಮತ್ತು ಸೌಹಾರ್ದತೆಯನ್ನು ಉತ್ತೇಜಿಸುವ ಕಾರ್ಯದಲ್ಲಿ ತೊಡಿಸಿಕೊಂಡಿದೆ ಎಂದರು. ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸಿಪಿಎಲ್‌ಗೆ ಬೆಂಬಲ ನೀಡಿದೆ ಎಂದು ತಿಳಿಸಿದರು. ಕ್ರೀಡಾಕೂಟದ ಮೂಲಕ ಸÀಮುದಾಯದಲ್ಲಿ ಸ್ನೇಹ ಭಾವ, ಒಗ್ಗಟ್ಟು ಹೆಚ್ಚುತ್ತದೆ ಎಂದರು.

ಕಾರ್ಯಕ್ರಮದಲ್ಲಿ ವೀರಾಜಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಜಾನ್ಸನ್, ಜಿಲ್ಲಾ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಜಿಲ್ಲಾ ಆಯುಕ್ತ ಜಿಮ್ಮಿ ಸಿಕ್ವೇರಾ, ಪ್ರಮುಖರಾದ ಟಾಮಿ ಥಾಮಸ್, ಬಿಜೊ ಹಾಗೂ ಸಂತ ಜೋಸೆಫ್ ಸೇವಾ ಸಂಘದ ಪದಾಧಿಕಾರಿಗಳಾದ ಜೋಷಿ, ಪ್ರಮುಖರಾದ ವಿಜೇಶ್, ಜಾನ್ಸನ್ ಟಿ.ಪಿ., ಶಾಜಿ, ವಿನ್ಸಿ, ಜಾನಿ, ರೀಗಲ್ ಹಾಗೂ ಇನ್ನಿತರರು ಹಾಜರಿದ್ದರು.