ಮಡಿಕೇರಿ, ಫೆ. ೭: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕುಟ್ಟ ಗ್ರಾಮದ ಉದ್ಯಮಿಯೊಬ್ಬರು ಕೇರಳದ ವಯನಾಡು ಜಿಲ್ಲೆಯ ಮಾನಂದವಾಡಿಯಲ್ಲಿ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳಲು ಬೆಂಕಿ ಹಚ್ಚಿಕೊಂಡ ಘಟನೆ ನಡೆದಿದ್ದು, ಉದ್ಯಮಿ ಸಾವನ್ನಪ್ಪಿ, ಪತ್ನಿ ಗಂಭೀರ ಗಾಯಗೊಂಡಿದ್ದು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

ಕುಟ್ಟ ಗ್ರಾಮದ ನಿವಾಸಿ, ಉದ್ಯಮಿ ಸಜೀರ್ ಮೃತಪಟ್ಟವರಾಗಿದ್ದಾರೆ. ಇವರ ಪತ್ನಿಗೆ ಗಂಭೀರ ಗಾಯವಾಗಿದ್ದು, ಕ್ಯಾಲಿಕಟ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದ ಮೂವರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

ಉದ್ಯಮಿ ಸಜೀರ್, ಬಾಪು ಎಂಬವರುಗಳು ಕುಟ್ಟದಲ್ಲಿ ಬಿಸಿನೆಸ್ ಪಾಟ್ನರ್‌ಗಳಾಗಿದ್ದು, ಬಾಪು ಸಜೀರ್‌ಗೆ ರೂ. ೧.೨೦ ಕೋಟಿ ಸಾಲ ನೀಡಬೇಕಿತ್ತು ಎನ್ನಲಾಗಿದೆ. ಸಾಲ ಪಡೆದಿದ್ದ ಬಾಪುನ ಮನೆಗೆ ಕಾರಿನಲ್ಲಿ ಕುಟುಂಬದೊAದಿಗೆ ತೆರಳಿದ ಸಜೀರ್ ಸಾಲದ ಹಣ ವಾಪಸ್ ಸಿಗದ ಕಾರಣ ಬಾಪುವಿನ ಮನೆ ಎದುರಲ್ಲೇ ಕಾರಿನೊಳಗೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಪರಿಣಾಮ ಸಜೀರ್ ಸಾವನ್ನಪ್ಪಿದ್ದು, ಪತ್ನಿ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದಾರೆ. ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಕಾರಿನಲ್ಲೇ ಕುಳಿತು ಉದ್ಯಮಿ ಸಜೀರ್ ವೀಡಿಯೋ ರೆಕಾರ್ಡ್ ಮಾಡಿದ್ದು, ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಬಾಪು ಕಾರಣ ಎಂದು ಹೇಳಿದ್ದಾರೆ.ಮಾನಂದವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.