ವೀರಾಜಪೇಟೆ, ಫೆ. ೭: ಬೇಟೋಳಿ ಗ್ರಾಮ ಪಂಚಾಯಿತಿ ಅನುದಾನ ರೂ. ೯ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಆಡಳಿತ ಮಂಡಳಿಯ ಕಾರ್ಯಾಲಯದ ನೂತನ ಸಭಾಂಗಣವನ್ನು ಪಂಚಾಯಿತಿ ಅಧ್ಯಕ್ಷ ಅಚ್ಚಪಂಡ ಎಂ. ಬೋಪಣ್ಣ ಉದ್ಘಾಟಿಸಿದರು.
ಈ ಸಂದರ್ಭ ಪಂಚಾಯಿತಿಗೆ ದಾನವಾಗಿ ಜಾಗ ನೀಡಿದ್ದ ಪಟ್ಟಡ ಬಿ. ಚಂಗಪ್ಪ ಕುಟುಂಬದವರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ. ಮಣಿ, ಉಪಾಧ್ಯಕ್ಷೆ ಕೆ.ಹೆಚ್. ಅಲೀಮ, ಸದಸ್ಯರಾದ ಅಮ್ಮಣಕುಟ್ಟಂಡ ಎ. ವಸಂತ ಕಟ್ಟಿ, ಪಟ್ರಪಂಡ ಬಿ. ಚಂಗಪ್ಪ, ಎಂ.ಎA. ರಜಾಕ್, ಬಿ.ಜೆ. ಯಶೋದ, ಎಂ.ಎA. ರಂಜಿತ್, ಸಿ.ಎಸ್. ಸುದೀಶ್, ಪಿ.ಕೆ. ಗೀತಾ, ಪಿ.ಎಂ. ಲಕ್ಷಿö್ಮÃ, ವೈ.ಎಂ. ಶಾಂತಿ, ಕೆ.ಆರ್. ಲತಾ, ಪಂಚಾಯಿತಿ ಕರವಸೂಲಿಗಾರ ಬಿ.ಎಸ್. ದಿನೇಶ್, ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಆಯಿಷ ಹಾಗೂ ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.