ಮಡಿಕೇರಿ ಫೆ. ೬: ಮಡಿಕೇರಿಯ ಕಾವೇರಿ ಲೇಔಟ್‌ನಲ್ಲಿರುವ ಜಿಲ್ಲಾ ನೆಹರು ಯುವಕ ಕೇಂದ್ರ ಕಚೇರಿ ಮುಚ್ಚಲ್ಪಟ್ಟಿದೆ. ಇದೀಗ ಕಟ್ಟಡ ಅನಾಥವಾಗಿದ್ದು ಕೇವಲ ಹೊರಗಡೆ ನಾಮಫಲಕ ಮಾತ್ರ ರಾರಾಜಿಸುತ್ತ್ತಿದೆ. ‘‘ಮೈ ಭಾರತ್ ಕೇಂದ್ರ, ಜಿಲ್ಲಾ ಯುವ ಅಧಿಕಾರಿಗಳ ಕಾರ್ಯಾಲಯ/ ಕೊಡಗು/ ಮಡಿಕೇರಿ” ಎನ್ನುವ ಫಲಕವನ್ನು ನೋಡಿ ಯಾರೂ ಒಳಹೋಗಲು ಪ್ರಯತ್ನಿಸದಿರಿ. ಏಕೆಂದರೆ ಒಳಗಿನಿಂದ ಹಾವು ಅಥವಾ ಇನ್ನಿತರ ಪ್ರಾಣಿಗಳು ಹೊರ ಬಂದಾವು? ಸದ್ಯಕ್ಕೆ ಒಳ ಹೋಗುವುದೂ ಕಷ್ಟ ಸಾಧ್ಯವೇ ಆಗಿದೆ. ಏಕೆಂದರೆ ಗೇಟಿಗೂ ಬೀಗ ಜಡಿಯಲಾಗಿದೆ. ಕಳೆದ ಎರಡು ತಿಂಗಳಿನಿAದ ಈ ಕೇಂದ್ರ ಮಕಾಡೆ ಮಲಗಿದೆ. ಕಾರ್ಯ ನಿಮಿತ್ತ ಇಲ್ಲಿಗೆ ಬರುವ ಯುವಕರಿಗೆ ಹೊರಗಡೆ ಏನಾದರೂ ಸೂಚನೆ ದೊರಕೀತೇ ಎಂದರೆ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಯಾವದೇ ಮಾರ್ಗದರ್ಶನ ಕಂಡು ಬರುತ್ತಿಲ್ಲ.

ಏಕೆ ಹೀಗೆ? ಎಂದು ಇದೀಗ ಮಂಗಳೂರಿನಲ್ಲಿ ಅಧಿಕಾರಿಯಾಗಿದ್ದು ಸದ್ಯಕ್ಕೆ ಈ ಕೇಂದ್ರದ ಜವಾಬ್ದಾರಿಕೆಯನ್ನು ಹೊತ್ತಿರುವ ಉಲ್ಲಾಸ್ ಅವರನ್ನು “ಶಕ್ತಿ” ಮೊಬೈಲ್ ಮೂಲಕ ಸಂಪರ್ಕಿಸಿತು. ಈ ಕೇಂದ್ರದಲ್ಲಿ ಕೆಲಸ ಮಾಡಲು ಸಿಬ್ಬಂದಿಯಿಲ್ಲದುದರಿAದ ಹೀಗಾಗಿದೆ ಎನ್ನುವ ಮಾಹಿತಿ ದೊರಕಿತು. ಲಕ್ಷಾಂತರ ಮಂದಿ ನಿರುದ್ಯೋಗಿಗಳಿರುವಾಗ ಸರಕಾರಕ್ಕೆ ಇಲ್ಲಿ ಕೆಲಸ ಮಾಡಲು ಓರ್ವ ಸಿಬ್ಬಂದಿಯೂ ದೊರಕಲಿಲ್ಲವೇ? ಎನ್ನುವ ಸಂಶಯ ಸಹಜವಾದುದು. ಆದರೆ, ಸರಕಾರಕ್ಕೆ ಅಲ್ಲಿ ಸಿಬ್ಬಂದಿಯೇ ಬೇಡ ಎಂದೆನಿಸಿದ ಕೂಡಲೇ ಆ ಹುದ್ದೆಯನ್ನೇ ಹಿಂಪಡೆÀಯಲಾಗಿದೆಯAತೆ. ಕಚೇರಿ ಕಟ್ಟಡ ಮಾತ್ರ ತನ್ನಲ್ಲಿಗೆ ಯಾರಾದರೂ ಬಂದಾರು ಎಂದು ಮೌನವಾಗಿ ಕಾಯುತ್ತಿದೆಯಷ್ಟೆ! ಅಂದರೆ, ಸಿಬ್ಬಂದಿಗೆ ವೇತನ ಕೊಡುವುದೇಕೆ? ಯುವಕರಿಗಾಗಿಯೆ ಇರುವ ಈ ಕೇಂದ್ರ ಮುಚ್ಚಿದರೆ ನಮಗೇನು ನಷ್ಟ ಎಂಬ ಭಾವನೆ, ಧೋರಣೆ ಸರಕಾರದ್ದು! ಈ ಯೋಜನೆಗೆ ಸರಕಾರ ಬಿಡುಗಡೆ ಮಾಡುವ ಹಣವೂ ವ್ಯರ್ಥವಾಗಲಿದೆ! ಕೊಡಗಿನಲ್ಲಿ ಯುವ ಜನಾಂಗದ ಏಳಿಗೆಗೆ ನಡೆಯುತ್ತಿದ್ದ ಸರಕಾರೀ ಕಾರ್ಯಕ್ರಮಗಳೂ ಕೊನೆಗೊಳ್ಳಲಿವೆ.

- ಚಿತ್ರ ವರದಿ: ಟಿ.ಜಿ. ಸತೀಶ್