ಗೋಣಿಕೊಪ್ಪಲು, ಫೆ. ೬: ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಮೃತಪಟ್ಟ ಘಟನೆ ಗೋಣಿಕೊಪ್ಪಲುವಿನಲ್ಲಿ ಮಧ್ಯರಾತ್ರಿ ಸಂಭವಿಸಿದೆ. ಗೋಣಿಕೊಪ್ಪಲುವಿನ ಕೈಕೇರಿ ಗ್ರಾಮದ ಈರಣ್ಣ ಕಾಲೋನಿ ನಿವಾಸಿ ಸುಲೈಮಾನ್ (೩೨) ಹಾಗೂ ಚೆನ್ನಂಗೊಲ್ಲಿ ಗ್ರಾಮದ ಪೌಲೋಸ್ (೨೮) ಮೃತ ದುರ್ದೈವಿಗಳಾಗಿದ್ದಾರೆ.
ಸುಲೈಮಾನ್ ಹಾಗೂ ಪೌಲೋಸ್ ಇಬ್ಬರು ಸ್ನೇಹಿತರು ದೈನಂದಿನ ಕಾರ್ಯವನ್ನು ಮುಗಿಸಿ ಈರಣ್ಣ ಕಾಲೋನಿ ನಿವಾಸಿ ಸುಲೈಮಾನ್ನನ್ನು ಆತನ ಮನೆಗೆ ತನ್ನ ಬೈಕಿನಲ್ಲಿ ಬಿಡಲು ಮಧ್ಯರಾತ್ರಿ ೧೨.೧೫ ಗಂಟೆ ಸುಮಾರಿಗೆ ಗೋಣಿಕೊಪ್ಪದಿಂದ ಕೈಕೇರಿ ಮಾರ್ಗವಾಗಿ ತೆರಳುತ್ತಿದ್ದರು. ಈ ವೇಳೆ ನಗರದ ಉಮಾಮಹೇಶ್ವರಿ ದೇವಾಲಯದ ರಸ್ತೆಯ ಇಳಿಜಾರಿನಲ್ಲಿ ಕೇರಳ ರಾಜ್ಯದಿಂದ ಗೋಣಿಕೊಪ್ಪ ಮಾರ್ಗವಾಗಿ ಮೈಸೂರು, ಬೆಂಗಳೂರಿಗೆ ತೆರಳುತ್ತಿದ್ದ ಕೇರಳ ಬಸ್ಸಿಗೆ ಬೈಕ್ ಡಿಕ್ಕಿಯಾಗಿದೆ.
ರಸ್ತೆ ಅಪಘಾತವನ್ನು ತಪ್ಪಿಸುವ ಪ್ರಯತ್ನದಲ್ಲಿ ಬಸ್ನ ಚಾಲಕ ಸಮೀಪದ ವಿದ್ಯುತ್ ಕಂಬಕ್ಕೆ ಬಸ್ಸನ್ನು ಡಿಕ್ಕಿಪಡಿಸಿ ಅಪಘಾತವನ್ನು ತಪ್ಪಿಸುವ ಪ್ರಯತ್ನ ಮಾಡಿದ್ದಾನೆ. ಇದರಿಂದ ವಿದ್ಯುತ್ ಕಂಬವು ಸಂಪೂರ್ಣ ಜಖಂಗೊAಡು ತಕ್ಷಣವೇ ವಿದ್ಯುತ್ ಕಡಿತಗೊಂಡಿದೆ. ಇದರಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರು ದೊಡ್ದ ಅನಾಹುತದಿಂದ ಪಾರಾಗಿದ್ದಾರೆ.
ಬೈಕ್ನಲ್ಲಿ ಸವಾರಿ ಮಾಡುತ್ತಿದ್ದ ಇಬ್ಬರು ಅಪಘಾತದ ರಭಸಕ್ಕೆ ರಸ್ತೆಯ ಮಧ್ಯದಲ್ಲಿ ಉರುಳಿ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ತಲೆಯ ಭಾಗಕ್ಕೆ ಮಾರಣಾಂತಿಕ ಪೆಟ್ಟುಬಿದ್ದ ಹಿನ್ನೆಲೆಯಲ್ಲಿ ತೀವ್ರ ರಕ್ತಸ್ರಾವವಾಗಿದೆ. ಸುದ್ದಿ ತಿಳಿದ ಸಮೀಪದ ಪೊಲೀಸ್ ಠಾಣೆಯ ಸಿಬ್ಬಂದಿಗಳು ಘಟನಾ ಸ್ಥಳಕ್ಕಾಗಮಿಸಿ ಇಬ್ಬರನ್ನು ಗೋಣಿಕೊಪ್ಪ ಆಸ್ಪತ್ರೆಗೆ ಸಾಗಿಸಿದ್ದಾರೆ. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಈ ವೇಳೆ ಓರ್ವ ವ್ಯಕ್ತಿ ಆಸ್ಪತ್ರೆಯಲ್ಲಿಯೇ ಸಾವನಪ್ಪಿದ್ದಾರೆ. ಮತ್ತೋರ್ವ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ಸಾಗಿಸುತ್ತಿರುವಾಗಲೇ ಮಾರ್ಗ ಮಧ್ಯೆ ಕೊನೆ ಉಸಿರೆಳೆದಿದ್ದಾರೆ.
ವೀರಾಜಪೇಟೆ ಡಿವೈಎಸ್ಪಿ ಮಹೇಶ್ ಕುಮಾರ್, ಗೋಣಿಕೊಪ್ಪ ಸಿಪಿಐ ಶಿವರಾಜ್ ಮುದೋಳ್, ಠಾಣಾಧಿಕಾರಿ ಪ್ರದೀಪ್ ಕುಮಾರ್ ಸ್ಥಳ ಪರಿಶೀಲನೆ ನಡೆಸಿದರು. ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಯ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕುಟುಂಬಸ್ಥರಿಗೆ ಮೃತದೇಹಗಳನ್ನು ಹಸ್ತಾಂತರ ಮಾಡಲಾಯಿತು.