ಮಡಿಕೇರಿ, ಫೆ. ೬: ೨೦೧೮-೧೯ನೇ ಸಾಲಿನ ಪ್ರಕೃತಿ ವಿಕೋಪದಲ್ಲಿ ವಾಸದ ಮನೆ ಹಾನಿಯಾದ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲು ನಿರ್ಮಿಸಿ, ಲಭ್ಯವಿರುವ ೨೫೨ ಮನೆಗಳ ಪೈಕಿ ೨೫೧ ಮನೆಗಳನ್ನು ಹಂಚಿಕೆ ಮಾಡಲಾಗಿದೆ.
ಆದೇಶದಂತೆ ಮನೆ ಹಂಚಿಕೆ ಮಾಡಲಾಗಿದ್ದ ಪ್ರಕರಣಗಳನ್ನು ಗ್ರಾಮ ಆಡಳಿತ ಅಧಿಕಾರಿಯವರ ವರದಿ, ಕಂದಾಯ ಪರಿವೀಕ್ಷಕರ ವರದಿ, ಅಭಿಯಂತರರ ವರದಿ, ಪೌರಾಯುಕ್ತರ ವರದಿ, ಹಿರಿಯ ಭೂ ವಿಜ್ಞಾನಿ-ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಅವರ ವರದಿ ಹಾಗೂ ತಹಶೀಲ್ದಾರರ ಪುನರ್ ಪರಿಶೀಲನಾ ವರದಿಯ ಆಧಾರದ ಮೇರೆಗೆ ೨೦೨೬ರ ಜನವರಿ ೩೦ ರಂದು ಸಭೆ ನಡೆಸಲಾಗಿದ್ದು, ೨೫೧ ಪ್ರಕರಣಗಳ ಬಗ್ಗೆ ಪ್ರತ್ಯೇಕವಾಗಿ ಸಂಬAಧಿಸಿದ ಎಲ್ಲಾ ಅಧಿಕಾರಿಗಳ ಸಮ್ಮುಖದಲ್ಲಿ ಚರ್ಚಿಸಲಾಗಿದೆ. ಈ ಸಂದರ್ಭದಲ್ಲಿ ಒಟ್ಟು ೧೩೬ ಅರ್ಹ ಫಲಾನುಭವಿ ಹಾಗೂ ೧೧೫ ಅನರ್ಹ ಫಲಾನುಭವಿಗಳನ್ನು ಗುರುತಿಸಲಾಗಿದೆ.
ಈ ಸಂಬAಧ ಆಯಾಯ ತಾಲೂಕು ತಹಶೀಲ್ದಾರ್ ಕಚೇರಿಗೆ ತಾ. ೧೩ ರವರೆಗೆ ಸಾರ್ವಜನಿಕ ಆಕ್ಷೇಪಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ (ಪುನರ್ವಸತಿ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.