ಸೋಮವಾರಪೇಟೆ, ಫೆ. ೫: ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ವಾರ್ಷಿಕ ಮಹಾಸಭೆ ಸ್ಥಳೀಯ ಕೊಡವ ಸಮಾಜ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಬಾಲಕೃಷ್ಣ ಪೂಜಾರಿ ವಹಿಸಿದ್ದರು. ಸಭೆಯಲ್ಲಿ ಸಂಘದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಲಾಯಿತು. ೨೦೨೭ಕ್ಕೆ ಸಂಘ ಸ್ಥಾಪನೆಯಾಗಿ ೫೦ ವರ್ಷ ಪೂರ್ಣಗೊಳ್ಳುತ್ತಿದ್ದು, ಸುವರ್ಣ ಸಂಭ್ರಮವನ್ನು ಅರ್ಥಪೂರ್ಣವಾಗಿ ನಡೆಸುವಂತೆ ತೀರ್ಮಾನಿಸಲಾಯಿತು.

ಕಾರು ನಿಲ್ದಾಣ, ವರ್ಕ್ಶಾಪ್ ಏರಿಯಾ ಹಾಗೂ ಟ್ರಾö್ಯಕ್ಟರ್ ಸ್ಟಾö್ಯಂಡ್ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಲಾಯಿತು. ೭೦ ವರ್ಷ ಮೇಲ್ಪಟ್ಟ ಸದಸ್ಯರ ವಾರ್ಷಿಕ ವಂತಿಕೆಯನ್ನು ಇಳಿಕೆ ಮಾಡುವಂತೆ, ಇದರೊಂದಿಗೆ ಅಂಗವಿಕಲರಾದವರು, ಕೆಲಸ ಮಾಡಲು ಅಶಕ್ತರಾದವರಿಗೆ ಸದಸ್ಯತ್ವ ವಂತಿಕೆಯ ನಿಯಮಗಳಲ್ಲಿ ಸಡಿಲಿಕೆ ಮಾಡುವಂತೆ ನಿರ್ಧರಿಸಲಾಯಿತು.

ನೂತನ ಸಾಲಿಗೆ ಆಡಳಿತ ಮಂಡಳಿ ರಚಿಸುವ ಬಗ್ಗೆ ಚರ್ಚೆ ನಡೆದು, ಕಳೆದ ಅವಧಿಯಲ್ಲಿ ಸಂಘದ ಕೆಲಸ ಕಾರ್ಯವನ್ನು ಉತ್ತಮವಾಗಿ ನಿರ್ವಹಿಸಿದ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ಅವರನ್ನು ಮತ್ತೊಂದು ಅವಧಿಗೆ ಅಧ್ಯಕ್ಷರನ್ನಾಗಿ ಮುಂದುವರೆಸುವAತೆ ಸಭೆ ತೀರ್ಮಾನಿಸಿತು. ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿ ಮಣಿ ಕುಶಾಲಪ್ಪ ಮಂಡಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ರಂಗಸ್ವಾಮಿ, ಖಜಾಂಚಿ ಡ್ಯಾನಿ ಡೊಮಿನಿಕ್, ಸಹಕಾರ್ಯದರ್ಶಿ ಎಂ.ಎA. ಕಿರಣ್, ಪದಾಧಿಕಾರಿಗಳಾದ ಎಸ್.ಎಂ. ಕೃಷ್ಣ, ಗೌರವಾಧ್ಯಕ್ಷ ಕೆ.ಜಿ. ಸುರೇಶ್, ಟಿ.ಕೆ. ರಮೇಶ್, ಎ.ಪಿ. ವೀರರಾಜು, ವಿನ್ಸಿ ಡಿಸೋಜ ಅವರುಗಳು ಉಪಸ್ಥಿತರಿದ್ದರು.