ಗೋಣಿಕೊಪ್ಪಲು, ಫೆ. ೫: ಮಕ್ಕಳ ಕಲಿಕೆಗಳಿಗೆ ಪೂರಕವಾಗಿ ಅಗತ್ಯವಿರುವ ಸಂಗೀತ ಪರಿಕರಗಳನ್ನು ನಿಯಮಾನುಸಾರ ಕೊಟೇಷÀನ್ ಕರೆದು ವಿತರಣೆ ಮಾಡುವಂತೆ ಮಕ್ಕಳ ಗ್ರಾಮ ಸಭೆಯು ನಿರ್ಣಯ ಕೈಗೊಂಡಿತು.

ಕಿರುಗೂರು ಗ್ರಾಮ ಪಂಚಾಯಿತಿಯ ಮಕ್ಕಳ ಗ್ರಾಮ ಸಭೆ ಗ್ರಾ.ಪಂ. ಅಧ್ಯಕ್ಷ ಚೆಪ್ಪುಡೀರ ಡಿ. ರಾಕೇಶ್ ಅಧ್ಯಕ್ಷತೆಯಲ್ಲಿ ಪಂಚಾಯಿತಿಯ ಸಭಾಂಗಣದಲ್ಲಿ ಜರುಗಿತು. ಸಭೆಯಲ್ಲಿ ಗ್ರಾಮದ ಕಿರುಗೂರು ಹಾಗೂ ಮತ್ತೂರು ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಮಕ್ಕಳ ಗ್ರಾಮ ಸಭೆಯಲ್ಲಿ ಗಮನ ಸೆಳೆದ ವಿದ್ಯಾರ್ಥಿಗಳು ಶಾಲೆಯ ವಿದ್ಯಾರ್ಥಿಗಳು, ನಲಿಕಲಿ ಕೊಠಡಿಯ ಬಾಗಿಲು ದುರಸ್ತಿ, ಮಕ್ಕಳ ಪಠ್ಯೇತರ ಚಟುವಟಿಕೆಗೆ ಅಗತ್ಯವಿರುವ ಸಂಗೀತ ಪರಿಕರಗಳು, ರಾಷ್ಟಿçÃಯ ಹಬ್ಬಗಳಲ್ಲಿ ವಿದ್ಯಾರ್ಥಿಗಳಿಗೆ ಬಳಸಬೇಕಾದ ಟೋಪಿಗಳು ಹಾಗೂ ಶಾಲೆಯ ಮುಂಭಾಗದ ರಸ್ತೆಯಲ್ಲಿ ಶಾಲೆ ಬಿಡುವ ಆರಂಭವಾಗುವ ಹಾಗೂ ಬಿಡುವ ವೇಳೆ ರಸ್ತೆಯಲ್ಲಿ ವಾಹನ ನಿಯಂತ್ರಿಸಲು ಬ್ಯಾರಿಕೇಡ್ ಅಳವಡಿಕೆ, ಶಾಲೆಯ ಆವರಣದಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸುವ ಸ್ವಚ್ಛತಾ ಕಾರ್ಯ ನಡೆಸುವಂತೆ ವಿದ್ಯಾರ್ಥಿಗಳು ಸಭೆಯಲ್ಲಿ ಗಮನ ಸೆಳೆದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ. ಅಧ್ಯಕ್ಷ ಚೆಪ್ಪುಡೀರ ಡಿ. ರಾಕೇಶ್ ಮಾತನಾಡಿ, ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ಪಂಚಾಯಿತಿ ವತಿಯಿಂದ ಅನುದಾನವನ್ನು ವರ್ಷಂಪ್ರತಿ ನೀಡಲಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಮಟ್ಟ ಕುಂಠಿತವಾಗುತ್ತಿದೆ. ಈ ಬಗ್ಗೆ ಅಧ್ಯಾಪಕ ವರ್ಗ ಮಕ್ಕಳ ದಾಖಲಾತಿ ಹೆಚ್ಚು ಮಾಡುವ ಪ್ರಯತ್ನ ಮಾಡಬೇಕು. ಯಾವುದೇ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತಗೊಳ್ಳಬಾರದು.

ಶಾಲೆಯ ನಲಿಕಲಿ ಕೊಠಡಿಯ ಬಾಗಿಲು ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತದೆ. ಶಾಲೆಯ ಆವರಣದಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು. ಶಾಲೆಯ ಮುಂಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಿದಲ್ಲಿ ಮುಂಜಾನೆ ಹಾಗೂ ಸಂಜೆಯ ವೇಳೆಯಲ್ಲಿ ಇದನ್ನು ನಿರ್ವಹಣೆ ಮಾಡುವ ಜವಾಬ್ದಾರಿ ಅಧ್ಯಾಪಕ ವೃಂದ ಮಾಡಿಕೊಳ್ಳಬೇಕು. ಶಾಲೆಯ ಬಳಿ ಸೂಚನಾ ಫಲಕಗಳನ್ನು ಅಳವಡಿಸಲಾಗುವುದು.

ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣ ಸದಾ ಇರಬೇಕು. ಅಗತ್ಯವಿದ್ದ ಸಂದರ್ಭದಲ್ಲಿ ಪಂಚಾಯಿತಿಯಲ್ಲಿ ಆಡಳಿತ ಮಂಡಳಿ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಭೇಟಿ ಮಾಡುವಂತೆ ತಿಳಿಸಿದರು.

ಮಕ್ಕಳ ಹಕ್ಕು, ಶಿಕ್ಷಣ, ಆರೋಗ್ಯ, ಮಕ್ಕಳ ಬೇಡಿಕೆಗಳನ್ನು ಚರ್ಚಿಸಲು ವಿದ್ಯಾರ್ಥಿಗಳು ಕ್ರೀಯಾಶೀಲರಾಗಿ ಪಾಲ್ಗೊಂಡಿದ್ದರು. ವರ್ಷಪ್ರತಿ ಶೈಕ್ಷಣಿಕ ಪ್ರವಾಸ ತೆರಳುವ ಸಂದರ್ಭ ಗ್ರಾಮ ಪಂಚಾಯಿತಿ ನೀಡುವ ಅನುದಾನದ ಬಗ್ಗೆ ವಿದ್ಯಾರ್ಥಿಗಳು ಶ್ಲಾಘನೆ ವ್ಯಕ್ತಪಡಿಸಿದರು.

ನೋಡಲ್ ಅಧಿಕಾರಿಯಾಗಿ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳಾದ ತೇಜರಾಜ ಅಲಸಬಾಳ ಆಗಮಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಸಿ.ಪಿ. ರೇಖಾ ಪೆಮ್ಮಯ್ಯ, ಕೆ.ಕೆ. ಲಲಿತ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎ.ಎ. ಶಫಿಕ್, ಕಾರ್ಯದರ್ಶಿ ಎ.ಪಿ. ರಾಧ, ಶಾಲೆಯ ಮುಖ್ಯೋಪ್ಯಾಧ್ಯಾಯರು, ಶಿಕ್ಷಕರು, ಪೊಲೀಸ್ ಅಧಿಕಾರಿ ಪಾಲ್ಗೊಂಡಿದ್ದರು.

ಶಾಲೆಯ ವಿದ್ಯಾರ್ಥಿನಿ ಪ್ರಾರ್ಥಿಸಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎ.ಎ. ಶಫಿಕ್ ಸ್ವಾಗತಿಸಿ, ಕಾರ್ಯದರ್ಶಿ ಎ.ಪಿ. ರಾಧ, ವಂದಿಸಿದರು.

ಪ್ರತಿನಿತ್ಯ ವಿದ್ಯಾರ್ಥಿಗಳು ಶಾಲೆಗೆ ಬರುವ ಸಂದರ್ಭ ಹಾಗೂ ತೆರಳುವ ಸಂದರ್ಭ ರಸ್ತೆಯ ನಿಯಮಗಳ ಬಗ್ಗೆ ವಿದ್ಯಾರ್ಥಿಗಳು ಪಾಲಿಸಬೇಕಾದ ಕರ್ತವ್ಯವನ್ನು ಪೊಲೀಸ್ ಅಧಿಕಾರಿಗಳು ಮಕ್ಕಳಿಗೆ ತಿಳಿಸಿದರು. ಮಕ್ಕಳ ಗ್ರಾಮ ಸಭೆ ನಂತರ ಮಹಿಳಾ ಗ್ರಾಮ ಸಭೆಯು ಜರುಗಿತು.