ಪೊನ್ನಂಪೇಟೆ, ಫೆ. ೫: ಪೊನ್ನಂಪೇಟೆ ತಾಲೂಕಿನ ಹರಿಹರ ಗ್ರಾಮದ ಶ್ರೀ ಬೆಟ್ಟಚಿಕ್ಕಮ್ಮ ದೇವಿಯ ಪುನರ್ ಪ್ರತಿಷ್ಠಾಪನಾ ಬ್ರಹ್ಮ ಕಲಶದ ೩ನೇ ವಾರ್ಷಿಕೋತ್ಸವ ನಡೆಯಿತು. ಬ್ರಹ್ಮಶ್ರೀ ವೇದಮೂರ್ತಿ ದಿನೇಶ್ ಬನ್ನಿಂತಾಯ ನೇತೃತ್ವದಲ್ಲಿ ವಿವಿಧ ಪೂಜಾ ವಿಧಿವಿಧಾನಗಳು ನಡೆದವು.
ಇದೇ ಸಂದರ್ಭ ಹರಿಹರ ಅಡ್ಡರಸ್ತೆಯಲ್ಲಿ ದೇವಿಯ ಹೆಸರಿನಲ್ಲಿ ನೂತನವಾಗಿ ಮಚ್ಚಮಾಡ ಮೀನಾ ಉತ್ತಯ್ಯ ಅವರು ತಮ್ಮ ಪತಿ ಮಚ್ಚಮಾಡ ದಿ. ಮಣಿ ಉತ್ತಯ್ಯ ಅವರ ಜ್ಞಾಪಕಾರ್ಥವಾಗಿ ನಿರ್ಮಿಸಿ ಕೊಟ್ಟಿರುವ ಮಹಾ ದ್ವಾರವನ್ನು ಉದ್ಘಾಟಿಸಲಾಯಿತು.
ಅತಿಥಿಗಳಾಗಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಗ್ರಾ.ಪಂ. ಸದಸ್ಯ ಮನ್ನೇರ ಎಸ್. ಅಜಿತ್, ಭದ್ರಕಾಳಿ ದೇವಸ್ಥಾನ ಸಮಿತಿ ಅಧ್ಯಕ್ಷ ಮನ್ನೇರ ಎ. ರಮೇಶ್ ಪಾಲ್ಗೊಂಡಿದ್ದರು.ದಾನಿಗಳು ಮತ್ತು ಅತಿಥಿಗಳನ್ನು ಬೆಟ್ಟ ಚಿಕ್ಕಮ್ಮ ದೇವಸ್ಥಾನ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.