ಕುಶಾಲನಗರ, ಫೆ. ೪: ಹೆಣ್ಣು ಭೋಗದ ವಸ್ತುವಲ್ಲ, ಅವಳು ಕುಟುಂಬಗಳನ್ನು ಬೆಳಗುವ, ಸಂಸ್ಕೃತಿ-ಸAಪ್ರದಾಯಗಳನ್ನು ಪೀಳಿಗೆಯಿಂದ ಪೀಳಿಗೆಗೆ ಜತನದಿಂದ ಕೊಂಡೊಯ್ಯುವ ಭಾಗ್ಯದ ದೇವತೆ ಎಂದು ಶಿಕ್ಷಕಿ ಮಾಲಾದೇವಿ ಹೇಳಿದರು.

ಕುಶಾಲನಗರ ಹಾಗೂ ಸೋಮವಾರಪೇಟೆ ತಾಲೂಕುಗಳ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಕುಶಾಲನಗರದ ಎ.ಪಿ.ಸಿ.ಎಂ.ಎಸ್ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ಕುಟುಂಬದ ಕ್ಷೇಮಕ್ಕಾಗಿ ಹಗಲಿರುಳು ದುಡಿಯುವ ಹೆಣ್ಣು ಸಂಸಾರದ ಕಣ್ಣು. ಮಹಿಳೆಯಿಲ್ಲದ ಕುಟುಂಬಗಳನ್ನು ಊಹಿಸಲೂ ಸಾಧ್ಯವಿಲ್ಲ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅನೇಕ ಜನಪರವಾದ ಯೋಜನೆಗಳು ಹಾಗೂ ಕಾರ್ಯಕ್ರಮ ಗಳಿಂದಾಗಿ ಹಳ್ಳಿಗಾಡು ಪ್ರದೇಶಗಳಲ್ಲಿ ಮಹಿಳೆಯರ, ಗ್ರಾಮೀಣರ ಬದುಕು ಹಸನಾಗಿದೆ. ಒಂದು ಸರ್ಕಾರ ಮಾಡಬೇಕಾದ ಸುಸ್ಥಿರ, ಸ್ವಸ್ಥ ಸಮಾಜ ಕಟ್ಟುವ ಕಾಯಕದಲ್ಲಿ ಧರ್ಮಸ್ಥಳ ಯೋಜನೆ ಮಾಡುತ್ತಿರುವುದು ಶ್ಲಾಘನೀಯ ಎಂದು ಮಾಲಾದೇವಿ ಹೇಳಿದರು.

ಸೋಮವಾರಪೇಟೆ ತಾಲೂಕು ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ ಯೋಜನೆಗಳ ಕುರಿತು ಮಾಹಿತಿ ನೀಡುತ್ತಾ, ಕುಶಾಲನಗರ ಹಾಗೂ ಸೋಮವಾರಪೇಟೆ ತಾಲೂಕಿನ ವ್ಯಾಪ್ತಿಗಳಲ್ಲಿ ೧,೮೪೯ ಸಂಘಗಳಿದ್ದು ೧೭,೨೯೪ ಸದಸ್ಯರಿದ್ದಾರೆ.

ಸದಸ್ಯರಿಗೆ ೧.೧೪ ಕೋಟಿ ರೂಗಳ ಪ್ರಗತಿನಿಧಿ ವಿತರಿಸಲಾಗಿದೆ. ‘ನಮ್ಮೂರ ಕೆರೆ’ಗಳ ಯೋಜನೆಯಲ್ಲಿ ೫ ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ೬೭ ಮಂದಿ ನಿರ್ಗತಿಕ ಕುಟುಂಬಗಳಿಗೆ ಮಾಸಾಶನ ನೀಡಲಾಗುತ್ತಿದೆ. ೧೧೪ ದೇವಾಲಯಗಳನ್ನು ಜೀರ್ಣೊದ್ಧಾರ ಗೊಳಿಸಲಾಗಿದೆ. ೫೭೦ ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ಸ್ವಚ್ಛ ಮಾಡ ಲಾಗಿದೆ. ೮೪೫ ಲಕ್ಷ ರೂಪಾಯಿಗಳ ಸುಜ್ಞಾನ ನಿಧಿ ನೀಡಲಾಗಿದೆ ಎಂದು ಸಮಗ್ರ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭೂಮಿಕ ಮಹಿಳಾ ಒಕ್ಕೂಟದ ಅಧ್ಯಕ್ಷೆ ಫಿಲೋಮಿನಾ ಮಾತನಾಡಿ, ಮಹಿಳೆಯರ ಸಬಲೀಕರಣ ಯೋಜನೆಯ ಉದ್ದೇಶವಾಗಿದ್ದು ಧರ್ಮಸ್ಥಳ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಕರೆಕೊಟ್ಟರು.

ಯೋಜನೆಯ ಪ್ರಮುಖರಾದ ವಿ.ಡಿ ಪುಂಡರೀಕಾಕ್ಷ, ಕುಶಾಲನಗರ ಎ.ಪಿ.ಸಿ.ಎಂ.ಎಸ್ ಅಧ್ಯಕ್ಷೆ ಹೆಬ್ಬಾಲೆ ಚಂದ್ರಕಲಾ ಮಾತನಾಡಿದರು. ಧರ್ಮಸ್ಥಳ ಯೋಜನೆಯ ಮೇಲ್ವಿಚಾರಕ ನಾಗರಾಜು, ಸೇವಾ ಪ್ರತಿನಿಧಿಗಳಾದ ಗಣೇಶ್, ಲೀಲಾ, ಶೈಲ, ಜಯಲಕ್ಷಿö್ಮ, ನಿರ್ಮಲ ಮೊದಲಾದವರಿದ್ದರು.