ಕೂಡಿಗೆ, ಫೆ. ೪: ಕೂಡಿಗೆ ಸೈನಿಕ ಶಾಲೆ, ಕೊಡಗಿನ ಎನ್‌ಸಿಸಿ ಸೀನಿಯರ್ ಡಿವಿಷನ್ ಘಟಕದ ೨೩ ವಿದ್ಯಾರ್ಥಿಗಳ ದಳ, ಮಡಿಕೇರಿಯಲ್ಲಿ ನಡೆದ ಗಣರಾಜ್ಯೋತ್ಸವ ಆಚರಣೆ ಸಂದರ್ಭ ಪ್ರದರ್ಶಿಸಿದ ಅತ್ಯುತ್ತಮ ಪೆರೇಡ್ ಪ್ರದರ್ಶನಕ್ಕಾಗಿ ‘ಉತ್ತಮ ದಳ’ ಟ್ರೋಫಿ ಪಡೆದುಕೊಂಡಿದೆ. ಈ ಮೂಲಕ ಸತತ ೩ ವರ್ಷ ಈ ಪಾರಿತೋಷಕವನ್ನು ತಮ್ಮದಾಗಿಸಿಕೊಂಡಿದೆ.
ಪೆರೇಡ್‌ನಲ್ಲಿನ ಅತ್ಯುತ್ತಮ ಸಾಧನೆಗಾಗಿ ನೀಡಲಾದ ‘ಪೆರೇಡ್ ಶ್ರೇಷ್ಠತೆ ಟ್ರೋಫಿ’ಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಸಣ್ಣ ನೀರಾವರಿ ಸಚಿವರಾದ ಎನ್.ಎಸ್ ಬೋಸರಾಜು ಅವರು ಮಡಿಕೇರಿಯಲ್ಲಿ ನಡೆದ ಸಮಾರಂಭದಲ್ಲಿ ಶಾಲೆಯ ದಳಕ್ಕೆ ಪ್ರದಾನ ಮಾಡಿದರು.