ಕೂಡಿಗೆ, ಫೆ. ೪: ಸಿ.ಐ.ಟಿ.ಯು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಹಿನ್ನಲೆ ಪೂರ್ವಭಾವಿ ಸಭೆ ಕೂಡ್ಲೂರಿನಲ್ಲಿ ನಡೆಯಿತು. ಸಿ.ಐ.ಟಿ.ಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್.ಭರತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾರ್ಮಿಕ ನೀತಿ, ನಿಯಮಗಳು ಯಾವುದೇ ಸರಕಾರ ಪುಕ್ಕಟೆಯಾಗಿ ನೀಡಿರುವಂತಹದಲ್ಲ. ಅವು ದುಡಿಯುವ ವರ್ಗದ ಸಂವಿಧಾನ ಬದ್ಧ ಹಕ್ಕುಗಳು. ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕಿರುವುದು ಸರಕಾರದ ಆದ್ಯ ಕರ್ತವ್ಯ. ಅದನ್ನು ಮರೆತ ಸರಕಾರದ ವಿರುದ್ಧ ಸಮರ ಸಾರುವ ಮೂಲಕ ನಮ್ಮ ಹಕ್ಕುಗಳನ್ನು ಪ್ರತಿಪಾದಿಸುವ ಪರಿಸ್ಥಿತಿ ಬಂದೊದಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಕಾರ್ಮಿಕ ಕಾನೂನುಗಳ ಮೇಲೆ ಕೇಂದ್ರ ಸರಕಾರ ಗದಪ್ರಹಾರ ನಡೆಸುವ ಮೂಲಕ ಸಡಿಲಗೊಳಿಸುವ ಪ್ರಯತ್ನ ನಡೆಯುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಮಡಿಕೇರಿಯಲ್ಲಿ ತಾ.೧೨ ರಂದು ನಡೆಯುವ ಹೋರಾಟದಲ್ಲಿ ಕಾಫಿ ವರ್ಕ್ಸ್ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.

ಸಿ.ಐ.ಟಿ.ಯು ಜಿಲ್ಲಾಧ್ಯಕ್ಷ ಎ.ಸಿ ಸಾಬು ಮಾತನಾಡಿ, ಸ್ವಾತಂತ್ರ‍್ಯ ಪೂರ್ವದಲ್ಲಿ ಬ್ರಿಟಿಷರ ಕಪಿಮುಷ್ಠಿಯಲ್ಲಿ ನಲುಗಿ ಸ್ವಾತಂತ್ರ‍್ಯ ಬಂದ ನಂತರವೂ ಪರಿಸ್ಥಿತಿ ಬದಲಾವಣೆಯಾಗಿಲ್ಲ. ಪ್ರಜಾಪ್ರಭುತ್ವದಲ್ಲಿ ಮತ ಪಡೆದು ಅಧಿಕಾರಕ್ಕೆ ಬಂದವರಿAದ ಶೋಷಣೆ ಮುಂದುವರೆದಿದೆ. ಕನಿಷ್ಟ ವೇತನಕ್ಕೆ ಶ್ರಮಿಕ ವರ್ಗ ಅಂಗಲಾಚುವ ಪರಿಸ್ಥಿತಿ ನಿರ್ಮಾಣಗೊಂಡಿರುವುದು ಶೋಚನೀಯ ಸಂಗತಿ. ನಮ್ಮೆಲ್ಲರ ಬೇಡಿಕೆಗಳ ಈಡೇರಿಕೆಗೆ ಸಂಘಟನೆ, ನಿರಂತರ ಹೋರಾಟ ಅತ್ಯಗತ್ಯ ಎಂದರು.

ಅAಗನವಾಡಿ ನೌಕರರ ಸಂಘದ ಅಧ್ಯಕ್ಷೆ ಜಮುನಾ ಮಾತನಾಡಿದರು. ಸಿ.ಐ.ಟಿಯು ಇಂಡಸ್ಟಿçಯಲ್ ಏರಿಯಾ ಕಾರ್ಮಿಕ ಘಟಕದ ಅಧ್ಯಕ್ಷ ಮಂಜು ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಕೂಡಿಗೆ ಮತ್ತು ಕೂಡುಮಂಗಳೂರು ಕಾಂಕ್ರೀಟ್ ಕಾರ್ಮಿಕರು ಸದಸ್ಯತ್ವ ಪಡೆದುಕೊಂಡು ಸಂಘಟನೆಗೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಕೂಡುಮಂಗಳೂರು ಗ್ರಾಮ ಪಂಚಾಯತಿ ಸದಸ್ಯೆ ಗೌರಮ್ಮ, ಕಾರ್ಯದರ್ಶಿ ಶಾಂತಾ ಇದ್ದರು. ಕೂಡ್ಲೂರಿನ ವಿವಿಧ ಕಾಫಿ ಕ್ಯೂರಿಂಗ್ ವರ್ಕ್ಸ್ನ ಮಹಿಳಾ ಕಾರ್ಮಿಕರು, ಕಟ್ಟಡ ಕಾರ್ಮಿಕರು ಪಾಲ್ಗೊಂಡಿದ್ದರು.