ಮಡಿಕೇರಿ, ಫೆ. ೪: ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾದಾಪುರದಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ ಹಾಗೂ ಸೇವನೆ ಮಾಡುತ್ತಿದ್ದ ಸಂದರ್ಭ ದಾಳಿ ನಡೆಸಿದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಕಳೆದ ತಾ. ೧ ರಂದು ದಾಳಿ ನಡೆಸಲಾಗಿದ್ದು, ಮಾದಾಪುರದ ಎಂ.ಸಿ. ಅಶೋಕ್ (೨೧), ಮಡಿಕೇರಿ ಹೊಸ ಬಡಾವಣೆಯ ಪಿ.ಎಲ್. ತ್ರಿಶೂಲ್ (೨೦), ಮಡಿಕೇರಿಯ ನಿತ್ಯ ಎಂ.ಸಿ. (೨೦), ಸುಳ್ಯ ಜಾಲ್ಸೂರುವಿನ ಕೆ.ಆರ್. ದಿನೇಶ್ (೨೨) ಅವರುಗಳನ್ನು ಬಂಧಿಸಿ ಬಂಧಿತರಿAದ ೭೫೩ ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾ ಲಯಕ್ಕೆ ಹಾಜರುಪಡಿಸಲಾಗಿದೆ.

ಎಸ್‌ಪಿ ಬಿಂದುಮಣಿ ಮಾರ್ಗದರ್ಶನದಲ್ಲಿ, ಸೋಮ ವಾರಪೇಟೆ ಡಿವೈಎಸ್‌ಪಿ ಚಂದ್ರಶೇಖರ್, ಶನಿವಾರಸಂತೆ ಇನ್ಸ್ಪೆಕ್ಟರ್ ಕೃಷ್ಣರಾಜು, ಮಡಿಕೇರಿ ನಗರ ವೃತ್ತ ಸಿಪಿಐ ಪಿ.ಕೆ. ರಾಜು, ಶನಿವಾರದಂತೆ ಪಿಎಸ್‌ಐ ಗೋವಿಂದರಾಜು, ಸುಂಟಿಕೊಪ್ಪ ಪಿಎಸ್‌ಐ ಮೋಹನ್ ರಾಜು, ಸೋಮವಾರಪೇಟೆ ಪಿಎಸ್‌ಐ ಓಪಾಲ, ಡಿಸಿಆರ್‌ಬಿಯ ಯೋಗೇಶ್, ನಿರಂಜನ್ ತನಿಖಾ ತಂಡದಲ್ಲಿದ್ದರು.

ಶನಿವಾರಸಂತೆ: ಮತ್ತೊಂದು ಪ್ರಕರಣದಲ್ಲಿ ಪಟ್ಟಣದ ಪೊಲೀಸ್ ಠಾಣೆಗೆ ಸಮೀಪದ ಕೊಡ್ಲಿಪೇಟೆ ಸುತ್ತಮುತ್ತ ಗಾಂಜಾ ಮಾರಾಟ ನಡೆಯುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಅನ್ವಯ ವೃತ್ತ ನಿರೀಕ್ಷಕ ಜಿ. ಕೃಷ್ಣರಾಜ್ ನೇತೃತ್ವದಲ್ಲಿ

೪ಆರನೇ ಪುಟಕ್ಕೆ

ಸಿಬ್ಬಂದಿ ತ್ವರಿತ

ಕಾರ್ಯಾಚರಣೆ ನಡೆಸಿ ಆರೋಪಿ ಶಾಂತಪುರ ಗ್ರಾಮದ ನಿವಾಸಿ ಭರತ್‌ನನ್ನು ಬಂಧಿಸಿ, ಆತನಿಂದ ೮೫೦ ಗ್ರಾಂ ಗಾಂಜಾ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ

ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಗಳಾದ ಹರ್ಷ, ಮಹೇಶ್, ಮುನಾವರ್, ಪಾಷ, ಕೊಡ್ಲಿಪೇಟೆ ಉಪ ಪೊಲೀಸ್ ಠಾಣೆಯ ಎಎಸ್‌ಐ ಸುರೇಶ್, ವಿಶ್ವ, ರಂಜಿತ್ ಹಾಗೂ ವೆಂಕಟೇಶ್ ಪಾಲ್ಗೊಂಡಿದ್ದರು.