ಮಡಿಕೇರಿ, ಫೆ. ೪: ಕರ್ನಾಟಕ ಬಾಲವಿಕಾಸ ಅಕಾಡೆಮಿ-ಧಾರವಾಡ, ವತಿಯಿಂದ ೨೦೨೪ ಹಾಗೂ ೨೦೨೫ ಸಾಲಿನಲ್ಲಿ ರಚಿಸಲ್ಪಟ್ಟ ಪುಸ್ತಕಗಳಿಗೆ ‘ಮಕ್ಕಳ ಪುಸ್ತಕ ಚಂದಿರ’ ಪ್ರಶಸ್ತಿಯನ್ನು ಪ್ರದಾನ ಮಾಡುವ ಉದ್ದೇಶದಿಂದ ೨೦೨೪-೨೫ನೇ ಸಾಲಿನ ಜನವರಿಯಿಂದ ಡಿಸೆಂಬರ್ ತಿಂಗಳ ಅಂತ್ಯದ ಅವಧಿಯಲ್ಲಿ ಪ್ರಕಟಗೊಂಡ ಸ್ವರಚಿತ ಕವನ ಸಂಕಲನ, ಕಥ ಸಂಕಲನ, ನಾಟಕ, (ಪಠ್ಯಾಧಾರಿತ ಬಿಟ್ಟು) ಮಕ್ಕಳ ಕಾದಂಬರಿ, ವೈಜ್ಞಾನಿಕ ಲೇಖನಗಳ ಸಂಕಲನ, ಅನುವಾಧಿತ ಕೃತಿ, ಮಕ್ಕಳ ಸಾಹಿತ್ಯ ವಿಮರ್ಷ ಕೃತಿ, ಒಟ್ಟು ಏಳು ಪ್ರಕಾರದ ಮಕ್ಕಳ ಸಾಹಿತ್ಯ ಕೃತಿಗಳನ್ನು ಆಹ್ವಾನಿಸಲಾಗಿದ್ದು, ಪ್ರಶಸ್ತಿಗಾಗಿ ತಮ್ಮ ಸ್ವಯಂ ದೃಢೀಕೃತ ನಕಲು ದಾಖಲೆಗಳೊಂದಿಗೆ ಹಾಗೂ ಸ್ವವಿವರ ಒಳಗೊಂಡ ಮನವಿಯೊಂದಿಗೆ ತಾ.೨೦ ರೊಳಗೆ ಅಕಾಡೆಮಿಯ ಕೇಂದ್ರ ಕಚೇರಿ ವಿಳಾಸಕ್ಕೆ ಪೋಸ್ಟ್ ಮುಖಾಂತರ ತಲುಪುವಂತೆ ಕಳುಹಿಸುವುದು. ನಂತರ ಬಂದ ಪುಸ್ತಕ ಪರಿಗಣಿಸಲಾಗುವುದಿಲ್ಲ. ಅರ್ಜಿ ನಮೂನೆ ಉಪ ನಿರ್ದೇಶಕರ ಕಚೇರಿ, ಮಹಿಳಾ ಮತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಡಗು ಜಿಲ್ಲೆ, ಮಡಿಕೇರಿ ಇಲ್ಲಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ ೦೮೨೭೨-೨೨೮೦೧೦ಗೆ ಸಂಪರ್ಕಿಸಬಹುದು.

ಕೇAದ್ರ ಕಚೇರಿ ವಿಳಾಸ: ಮಾನ್ಯ ಯೋಜನಾಧಿಕಾರಿಗಳು, ಚಂದ್ರಿಕಾ ಲೇಔಟ್ ಹಿಂಭಾಗ ಕೆ.ಎಚ್.ಬಿ ಕಾಲೋನಿ, ಲಕಮನಹಳ್ಳಿ ಧಾರವಾಡ-೫೮೦೦೦೪ ದೂರವಾಣಿ ಸಂಖ್ಯೆ ೦೮೩೬-೨೪೬೫೪೯೦ ಹೆಚ್ಚಿನ ಮಾಹಿತಿಗೆ ದೂ.ಸಂ.೮೦೫೦೩೯೨೨೦೯, ೭೨೦೪೩೯೬೨೭೫, ೯೪೪೮೯೮೧೯೪೪ ಅನ್ನು ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.